ನವದೆಹಲಿ: 'ಮೋದಿ ಸರ್ಕಾರಕ್ಕೆ ಸಂದೇಶ ರವಾನಿಸಲೆಂದೇ ನಾವು ಇಲ್ಲಿಗೆ ಬಂದಿದ್ದು. ನಮ್ಮ ಕೆಲಸ ಮುಗಿದಿದೆ. ನಾವೀಗ ಹಿಂದಿರುಗುತ್ತೇವೆ' ದಿಲ್ಲಿಯಲ್ಲಿ ಕೆಂಪುಕೋಟೆಗೆ ಮುತ್ತಿಗೆ ಹಾಕಿರುವ ರೈತರು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಿದು.


COMMERCIAL BREAK
SCROLL TO CONTINUE READING

ಸರ್ಕಾರ ನಮ್ಮನ್ನು ತಡೆಯಲು ಪ್ರಯತ್ನಿಸಿದರೂ, ನಾವು ಕೆಂಪು ಕೋಟೆ ತಲುಪಲು ಸಾಧ್ಯವಾಗಿದೆ. ನಾವು ನಮ್ಮ ಗುರಿಯನ್ನು ತಲುಪುವವರೆಗೆ ನಾವು ನಿಲ್ಲುವುದಿಲ್ಲ. ಹೊಸ ಮೂರು ಕೃಷಿ ಕಾನೂನುಗಳನ್ನು ರದ್ದುಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಮತ್ತೊಬ್ಬ ರೈತ(Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ.


Farmer's Tractor Rally : ಪೊಲೀಸರೊಂದಿಗೆ ಘರ್ಷಣೆ ; ಕೆಂಪು ಕೋಟೆಗೆ ರೈತರ ಮುತ್ತಿಗೆ


ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಮಾಡುವಂತೆ ಕಳೆದ ಎರಡು ತಿಂಗಳಿಂದ ದಿಲ್ಲಿಯ ಗಡಿಯಲ್ಲಿ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಸರಕಾರ ರೈತರಿಗೆ ಮನವಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದ ಕಾರಣ ಗಣರಾಜ್ಯೋತ್ಸವ ದಿನದಂದು ತಾಳ್ಮೆಗೆಟ್ಟು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ.


JEEVAN RAKSHA PADAK: ಜೀವನ ರಕ್ಷಾ ಪದಕ ಪಡೆದವರ ಪೂರ್ಣ ಪಟ್ಟಿ


ರೈತರ ಪ್ರತಿಭಟನೆ ಭುಗಿಲೆದ್ದು, ರೈತರು - ಪೊಲೀಸರು ನಡುವೆ ಘರ್ಷಣೆ ಉಂಟಾಗಿದೆ. ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿಪ್ರಹಾರ ನಡೆಸಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ, ಘಟನೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ. ಇಷ್ಟಾದರೂ ಜಗ್ಗದ ರೈತರು ದೆಹಲಿಯ ಹೃದಯ ಭಾಗ ತಲುಪಿದ್ದು, ಕೆಂಪು ಕೋಟೆಗೆ ಮುತ್ತಿಗೆ ಹಾಕಿ ರೈತ ಧ್ವಜ ಹಾರಿಸಿದ್ದಾರೆ.


KVS Recruitment 2021: ಕೇಂದ್ರೀಯ ವಿದ್ಯಾಲಯದಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.