ಬೆಂಗಳೂರು: ಸ್ಯಾಂಡಲ್ವುಡ್ನಿನಿಂದ ಸಾಲು ಸಾಲು ಒಳ್ಳೊಳ್ಳೆ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಅದ್ರಲ್ಲಿ ಮೋಸ್ಟ್ ಟಾಕ್ ಲಿಸ್ಟ್ನಲ್ಲಿರೋ ಚಿತ್ರ ಅಂದ್ರೆ "ಅಬ್ಬರ ". ಟೈಟಲ್ ಕೇಳಿದ್ರೇನೆ ಈ ಚಿತ್ರ ದಲ್ಲಿ ಭರ್ಜರಿ ಅಬ್ಬರವಿರೋದು ಅರ್ಥವಾಗುತ್ತಿದೆ. ಅಬ್ಬರ ಸಿನಿಮಾ ನವೆಂಬರ್ 18 ರಂದು ತೆರೆ ಮೇಲೆ ಅಬ್ಬರಿಸಿ ನಿಮ್ಮ ಮನಸ್ಸನ್ನ ರಂಗೇರಿಸಲು ಸಜ್ಜಾಗಿದೆ.
ಜನಪ್ರಿಯ ಡೈರೆಕ್ಟರ್ ರಾಮ್‌ನಾರಾಯಣ್ ಅವರು ಇದೀಗ ಪ್ರಜ್ವಲ್ ದೇವರಾಜ್ ಜೊತೆ ಸೇರಿ 'ಅಬ್ಬರ' ಚಿತ್ರವನ್ನು ಮಾಡಿದ್ದಾರೆ. ಸಿ & ಎಂ ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, 'ಅಬ್ಬರ' ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ.
ಇದನ್ನೂ ಓದಿ- Amitabh Bachchan : ಜಯಾ ಬಚ್ಚನ್‌ಗೆ ಮದುವೆಗೂ ಮುನ್ನ ಅಮಿತಾಬ್ ಹಾಕಿದ್ರಂತೆ ಈ ಕಂಡೀಷನ್!
ನಟ ಪ್ರಜ್ವಲ್ ದೇವರಾಜ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಈ ಹಿಂದೆ 'ಸಾಗರ್' ಚಿತ್ರದಲ್ಲಿ ಮೂವರು ನಾಯಕಿಯರ ಜೊತೆಗೆ ಡ್ಯುಯೆಟ್ ಹಾಡಿದ್ದ ಪ್ರಜ್ಜು ಇದೀಗ 'ಅಬ್ಬರ' ಚಿತ್ರದಲ್ಲಿ ಮತ್ತೆ ಮೂವರು ನಾಯಕಿಯರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಪ್ರಜ್ವಲ್‌ಗೆ ನಾಯಕಿಯರಾಗಿ ಲೇಖಾ ಚಂದ್ರ, ನಿಮಿಕಾ ರತ್ನಾಕರ್, ರಾಜಶ್ರೀ ಪೊನ್ನಪ್ಪ ನಟಿಸಿದ್ದಾರೆ.
ಇದೀಗ ಮೊನ್ನೆಮೊನ್ನೆಯಷ್ಟೇ ರಿಲೀಸ್ ಆಗಿರೋ ಅಬ್ಬರದ ಟ್ರೇಲರ್ ಜನಮನಸೂರೆಗೊಂಡಿದೆ. ಪ್ರಜ್ವಲ್ ಆಕ್ಷನ್, ಲುಕ್ ಮತ್ತು ಪಂಚಿಂಗ್ ಡೈಲಾಗ್ ಗೆ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಟ್ರೀಲರ್ರೆ ಈ ರೇಂಜ್ಗೆ ಧೂಳೆಬ್ಬಿಸಿದೆ ಅಂದ್ರೆ ಇನ್ನು ಸಿನಿಮಾ ಹೆಂಗೇ ಬಿರುಗಾಳಿ ಸೃಷ್ಟಿಸಬೋದು ಅನ್ನೋ ಲೆಕ್ಕಾಚಾರ ಜೋರಾಗೆ ನಡೆಯಿತ್ತಿದೆ.
ಇದನ್ನೂ ಓದಿ- Banaras: ‘ಬನಾರಸ್’ ಸಿನಿಮಾ ವೀಕ್ಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಎಳೆ ಚಿತ್ರದಲ್ಲಿದೆ. ಅದು ಚಿತ್ರದ ಕೊನೆವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ಮೂವರು ನಾಯಕಿಯರ ಜೊತೆಗೂ 3 ಗೆಟಪ್‌ಗಳಲ್ಲಿ ಪ್ರಜ್ವಲ್ ನಿಮ್ಮನ್ನ ಮೋಡಿ ಮಾಡಲಿದ್ದಾರೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಈ ಚಿತ್ರದ ಸಂದೇಶ' ಅಂತ ಹೇಳಲಾಗುತ್ತಿದೆ. ಸೋ ನವೆಂಬರ್ 18ಕ್ಕೆ ಅಬ್ಬರ ಸಿನಿಮಾ ನೋಡಲು ನೀವೂ ರೆಡಿಯಾಗಿರಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.