BBK 10 : ಬಿಗ್‌ಬಾಸ್‌ ಸೀಸನ್‌ 10 ಪ್ರಾರಂಭವಾಗಿ ಒಂದು ವಾರ ಕಳೆಯುತ್ತಿದೆ. ಈ ಬಾರಿಯ ಬಿಗ್‌ಬಾಸ್‌ ಸೀಸನ್‌ 10 ತುಂಬಾನೆ ಸ್ಪೆಷಲ್.‌ ಭಾರತದ ಅತಿ ದೊಡ್ಡ ಹೊಸ ಬಿಗ್‌ಬಾಸ್‌ ಮನೆಯಲ್ಲಿ, ಬಿಗ್‌ಬಾಸ್‌ ಸೀಸನ್‌  10ರ ಆಟ ಪ್ರಾರಂಭವಾಗಿದೆ. ಬಿಗ್‌ಬಾಸ್‌ ಟೈಟಲ್‌ ಟ್ರ್ಯಾಕ್‌ ಸಹ ಬದಲಾಗಿದೆ. ಬಿಗ್‌ಬಾಸ್‌ ಮನೆಯ ಸ್ಪರ್ದಿಗಳನ್ನು ಸಹ ವೋಟಿಂಗ್‌ ಪ್ರಕಿಯೆನ್ನು ನಡೆಸಿ, ಅದರ ಅನುಸಾರವಾಗಿ ಕಂಟೆಸ್ಟೆಂಟ್‌ಗಳನ್ನು ಮನೆಯ ಒಳಗೆ ಕಳುಹಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ಬಾರಿ ಬಿಗ್‌ಬಾಸ್‌ ಮನೆಯ ಟಾಸ್ಕ್ ಹಾಗು ಇತರೆ ಚಟುವಟಿಕೆಗಳು ಸಹ ವಿಭಿನ್ನವಾಗಿದೆ. ಬಿಗ್‌ಬಾಸ್‌ ಸೀಸನ್‌ 10ರ ಮೊದಲನೆಯ ವಾರದ ಕಳೆಯುತ್ತಿದೆ. ಇಂದು ರಾತ್ರಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಗಾಗಿ ಪ್ರೇಕ್ಷಕರು ಕಾಯ್ತಾಯಿದ್ದಾರೆ. ಸುದೀಪ್‌ ಅವರು ಬಿಗ್‌ಬಾಸ್‌ ಮನೆಯ ಸ್ಪರ್ದಿಗಳ ಜೊತೆ ಏನು ಮಾತಾಡ್ತಾರೆ? ಸದಸ್ಯರ ಮಧ್ಯೆ ಇದ್ದ ಸಮಸ್ಯೆಗೆ ಪರಿಹಾರ ನೀಡ್ತಾರಾ? ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಮನೆಯಿಂದ ಹೊರಬೀಳ್ತಾರೆ? ಇದೆಲ್ಲವುದರ ಪ್ರಶ್ನೆಗೆ ಉತ್ತರ ಸಿಗಲಿದೆ.


ಇದನ್ನೂ ಓದಿ:: ಬಿಗ್‌ಬಾಸ್ ಫಸ್ಟ್‌ ಎಲಿಮಿನೇಷನ್‌..! ಈ 8 ಜನರಲ್ಲಿ ಮನೆಯಿಂದ ಹೊರಗೆ ಬರೋದು ಯಾರು..?


ಸದ್ಯ ಬಿಗ್‌ಬಾಸ್‌ ಮನೆಯ ಬಗ್ಗೆ ಹೊಸದೊಂದು ಅಪ್ಡೇಟ್‌ ಸಹ ಸಿಕ್ಕಿದೆ. ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್‌ ಬಳಕೆಗೆ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ. ಕಳೆದ ಯಾವ ಸೀಸನ್‌ನ್ಲೂ ಸಹದ ಸೌಲಭ್ಯ ಈ ಬಾರಿ ಯಾಕೆ ಹೀಗೆ? ಇದು ವಿಷಯ ನಿಜನಾ? ಈ ರೀತಿ ನಿರ್ಧಾರ ಯಾಕೆ ಟಿವಿ ಚಾನೆಲ್‌ನವರು ಮಾಡಿದ್ದಾರೆ ಎಂಬ ಗೊಂದಲಕ್ಕೆ ಉತ್ತರ ಸಿಕ್ಕಿದೆ. ಆದರೆ ಈ ನಿಯಮ ಬಿಗ್‌ಬಾಸ್‌ ಕನ್ನಡದಲ್ಲಿ ಅಲ್ಲ. ಬಿಗ್‌ಬಾಸ್‌ ಹಿಂದಿಯ ಶೋನಲ್ಲಿ.


ಯಸ್..‌ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆಕ್ಟೋಬರ್‌ 8ರಂದು ಪ್ರಾರಂಭವಾಯಿತು. ಸದ್ಯ ಬಿಗ್‌ಬಾಸ್‌ ಹಿಂದಿ ಸೀಸನ್‌ 17 ಅಕ್ಟೋಬರ್‌ 15ರಂದು ಚಾಲನೆ ಸಿಗಲಿದೆ. ಈ ಸೀಸನನ್ನು ಸಲ್ಮಾನ್‌ ಖಾನ್‌ರವರು ನಡೆಸಿಕೊಳ್ಳಲಿದ್ದಾರೆ. ವಿಶೇಷವೆನೇಂದರೆ ಈ ಬಾರಿಯ ಹಿಂದಿ ಬಿಗ್‌ಬಾಸ್‌ನಲ್ಲಿ ಮೊಬೈಲ್‌ ಬಳಕೆಗೆ ಅವಕಾಶ ಸಿಗಲಿದೆ. ಬಿಗ್‌ಬಾಸ್‌ ಮನೆಗೆ ಅದರದ್ದೇಯಾದ ನಿಯಮಗಳು ಇದ್ದು, ಸಮಯಕ್ಕೆ ತಕ್ಕ ಹಾಗೆ ಬಿಗ್‌ಬಾಸ್‌ ಮನೆಯ ನಿಯಮಗಳು ಸಹ ಬದಲಾಗುತ್ತದೆ. ಅದೇ ರೀತಿ ಬಿಗ್‌ಬಾಸ್‌ ಹಿಂದಿ ಸೀಸನ್‌ 17ರಲ್ಲಿ ಹೊಸದೊಂದು ಪ್ರಯೋಗ ಮಾಡುತ್ತಿದ್ದಾರೆ. 


ಇದನ್ನೂ ಓದಿ:ʼಶುಗರ್ ಫ್ಯಾಕ್ಟರಿʼಯಲ್ಲಿ ಜಯಂತ ಕಾಯ್ಕಿಣಿ ʼಜಹಾಪನಾʼ ಸಾಂಗ್‌..! ಲವ್‌ ಸಾಂಗ್‌ಗೆ ಮನಸೋತ ಫ್ಯಾನ್ಸ್‌ 


ಬಿಗ್‌ಬಾಸ್‌ ಮನೆಯಲ್ಲಿ ಹಲವರಿಗೆ ಮೊಬೈಲ್‌ ಇಲ್ಲದೆ ಇರುವುದು ಊಹಿಸಿಕೊಳ್ಳುವುದೇ ಕಷ್ಟ. ಆದರಿಂದ ವಾಹಿನಿಯವರು ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್‌ ಪರಿಚಯಿಸುವ ಹೊಸ ಎಕ್ಸ್‌ಪಿರಿಮೆಂಟ್‌ ಮಾಡಲು ನಿರ್ಧಾರ ಮಾಡಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಒಂದಷ್ಟು ಸಮಯ ಮಾತ್ರ ಮೊಬೈಲ್ ಬಳಕೆ ಮಾಡಬಹುದು ಎನ್ನುವ ಷರತ್ತನ್ನು ಹಾಕಲು ನಿರ್ಧರಿಸಲಾಗಿದೆ. ಈ ಬಾರಿ ಇದು ಸಕ್ಸಸ್‌ ಕಂಡರೆ ಮುಂಬರು ಸೀಸನ್‌ಗಳಲ್ಲೂ ಮುಂದುವರೆಸಬಹುದು.


ಈ ವಿಷಯವನ್ನು ಕೇಳಿದ ನೆಟ್ಟಿಗರು ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್‌ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ ಬಳಕೆ ಬಿಗ್‌ಬಾಸ್‌ ಮನೆಯ ಆಟದಲ್ಲಿ ಮಜಾ ಕೊಡದೇ ಇರಬಹುದು. ಸ್ಪರ್ದಿಗಳು ಒಬ್ಬರನೊಬ್ಬರ ಜೊತೆಗೆ ಮಾತನಾಡದೆ, ಸದಾ ಮೊಬೈಲ್‌ನಲ್ಲಿ ಮುಳುಗಿ ಹೋಗಬಹುದು ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.