Petrol Bomb Explodes : ಪೆಟ್ರೋಲ್ ಬಾಂಬ್ ಸಿಡಿಸುವಾಗ ಅನಾಹುತ, ನಟ ರಿಷಬ್ ಶೆಟ್ಟಿಗೆ ಗಾಯ

ಹಾಸನ ಜಿಲ್ಲೆ ಬೇಲೂರಿನಲ್ಲಿ ಹೀರೋ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು.  ಪೆಟ್ರೋಲ್ ಬಾಂಬ್ ಸಿಡಿಸುವ ಸನ್ನಿವೇಶವನ್ನು ಚಿತ್ರೀಕರಿಸಬೇಕಿತ್ತು. ಪೆಟ್ರೋಲ್ ಬಾಂಬ್ ಸಿಡಿಸುವ  ವೇಳೆ ರಿಷಬ್ ಶೆಟ್ಟಿ ಅವರಿಗೂ ಈ ಸಮಯದಲಿ ಬೆಂಕಿ ತಗುಲಿದೆ.  

Written by - Ranjitha R K | Last Updated : Mar 1, 2021, 11:45 AM IST
  • ಬೇಲೂರಿನಲ್ಲಿ ಚೀತ್ರೀಕರಣದ ವೇಳೆ ಅಗ್ನಿ ಅವಘಡ
  • ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಗಾಯ
  • ಅಪಾಯದಿಂದ ಪಾರಾದ ರಿಷಬ್ ಶೆಟ್ಟಿ, ಆಸ್ಪತ್ರೆಯಲ್ಲಿ ಚಿಕಿತ್ಸೆ
Petrol Bomb Explodes : ಪೆಟ್ರೋಲ್ ಬಾಂಬ್ ಸಿಡಿಸುವಾಗ ಅನಾಹುತ, ನಟ ರಿಷಬ್ ಶೆಟ್ಟಿಗೆ ಗಾಯ title=
ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಗಾಯ (photo twitter)

ಹಾಸನ : ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ದೊಡ್ಡ ಅಪಾಯವೊಂದರಿಂದ ಪಾರಾಗಿದ್ದಾರೆ. ಹೀರೋ (Hero) ಚಿತ್ರೀಕರಣ ಸಂದರ್ಭದಲ್ಲಿ ನಡೆದ ಅನಾಹುತದಲ್ಲಿ ರಿಷಬ್ ಶಟ್ಟಿ ಅವರಿಗೂ ಬೆಂಕಿ ತಗುಲಿದೆ. ಅದೃಷ್ಟವಶಾತ್ ರಿಷಬ್ ಅಪಾಯದಿಂದ ಪಾರಾಗಿದ್ದಾರೆ.

ಆಗಿದ್ದೇನು?
ಹಾಸನ ಜಿಲ್ಲೆ ಬೇಲೂರಿನಲ್ಲಿ ಹೀರೋ (Hero) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು.  ಪೆಟ್ರೋಲ್ ಬಾಂಬ್ ಸಿಡಿಸುವ ಸನ್ನಿವೇಶವನ್ನು ಚಿತ್ರೀಕರಿಸಬೇಕಿತ್ತು. ಪೆಟ್ರೋಲ್ ಬಾಂಬ್ ಸಿಡಿಸುವ (Petrol Bomb Explodes) ವೇಳೆ ರಿಷಬ್ ಶೆಟ್ಟಿ (Rishab Shetty) ಅವರಿಗೂ ಈ ಸಮಯದಲಿ ಬೆಂಕಿ ತಗುಲಿದೆ. ಕೂಡಲೇ ಬೆಂಕಿ ನಂದಿಸಲಾಯಿತು. ಆದರೂ ತಲೆಕೂದಲು ಸುಟ್ಟು ಹೋಗಿದೆ. ಬೆನ್ನಿಗೆ ಗಾಯವಾಗಿದೆ. ರಿಷಬ್ ಶೆಟ್ಟಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಇದನ್ನೂ ಓದಿ :  ಏಪ್ರಿಲ್ 14 ರಂದು ಬಹುನಿರೀಕ್ಷಿತ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆ

ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ (Sandalwood) ಗುರುತಿಸಿಕೊಂಡವರು ರಿಷಬ್ ಶೆಟ್ಟಿ. ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಥಹ ಹಿಟ್ ಸಿನಿಮಾಗಳನ್ನೂ ನೀಡಿದ್ದಾರೆ. ಹೀರೋ ಸಿನಿಮಾದಲ್ಲಿ ಲೀಡ್ ರೋಲ್‍ ನಲ್ಲೇ ರಿಷಬ್ ಶೆಟ್ಟಿ ನಟಿಸುತ್ತಿದ್ದು, ಉಳಿದಂತೆ ಗಾನವಿ ಲಕ್ಷ್ಮಣ್, ಅಜನೀಶ್ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶೀಘ್ರವೇ ಸಿನಿಮಾ (Cinema) ಬಿಡುಗಡೆ ಆಗಲಿದೆ.

ಇದನ್ನೂ ಓದಿ : Bigg Boss 8: ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿಯಾಗಿ 'ಟಿಕ್ ಟಾಕ್ ಧನುಶ್ರೀ' ಎಂಟ್ರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News