ನವದೆಹಲಿ : ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ (Farmer protest) ಉಗ್ರ ಸ್ವರೂಪ ಪಡೆಯುತ್ತಿದೆ. ರೈತರ ಟ್ರ್ಯಾಕ್ಟರ್ ಪರೇಡ್ (Kisaan tractor parade) ದೆಹಲಿ ಕೆಂಪು ಕೋಟೆಯನ್ನು ತಲುಪಿದೆ. ಐಟಿಒ ಬಳಿ ದೆಹಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯ ಬಳಿಕ ಕೆಂಪು ಕೊಟೆ (Delhi Red Fort) ತಲುಪುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ. ಈ ನಡುವೆ, ಪ್ರತಿಭಟನಾಕಾರರು ತಮ್ಮ ಧ್ವಜವನ್ನು(Khalsa flag) ಕೆಂಪು ಕೋಟೆಯಲ್ಲಿ ಹಾರಿಸಿದ್ದಾರೆ. ಅಲ್ಲದೆ ಕಾಯ್ದೆಯ ವಿರುದ್ಧ ಪ್ರತಿಭಟನಾಕಾರರು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಕೆಂಪುಕೋಟೆಯಲ್ಲಿ (RedFort) ತ್ರಿವರ್ಣ ಧ್ವಜವನ್ನು ಹೊರತು ಪಡಿಸಿ ಬೇರೆ ಯಾವುದೇ ಧ್ವಜವನ್ನು ಹಾರಿಸುವಂತಿಲ್ಲ. ರೈತರು (Farmers) ಹಾರಿಸಿದ ಧ್ವಜವನ್ನು ಕೆಳಗಿಳಿಸಲು ಪೊಲೀಸರು (Police)ಯತ್ನಿಸಿದ್ದಾರೆ.
#WATCH A protestor hoists a flag from the ramparts of the Red Fort in Delhi#FarmLaws #RepublicDay pic.twitter.com/Mn6oeGLrxJ
— ANI (@ANI) January 26, 2021
ಇದನ್ನೂ ಓದಿ : Farmers Tractor Parade: ಹಿಂಸಾತ್ಮಕ ರೂಪ ತಳೆದ ರೈತರ ಪ್ರತಿಭಟನೆ, ಇಲ್ಲಿವೆ ಚಿತ್ರಗಳು
ಇದಕ್ಕೂ ಮೊದಲು ಐಒಟಿ ಬಳಿ ಪ್ರತಿಭಟನಾಕಾರರು (Protest) ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆ ವೇಳೆ, ಪ್ರತಿಭಟನಾಕಾರರು ಪೊಲೀಸರ ಮೇಲೆ ತಲವಾರು ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಘರ್ಷಣೆಯ ವೇಳೆ ಅನೇಕ ಪೊಲೀಸರು ಗಾಯಗೊಂಡಿದ್ದಾರೆ. ಘರ್ಷಣೆ ವೇಳೆ ದೆಹಲಿ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಇದಾದ ನಂತರ ಪ್ರತಿಭಟನಾಕಾರರು ಮತ್ತಷ್ಟು ಉದ್ರಿಕ್ತರಾದರು. ರೈತರು ಪೊಲೀಸರ ಮೇಲೆ ಟ್ರ್ಯಾಕ್ಟರ್ (Tractor) ಹತ್ತಿಸುವ ಯತ್ನವನ್ನೂ ಮಾಡಿದ್ದಾರೆ.
#WATCH Violence continues at ITO in central Delhi, tractors being driven by protestors deliberately try to run over police personnel pic.twitter.com/xKIrqANFP4
— ANI (@ANI) January 26, 2021
ಶಾಂತಿಪೂರ್ವಕವಾಗಿಯೇ ಟ್ರ್ಯಾಕ್ಟರ್ ಜಾಥಾ (Kisaan tractor parade ) ನಡೆಸುವಂತೆ ಪೊಲೀಸರು ರೈತರಿಗೆ ಮನವಿ ಮಾಡಿದ್ದಾರೆ. ಆದರೆ ಯಾವ ಮನವಿಗೂ ಬಗ್ಗದ ರೈತ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್ ಗಳನ್ನು ಮುರಿದು, ಕೆಂಪುಕೋಟೆಯತ್ತ ನುಗ್ಗಿದ್ದಾರೆ.
DTC bus vandalised by protesting farmers at ITO in central Delhi pic.twitter.com/ABxOkzlyjH
— ANI (@ANI) January 26, 2021
ಇದನ್ನೂ ಓದಿ : 'ಯಾವುದೇ ಕಾರಣಕ್ಕೂ ಜ.26 ರ ಟ್ರ್ಯಾಕ್ಟರ್ ರ್ಯಾಲಿ ಹಿಂತೆಗೆದುಕೊಳ್ಳುವುದಿಲ್ಲ'
ರೈತರು ಪ್ರತಿಭಟನೆಯ ವೇಳೆ ಡಿಟಿಸಿ ಬಸ್ ಗಳನ್ನು (Bus) ಗುರಿಯಾಗಿಸಿಕೊಂಡಿದ್ದರು. ಅನೇಕ ಡಿಟಿಸಿ ಬಸ್ ಗಳ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದಾರೆ. ಅಲ್ಲದೆ, ಐಟಿಒಬಳಿಒಂದು ಬಸ್ಸನ್ನು ಮಗುಚಿ ಹಾಕುವ ಯತ್ನವನ್ನುಕೂಡಾ ಪ್ರತಿಭಟನಾಕಾರರು ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.