Bigg Boss: ಬಿಗ್ ಬಾಸ್ 8ನೇ ಸೀಸನ್ ಸದ್ಯ 65 ದಿನಗಳಿಂದ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ.. ಇಲ್ಲಿಯವರೆಗೆ 9 ವಾರಗಳು ಪೂರ್ಣಗೊಂಡಿವೆ.. ಮೊದಲ 8 ವಾರಗಳಲ್ಲಿ ಕಡಿಮೆ ಮತ ಪಡೆದ ಒಬ್ಬೊಬ್ಬ ಸ್ಪರ್ಧಿಗಳನ್ನು ಹೊರಹಾಕಲಾಯಿತು. ಆದರೆ ಕಳೆದ ವಾರವಷ್ಟೇ ಡಬಲ್ ಎವಿಕ್ಷನ್ ನಡೆದಿದೆ. ಆನಂದಿ ಮೊದಲು ಎಲಿಮಿನೇಟ್ ಆಗಿದ್ದರೆ, ವಿಜಯ್ ಸೇತುಪತಿ ಎರಡನೇ ಬಾರಿಗೆ ಸಾಚನಾ ಅವರನ್ನು ಎಲಿಮಿನೇಟ್ ಮಾಡುವ ಮೂಲಕ ಶಾಕ್ ನೀಡಿದರು.


COMMERCIAL BREAK
SCROLL TO CONTINUE READING

ಬಿಗ್ ಬಾಸ್ ಮನೆಯಲ್ಲಿ ಸದ್ಯ 15 ಸ್ಪರ್ಧಿಗಳು ಉಳಿದಿದ್ದಾರೆ. ಶೋ ಅಂತಿಮ ಹಂತಕ್ಕೆ ಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಇರುವುದರಿಂದ ಈ ವಾರವೂ ಡಬಲ್ ಎವಿಕ್ಷನ್ ಆಗುವ ಸಾಧ್ಯತೆ ಇದೆ ಎನ್ನಲಾಗಿತ್ತು.. ಆದರೆ ಇದೀಗ ದಿಢೀರ್ ಟ್ವಿಸ್ಟ್ ನಲ್ಲಿ ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಮಿಡ್ ವೀಕ್ ಎವಿಕ್ಷನ್ ನಡೆಯಲಿದೆ ಎಂದು ವರದಿಯಾಗಿದೆ. ವಾರದ ಮಧ್ಯದಲ್ಲಿ ಯಾರು ಹೊರ ಹೋಗುತ್ತಾರೆ ಎನ್ನುವುದು ಈಗಿನ ಚರ್ಚೆಯಾಗಿದೆ..   


ಇದನ್ನೂ ಓದಿ-ಚೆಂದುಳ್ಳಿ ಚೆಲುವೆ ಐಶ್ವರ್ಯ ರೈಗೆ 'ಬಣ್ಣದ ಲೋಕ'ಕ್ಕೆ ಬರಬೇಡ ಎಂದಿದ್ದರಂತೆ ಖ್ಯಾತ ನಟ, ಕಾರಣ ಏನ್ ಗೊತ್ತಾ..!


ಆ ಮೂಲಕ ಈ ವಾರ ನಾಮಿನೇಟ್ ಆಗಿದ್ದ 9 ಮಂದಿಯಲ್ಲಿ ಜಾಕ್ವೆಲಿನ್, ರಿಯಾನ್, ಅರುಣ್, ವಿಜೆ ವಿಶಾಲ್, ದರ್ಶಿಕಾ, ಅಂಶಿತಾ, ಸತ್ಯ, ಪವಿತ್ರ ಇವರಲ್ಲಿ ಒಬ್ಬರೇ ಮಿಡ್ ವೀಕ್ ಎವಿಕ್ಷನ್ ನಲ್ಲಿ ಹೊರಹೋಗುವ ಸಾಧ್ಯತೆ ಇದೆ. ಸದ್ಯದ ಮತದಾನದಲ್ಲಿ ಜಾಕ್ವೆಲಿನ್, ಪವಿತ್ರಾ ಹೆಚ್ಚು ಮತಗಳನ್ನು ಪಡೆಯುತ್ತಿರುವುದರಿಂದ ಅವರನ್ನು ಬಿಟ್ಟು ಕೊಡುವ ಸಾಧ್ಯತೆ ಇಲ್ಲ. ಅದೇ ರೀತಿ ಅರುಣ್ ಮತ್ತು ಅಂಶಿತಾ ಕೂಡ ಗಮನಾರ್ಹ ಮತಗಳನ್ನು ಪಡೆದಿದ್ದಾರೆ..


ಇದರಿಂದಾಗಿ ಉಳಿದ ಇಬ್ಬರಲ್ಲಿ ಒಬ್ಬರಾದ ಸತ್ಯ ಅಥವಾ ದರ್ಶಿಕಾ ಮಾತ್ರ ವಾರದ ಮಧ್ಯದಲ್ಲಿ ಹೊರಹೋಗುವ ಸಾಧ್ಯತೆಯಿದೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು ಏನೂ ಮಾಡದೇ ಇದ್ದ ಸತ್ಯ ಅವರನ್ನು ಈ ವಾರ ನಾಮಿನೇಷನ್ ಸಮಯದಲ್ಲಿ ಮಿಕ್ಸರ್ ಎಂದು ಕರೆಯಲಾಗಿದೆ. ಮಿಡ್ ವೀಕ್ ಎವಿಕ್ಷನ್ ನಲ್ಲಿ ಸತ್ಯ ಹಾಗೂ ವೀಕೆಂಡ್ ಎವಿಕ್ಷನ್ ನಲ್ಲಿ ದರ್ಶಿಕಾ ಔಟ್ ಆಗುವ ಸಾಧ್ಯತೆ ಹೆಚ್ಚಿದೆಯಂತೆ.


ಇದನ್ನೂ ಓದಿ-ʼʼಗಂಡ ಗುಟ್ಟಾಗಿ ಅನೈತಿಕ ಸಂಬಂಧ ಇಟ್ಟುಕೊಂಡರೆ ತಪ್ಪೇನು?ʼʼ ಖ್ಯಾತ ಹಿರಿಯ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.