Actress Revathi About Casting Couch: ಸಾಕಷ್ಟು ನಟಿಯರು ಸಿನಿಮಾರಂಗದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಹಲವಾರು ಬಾರಿ ಹಂಚಿಕೊಂಡಿದ್ದಾರೆ. ಮೀಟೂ ಅಭಿಯಾನದಲ್ಲಿ ಸಾಕಷ್ಟು ದೂರುಗಳು ದಾಖಲಾಗಿದೆ. ಇದರ ಜೊತೆ ಕಾಸ್ಟಂಗ್‌ ಕೌಚ್‌ ಬಗ್ಗೆಯು ಸಹ ಹೇಳಿಕೊಂಡಿದ್ದಾರೆ. ಸದ್ಯ ಹಿರಿಯ ಕಲಾವಿದೆ ಬಹುಭಾಷಾ ನಟಿ ರೇವತಿ ಅವರು ಕೂಡ ಕಾಸ್ಟಿಂಗ್ ಕೌಚ್ ಬಗೆಗಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಚಿತ್ರರಂಗದ ಕಾಸ್ಟಿಂಗ್‌ ಕೌಚ್‌ನ ಕರಾಳ ಸತ್ಯದ ಬಗ್ಗೆ ಸಾಕಷ್ಟು ನಟಿಯರು ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಬಣ್ಣದ ಲೋಕದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಅನ್ನೋ ಹೀನಾ ಸಂಸ್ಕೃತಿ ವಿಷಯವಾಗಿ ಹಲವಾರು ಮಾತುಗಳು ಸಹ ಕೇಳಿಬಂದಿದೆ. ಕೆಲವು ವರ್ಷಗಳ ಹಿಂದೆ ನಡೆದ ಮೀಟೂ ಅಭಿಯಾನದಲ್ಲೂ ಸಾಕಷ್ಟು ಕಲಾವಿದರು ತಮಗಾದ ಕಹಿ ಅನುಭವವನ್ನು ತೆರೆದಿಟ್ಟಿದ್ದಾರೆ. ಸದ್ಯ ಬಹುಭಾಷಾ ನಟಿ ರೇವತಿಯವರು ಸಹ ಇದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.


ನಟಿ ರೇವತಿ 80 ಹಾಗೂ 90ರ ದಶಕದ ಬಹುಬೇಡಿಕೆಯ ನಟಿಯರಾಗಿದ್ದರು. ಅವರು ಸಂದರ್ಶನದಲ್ಲಿ ಆ ಕಾಲದ ಕಾಸ್ಟಿಂಗ್‌ ಕೌಚ್‌ ಹಾಗೂ ಇವತ್ತಿನ ಕಾಲದಲ್ಲಿ ಕಾಸ್ಟಿಂಗ್‌ನಲ್ಲಿ ನಡೆಯಲಿರುವ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಹಾಗೆ ಇಂದಿನ ದಿನಗಳಲ್ಲಿ ಕಾಸ್ಟಿಂಗ್‌ ಟೀಂ ಯಾವ ರೀತಿ ಮೊಬೈಲ್‌ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುವುದರ ಬಗ್ಗೆ ಸಂದರ್ಶನದಲ್ಲಿ ತಮಗೆ ತಿಳಿದ ವಿಷಯಗಳ ಬಗ್ಗೆ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ- ಬಿಗ್ ಬಾಸ್ ನೀವೇ ಈಗ ಬಾಸ್: ವೋಟ್‌ ಮಾಡಿ; ನಿಮ್ಮ ಅಧಿಕಾರ ಚಲಾಯಿಸಿ; ಸ್ಪರ್ಧಿಗಳ ಭವಿಷ್ಯ ನಿರ್ಧರಿಸಿ


ಹಿರಿಯ ನಟಿ ರೇವತಿ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ರೀತಿಯ ವಿಚಾರಗಳಿಗೆ ಮೊಬೈಲ್ ಫೋನ್ ಹೆಚ್ಚು ಕಾರಣ ಎಂದು  ದೂರಿದ್ದಾರೆ. "80, 90ರ ದಶಕಗಳಲ್ಲಿ ನಮ್ಮ ಬಳಿ ಮೊಬೈಲ್ ಫೋನ್ ಇರಲಿಲ್ಲ. ಮೊಬೈಲ್ ಫೋನ್‌ ಹಾಗೂ ಮೆಸೇಜ್‌ಗಳಿಂದಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂದು ನನಗೆ ಅನ್ನಿಸುತ್ತದೆ. ಯಾಕಂದರೆ ಒಬ್ಬ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೀನು ನನಗೆ ಬೇಕು, ನನ್ನೊಟ್ಟಿಗೆ ಇರು ಎಂದು ಕೆಟ್ಟ ಉದ್ದೇಶದಿಂದ ಕೇಳುವುದು ಕಷ್ಟ" ಎಂದು ಅವತ್ತಿನ ಕಾಲದಲ್ಲಿ ಇದೆಲ್ಲ ಅಷ್ಟು ಸುಲಭ ಇರಲಿಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ಧಾರೆ.


ಆದರೆ ಇಂದಿನ ದಿನಗಳಲ್ಲಿ ಮೊಬೈಲ್‌ ಮೆಸೇಜ್‌ನಲ್ಲಿ ಇಮೋಜಿಗಳನ್ನು ಬಳಸಿಕೊಂಡು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬುದನ್ನು ವಿವರಿಸಿದ್ದಾರೆ. "ಈ ಕಾಲದಲ್ಲಿ ಒಂದು ಮಸೇಜ್ ಮಾಡಿ ಬಂದು ಭೇಟಿ ಮಾಡು, ಕಾಫಿಗೆ ಹೋಗೋಣ ಹೀಗೆ ನೂರಾರು ಮೆಸೇಜ್‌ಗಳು ಹೋಗುತ್ತವೆ. ಈ ಕಾಲದಲ್ಲಿ ಮೊಬೈಲ್ ಫೋನ್‌ಗಳಿಂದಲೇ ಹೆಚ್ಚು ಸಮಸ್ಯೆಗಳು ಬರುತ್ತವೆ. ಮೊಬೈಲ್ ಫೋನ್‌ಗಳಿಂದ ಎಮೋಜಿ ಬಳಸುವುದು ಹೆಚ್ಚಾಗಿದೆ. ಅದೇ ದೊಡ್ಡ ಸಮಸ್ಯೆಯಾಗಿದೆ. ಎಮೋಜಿಗಳ ಅರ್ಥ ಸರಿಯಾಗಿ ಅರ್ಥವಾಗುವುದಿಲ್ಲ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬಳಸಬೇಕು" ಎಂದು ಮೊಬೈಲ್‌ ಬಳಕೆ ಬಗ್ಗೆ ಮಾತನಾಡಿದ್ದಾರೆ.


ಇದನ್ನೂ ಓದಿ- ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ – ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಚಿತ್ರಕ್ಕೆ ಶಿವಣ್ಣ ಎಂಟ್ರಿ   


ಇದೇ ವೇಳೆ 80, 90ರ ದಶಕದಲ್ಲಿ ಎದುರಿಸುತ್ತಿದ್ದ ಸಾಮಾನ್ಯ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಿರುವ ನಟಿ ರೇವತಿ, "ಆ ಕಾಲದಲ್ಲಿ ಏನಾದರು ಇಂತಹ ಕೆಟ್ಟ ಸಂದರ್ಭಗಳು ಎದುರಾದರೆ ನೋ ಎಂದು ಹೇಳಿ ನಕ್ಕು ಹೋಗುತ್ತಿದ್ದೆ. ಆ ಬಳಿಕ ಆಪ್ತರ ಜೊತೆ ಆ ವಿಷಗಳನ್ನು ಹೇಳಿಕೊಳ್ಳುತ್ತಿದ್ದೆ. ಯಾಕಂದರೆ ಇಂಡಸ್ಟ್ರಿಯಲ್ಲಿ ಯಾರನ್ನೂ ನಂಬುವುದು ಕಷ್ಟ. ವಿಚಾರ ಹರಡಿಬಿಡುತ್ತಿತ್ತು. ವೈಯಕ್ತಿಕವಾಗಿ ನಮ್ಮ ತಾಯಿ ನನ್ನೊಟ್ಟಿಗೆ ಬಹಳ ಓಪನ್ ಆಗಿ ಇರುತ್ತಿದ್ದರು. ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಹೇಳುತ್ತಿದ್ದರು" ಎಂದು ತಿಳಿಸಿದ್ದಾರೆ. 


ಮೆಸೇಜ್‌ನಲ್ಲಿ ಬಳಸುವ ಎಮೋಜಿಗಳ ಬಗ್ಗೆ ಮಾತನಾಡುತ್ತಾ "ಈಗ ಇರುವ ಮೆಸೇಜ್‌ ಕಾರಣದಿಂದ ಯಾರು ಯಾರನ್ನು ಬೇಕಾದರೂ ಏನು ಬೇಕಾದರೂ ಕೇಳಬಹುದು. ಎಲ್ಲೆ ಮೀರಿ ಕೇಳಬಹುದು. ಎಮೋಜಿಗಳ ಅರ್ಥ ತಿಳಿಯಬೇಕು ಎಂದು ಇತ್ತೀಚೆಗೆ WCC ಬಳಿ ಕೇಳಲಾಯಿತು. ಎಮೋಜಿಗಳಿಂದ ತಪ್ಪು ಅರ್ಥ ರವಾನೆ ಆಗುತ್ತದೆ. ನೀವು ಏನು ಹೇಳಬೇಕು ಅದನ್ನು ಬರೆದು ಕಳುಹಿಸಿ. ನಾವು ಬೆಳೆದು ಬಂದ ಸಮಯಕ್ಕಿಂತ ಈ ಕಾಲ ಮಕ್ಕಳಿಗೆ ಕಷ್ಟಕರವಾಗಿರುತ್ತದೆ ಎಂದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.