ಮಹಾಮಾರಿ Coronavirus ಕುರಿತು ಪಾಪ್ ಸ್ಟಾರ್ ಮೈಕಲ್ ಜಾಕ್ಸನ್ ನುಡಿದ ಭವಿಷ್ಯ ಇದು!
ಖ್ಯಾತ ಪಾಪ್ ಸಿಂಗರ್ ಮೈಕಲ್ ಜಾಕ್ಸನ್ ಮಹಾಮಾರಿ CoronaVirus ಕುರಿತು ಭವಿಷ್ಯ ನುಡಿದಿದ್ದರು ಎಂದರೆ ನೀವು ನಂಬುತ್ತೀರಾ? ಹೌದು, ಇದೆ ಕಾರಣದಿಂದ ಅವರನ್ನು ತಮಾಷೆ ಮಾಡಲಾಗುತ್ತಿದ್ದರೂ ಕೂಡ ಅವರು ಮಾಸ್ಕ್ ಧರಿಸಿಕೊಂಡೆ ತಿರುಗುತ್ತಿದ್ದರು ಎನ್ನಲಾಗಿದೆ.
ನವದೆಹಲಿ: ಖ್ಯಾತ ದಿವಂಗತ ಪಾಪ್ ಸ್ಟಾರ್ ಮೈಕಲ್ ಜಾಕ್ಸನ್ ಕೊರೊನಾ ವೈರಸ್ ನಂತಹ ಜಾಗತಿಕ ಮಹಾಮಾರಿ ಕುರಿತು ಭವಿಷ್ಯವಾಣಿ ಮಾಡಿದ್ದರು ಮತ್ತು ಇದೇ ಕಾರಣದಿಂದ ಅವರನ್ನು ತಮಾಷೆ ಮಾಡಲಾಗುತ್ತಿದ್ದರೂ ಕೂಡ ಅವರು ತಮ್ಮ ಮುಖದ ಮೇಲೆ ಮಾಸ್ಕ್ ಧರಿಸಿಕೊಂಡೆ ಇರುತ್ತಿದ್ದರು ಎನ್ನಲಾಗಿದೆ. ಮೈಕಲ್ ಜಾಕ್ಸನ್ ಅವರ ಮಾಜಿ ಅಂಗರಕ್ಷಕರೊಬ್ಬರು ಈ ಕುರಿತು ಹೇಳಿಕೊಂಡಿದ್ದಾರೆ. 'ದಿ ಸನ್ ಡಾಟ್ ಕಾಮ್'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ವಿಶ್ವಾದ್ಯಂತ Covid-19 ಉಂಟು ಮಾಡಿರುವ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮೈಕಲ್ ಅವರ ಮಾಜಿ ಅಂಗರಕ್ಷಕ ಮ್ಯಾಟ್ ಫಿಡೆಸ್ ಈ ಕುರಿತು ಮಾತನಾಡಿದ್ದು, ಹಲವು ದಶಕಗಳ ಕಾಲ ಜಾಕ್ಸನ್ ಜೊತೆಗೆ ಕಾರ್ಯನಿರ್ವಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮ್ಯಾಟ್, "ನೈಸರ್ಗಿಕ ವಿಕೋಪ ಒಂದು ನಿರಂತರ ಪ್ರಕ್ರಿಯೆ ಎಂಬುದು ಮೈಕಲ್ ಗೆ ಗೊತ್ತಿತ್ತು. ಹೀಗಾಗಿ ಅವರು ತುಂಬಾ ಮುಂಜಾಗ್ರತೆ ವಹಿಸುತ್ತಿದ್ದರು ಹಾಗೂ ಯಾವುದೇ ಒಂದು ರೋಗಾಣು ಹರಡಿ ನಾವು ತೊಂದರೆಗೆ ಸಿಲುಕಬಹುದು ಎಂಬ ಭವಿಷ್ಯವಾಣಿ ಮೈಕಲ್ ಮಾಡುತ್ತಿದ್ದರು" ಎಂದಿದ್ದಾರೆ.
ಮುಂದುವರೆದು ಮಾತನಾಡುವ ಮ್ಯಾಟ್, "ಮೈಕಲ್ ಒಂದೇ ದಿನದಲ್ಲಿ ಸುಮಾರು ನಾಲ್ಕು ದೇಶಗಳ ಪ್ರವಾಸ ಕೈಗೊಳ್ಳುತ್ತಿದ್ದರು. ವಿಮಾನದಲ್ಲಿ ಹಲವು ಯಾತ್ರಿಗಳ ಜೊತೆಗೆ ಕುಳಿತು ಅವರು ಪ್ರಯಾಣ ಕೈಗೊಳ್ಳುತ್ತಿದ್ದರು. ನಾನು ತಮಾಷೆಗಾಗಿ ಹಲವು ಬಾರಿಗೆ ಅವರು ಧರಿಸುತ್ತಿರುವ ಫೇಸ್ ಮಾಸ್ಕ್ ತೆಗೆದು ಹಾಕಲು ಹೇಳುತ್ತಿದ್ದೆ. ಕಾರಣ ಅವರು ಯಾವಾಗಲೂ ಕೂಡ ಫೇಸ್ ಮಾಸ್ಕ್ ಧರಿಸಿಕೊಂಡಿಯೇ ಇರುತ್ತಿದ್ದರು. ಅವರು ಧರಿಸುತ್ತಿದ್ದ ಫೇಸ್ ಮಾಸ್ಕ್ ಕಾರಣ ಅವರ ಜೊತೆಗೆ ಫೋಟೋ ಕ್ಲಿಕ್ಕಿಸಲು ನನಗೆ ನಾಚಿಕೆಯಾಗುತ್ತಿತ್ತು ಹಾಗೂ ನಾನು ತುಂಬಾ ಅಸಹಜನೆ ಅನುಭವಿಸುತ್ತಿದ್ದೆ" ಎಂದು ಹೇಳಿದ್ದಾರೆ.
ಮ್ಯಾಟ್ ಅವರ ಈ ಎಲ್ಲ ಮಾತುಗಳನ್ನು ಆಲಿಸಿ ಜಾಕ್ಸನ್, "ಮ್ಯಾಟ್ ನಾನು ಎಂದಿಗೂ ಅನಾರೋಗ್ಯಕ್ಕೆ ತುತ್ತಾಗಲು ಬಯಸುವುದಿಲ್ಲ . ಏಕೆಂದರೆ, ನಾನು ನನ್ನ ಅಭಿಮಾನಿಗಳನ್ನು ನಿರಾಶೆಗೊಳಿಸಲು ಬಯಸುವುದಿಲ್ಲ. ನಾನು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇನೆ. ನಾನು ಈ ಪ್ರಪಂಚದಲ್ಲಿ ಇರುವುದರ ಹಿಂದೆ ಹಲವು ಕಾರಣಗಳಿವೆ. ನಾನು ನನ್ನ ಧ್ವನಿಗೆ ಹಾನಿ ಉಂಟಾಗಲು ಬಿಡುವುದಿಲ್ಲ. ಇದಕ್ಕಾಗಿ ನಾನು ಆರೋಗ್ಯದಿಂದ ಇರಬೇಕು. ನನಗೆ ಗೊತ್ತಿಲ್ಲ ಇಂದಿನ ದಿನ ನಾನು ಯಾವ ಸಂಕಷ್ಟಕ್ಕೆ ಸಿಲುಕಲಿದ್ದೇನೆ ಎಂಬುದು ನನಗೆ ತಿಳಿದಿಲ್ಲ, ನನ್ನ ಮೇಲೆ ಯಾವ ಸಂಕಷ್ಟ ಅಪ್ಪಳಿಸಲಿದೆ ನನಗೆ ತಿಳಿದಿಲ್ಲ" ಎನ್ನುತ್ತಿದ್ದರಂತೆ.
ಒಂದು ವೇಳೆ ಮೈಕಲ್ ಇಂದು ಜೀವಂತವಾಗಿದ್ದರೆ ಈ ಜಾಗತಿಕ ಆಪತ್ತಿನ ಕುರಿತು ಏನು ಹೇಳುತ್ತಿದರು ಎಂದು ಮ್ಯಾಟ್ ಅವರನ್ನು ಪ್ರಶ್ನಿಸಲಾಗಿ ಮ್ಯಾಟ್, " ಮೊದಲು ಅವರು ಕಣ್ಣೀರಿಟ್ಟು ಬಳಿಕ ನಾನು ಈ ರೀತಿಯ ಮಾತುಗಳನ್ನು ಆಡುತ್ತಿರುವಾಗ ನನ್ನನ್ನು ಯಾರೂ ಗಂಭೀರವಾಗಿ ಪರಿಗಣಿಸುಟ್ಟಿರಲಿಲ್ಲ ಹಾಗೂ ನನ್ನ ಬಗ್ಗೆ ಜನ ತಮಾಷೆ ಮಾಡುತ್ತಿದ್ದರು" ಎಂದು ಹೇಳಿದ್ದಾರೆ. 2009 ರಲ್ಲಿ ಮೈಕಲ್ ಜಾಕ್ಸನ್ ಇಹಲೋಕ ತ್ಯಜಿಸಿದ್ದಾರೆ.