H Vishwanath: `ಅವಕಾಶ ಸಿಕ್ಕರೆ ಖಂಡಿತಾ `ಬಿಗ್ ಬಾಸ್` ಮನೆಗೆ ಹೋಗುತ್ತೇನೆ`
ವಿಶೇಷ ಆಹ್ವಾನಿತರಾಗಿ ಆಹ್ವಾನ ಬಂದ್ರೆ ಹೋಗುತ್ತೇನೆ. ನಾಲ್ಕೈದು ದಿನಗಳ ಮಟ್ಟಿಗೆ ಬಿಗ್ ಬಾಸ್ ಮನೆಗೆ ಹೋಗಿ ಬರುತ್ತೇನೆ. ಸ್ಪೆಷಲ್ ಇನ್ವೈಟಿಯಾಗಿ ಕರೆದರೆ ಹೋಗ್ತೇನೆ.
ಬೆಂಗಳೂರು: ನಾನು ಬಿಗ್ ಬಾಸ್ ಮನೆಗೆ ಹೋಗಲು ಆಸೆಪಟ್ಟಿದ್ದೇನೆ. ನನ್ನ ಸ್ನೇಹಿತರು ಬಿಗ್ ಬಾಸ್ ಮನೆಗೆ ಹೋಗಲು ಹೇಳ್ತಿದ್ದಾರೆ. ವಿಶೇಷ ಆಹ್ವಾನಿತರಾಗಿ ಆಹ್ವಾನ ಬಂದ್ರೆ ಹೋಗುತ್ತೇನೆ. ನಾಲ್ಕೈದು ದಿನಗಳ ಮಟ್ಟಿಗೆ ಬಿಗ್ ಬಾಸ್ ಮನೆಗೆ ಹೋಗಿ ಬರುತ್ತೇನೆ. ಸ್ಪೆಷಲ್ ಇನ್ವೈಟಿಯಾಗಿ ಕರೆದರೆ ಹೋಗ್ತೇನೆ. ಸೀಸನ್ 6 ರ ವೇಳೆ ಪರಮೇಶ್ವರ್ ಗುಂಡ್ಕಲ್ ಬಿಗ್ ಬಾಸ್(Bigg Boss)ಗೆ ಆಹ್ವಾನಿಸಿದ್ರು. ಆದ್ರೆ ಆ ವೇಳೆ ಅನಾರೋಗ್ಯದಿಂದಾಗಿ ಹೋಗಿರಲಿಲ್ಲ. ಬಿಗ್ ಬಾಸ್ ಮನೆಗೆ ಹೋಗಿ ರಾಜಕಾರಣದ ಕಿಡಿ ಹೊತ್ತಿಸುತ್ತೇನೆ. ರಾಜಕಾರಣದ ಜನಶಿಕ್ಷಣ ಕೊಡ್ತೇನೆ. ಅವಕಾಶ ಸಿಕ್ಕಿದ್ರೆ ಖಂಡಿತ ಭಾಗವಹಿಸ್ತೇನೆ ಎಂದು ಎಂಎಲ್ಸಿ, ಮಾಜಿ ಸಚಿವ ಹೆಚ್.ವಿಶ್ವನಾಥ್ ಇಂಗಿತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್(H Vishwanath), ನನಗೆ ಸೀಸನ್ 6 ಗೆ ಆಹ್ವಾನ ಕೊಟ್ಟಿದ್ದರು, ಒಪ್ಪಿಕೊಂಡಿದ್ದೆ. ಆಗ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ.ಈಗ ಕೆಲವು ಸ್ನೇಹಿತರು ಹೋಗಿ ಅಂತಾ ಹೇಳ್ತಿದ್ದಾರೆ. ನನಗೂ ಹೋಗಲು ಆಸೆ ಇತ್ತು. ನನಗೆ ಒಂದು ವೇದಿಕೆ ಸಿಕ್ಕಿದಂತಾಗುತ್ತದೆ ಅಂತಾ ಯೋಚನೆ ಮಾಡಿದ್ದೆ.
Kumar Bangarappa: ಮುನಿಸಿಕೊಂಡಿದ್ದ ಕುಮಾರ್ ಬಂಗಾರಪ್ಪ ಕೊನೆಗೂ ಸಂಧಾನ ಸಕ್ಸಸ್..!
ಚುನಾವಣೆಗಳು ಬಂದಿವೆ, ಅಲ್ಲಿ ಇಲ್ಲಿ ಜವಾಬ್ದಾರಿ ಹಾಕ್ತಾರೆ, ಹಾಗಾಗಿ ಹೋಗಲು ಸ್ವಲ್ಪ ಕಷ್ಟ ಆಗಬಹುದು. ಅವರು ವಿಶೇಷ ಆಹ್ವಾನಿತರಾಗಿ ಬನ್ನಿ ಅಂತಾ ಕರೆದರೆ ಮೂರ್ನಾಲ್ಕು ದಿನಕ್ಕೆ ಹೋಗಬಹುದು ಎಂದು ಹೇಳಿದರು. ಯಾರಿಗೆ ಕೋವಿಡ್(Covid) ಲಸಿಕೆ ಸಿಗುತ್ತೆ? ಉಸಿರಾಟ ತೊಂದರೆ, ಹೆಚ್‌ಐವಿ, ಕ್ಯಾನ್ಸರ್ ಸೇರಿ 20 ಕಾಯಿಲೆಗಳ ಪಟ್ಟಿ.
Petrol Bomb Explodes : ಪೆಟ್ರೋಲ್ ಬಾಂಬ್ ಸಿಡಿಸುವಾಗ ಅನಾಹುತ, ನಟ ರಿಷಬ್ ಶೆಟ್ಟಿಗೆ ಗಾಯ
ದೇಶದಲ್ಲಿ ಜನರಿಗೆ ಎಲ್ಲಾ ಅರ್ಥ ಆಗುತ್ತಿದ್ದರೂ ಜನರಿಗೆ ರಾಜಕಾರಣ ಅರ್ಥ ಆಗುತ್ತಿಲ್ಲ. ಆ ಮನೆಯಲ್ಲಿ ಯುವಕರು, ಸಿನಿಮಾ(Cinema)ದವರು, ಗಂಡುಮಕ್ಕಳು, ಹೆಣ್ಣುಮಕ್ಕಳು, ಸಿನಿಮಾದವರು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹಚ್ಚಿಸಬಹುದು. ನಾನು ಅದನ್ನು ಅಲ್ಲಿ ಕ್ರಿಯೇಟ್ ಮಾಡಬಲ್ಲೆ. ಅವಕಾಶ ಸಿಕ್ಕಿದರೆ ಖಂಡಿತಾ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದರು.
ಏಪ್ರಿಲ್ 14 ರಂದು ಬಹುನಿರೀಕ್ಷಿತ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.