ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ಹೀರೋ, ಚಿಟ್ಟೆ ಖ್ಯಾತಿಯ ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸ್ತಿರುವ Love...ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೇ 4 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇಂಟ್ರೊಡಕ್ಷನ್ ಫೈಟ್ ಸೀನ್ ಚಿತ್ರೀಕರಣ ಕಂಪ್ಲೀಟ್ ಆಗಿದೆ.  


COMMERCIAL BREAK
SCROLL TO CONTINUE READING

ಇದನ್ನು ಓದಿ: ಸಾಕಷ್ಟು ಕುತೂಹಲ ಮೂಡಿಸಿರುವ "ಶುಗರ್ ಫ್ಯಾಕ್ಟರಿ"..!


Love..ಲಿ ಸಿನಿಮಾದ ಇಂಟ್ರೊಡಕ್ಷನ್ ಫೈಟ್ ಸೀನ್ಸ್, ಸಖತ್ ಅದ್ಧೂರಿಯಾಗಿ ಮೂಡಿಬಂದಿದೆ. ವಸಿಷ್ಠ, ಸುಧಿ, ಶೋಭರಾಜ್ ಹಾಗೂ ವರದ ಈ ದೃಶ್ಯದಲ್ಲಿ ಅಬ್ಬರಿಸಿದ್ದಾರೆ. ವಿಶೇಷ ಅಂದ್ರೆ ವಸಿಷ್ಠ ಹಿಂದೆಂದೂ ಕಾಣದ ರೀತಿಯಲ್ಲಿ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಇದರ ಜೊತೆಗೆ ರೋಪ್‌ಗಳನ್ನು ಕಡಿಮೆ ಬಳಕೆ ಮಾಡಿ ರಿಸ್ಕ್ ಶಾಟ್‌ಗಳನ್ನು ತೆಗೆದಿದ್ದಾರೆ.


ಈ ಸಿನಿಮಾದಲ್ಲಿ ಟ್ರಿನಿಟಿ ಎಂಬ ಹೊಸ ಉಪಕರಣ ಬಳಸಿ 360 ಡಿಗ್ರಿ ಆಂಗಲ್‌ನಲ್ಲಿಯೂ ಶೂಟಿಂಗ್ ಮಾಡಲಾಗಿದೆ‌. ಸಖತ್ ರಿಚ್ ಆಗಿ ಮೂಡಿ ಬಂದಿರುವ ಇಂಟ್ರೊಡಕ್ಷನ್ ಫೈಟ್ ಸೀನ್‌ಗೆ ಡ್ಯಾನಿ ಮಾಸ್ಟರ್ 40ರಿಂದ 50 ಫೈಟರ್‌ಗಳನ್ನು ಬಳಕೆ ಮಾಡಿಕೊಂಡಿದ್ದಾರೆ.  


ಮೇ 21ಕ್ಕೆ ವಸಿಷ್ಠ ಫಸ್ಟ್ ಲುಕ್ ರಿಲೀಸ್:  ʼLove..ಲಿʼ‌ ಅಂಗಳದಿಂದ ಮತ್ತೊಂದು ನಯಾ ಖಬರ್ ಹೊರ ಬಂದಿದೆ. ಇದೇ ತಿಂಗಳ 21 ರಂದು ವಸಿಷ್ಠ ಸಿಂಹ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.  


ಇದನ್ನು ಓದಿ: 'ಕೆಜಿಎಫ್ 3 ನಲ್ಲಿ ಮಾರ್ವೆಲ್ ರೀತಿಯ ಜಗತ್ತು ಸೃಷ್ಟಿಯಾಗಲಿದೆ'


Love..ಲಿ ಸಿನಿಮಾ ಒಂದು ಕಮರ್ಷಿಯಲ್‌, ರೊಮ್ಯಾಂಟಿಕ್‌ ಲವ್‌ ಸ್ಟೋರಿ ಚಿತ್ರವಾಗಿದ್ದು, ರೊಮ್ಯಾಂಟಿಕ್ ಲವ್‌ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರವನ್ನು ಒಳಗೊಂಡಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಟ ಸಿಂಹ ಜೊತೆಯಲ್ಲಿರುವ ಮಫ್ತಿ ನಿರ್ದೇಶಕ ನರ್ತನ್‌ ಜೊತೆ ಕೆಲಸ ಮಾಡಿ ಚೇತನ್‌ ಕೇಶವ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎಂ ಆರ್‌ ರವೀಂದ್ರ ಕುಮಾರ್‌ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅಶ್ವಿನ್ ಕೆನಡಿ ಕ್ಯಾಮೆರಾ, ಹರೀಶ್‌ ಕೊಮ್ಮೆ ಸಂಕಲನ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.