ಬಿಗ್ ಬಾಸ್ ನೀವೇ ಈಗ ಬಾಸ್: ವೋಟ್‌ ಮಾಡಿ; ನಿಮ್ಮ ಅಧಿಕಾರ ಚಲಾಯಿಸಿ; ಸ್ಪರ್ಧಿಗಳ ಭವಿಷ್ಯ ನಿರ್ಧರಿಸಿ

Bigg Boss Season 10: ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ಪ್ರಶ್ನೆಯೊಂದನ್ನು ಜನಮತಕ್ಕಾಗಿ ಇಡಲಾಗಿದೆ. ಇದರ ಮೂಲಕ ಬಿಗ್‌ಬಾಸ್‌ ಮನೆಯೊಳಗಿನ ‘ಅಸಮರ್ಥ’ರ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ಪ್ರೇಕ್ಷಕಪ್ರಭುವಿಗೆ ನೀಡಲಾಗಿದೆ.

Written by - Yashaswini V | Last Updated : Oct 13, 2023, 01:12 PM IST
  • ಬಿಗ್ ಬಾಸ್ ಮನೆಯೊಳಗೆ ಎರಡು ಗುಂಪುಗಳಾಗಿರುವುದು ಗೊತ್ತೇ ಇದೆ.
  • ಜನರ ವೋಟ್‌ನಿಂದ ನೇರವಾಗಿ ಮನೆಯೊಳಗೆ ಪ್ರವೇಶಿಸಿದ ಹತ್ತು ‘ಸಮರ್ಥ’ ಸ್ಪರ್ಧಿಗಳ ಗುಂಪು ಒಂದೆಡೆಯಿದೆ.
  • ಜನರು ಹೋಲ್ಡ್‌ನಲ್ಲಿ ಇಟ್ಟಿರುವ ಏಳು ‘ಅಸಮರ್ಥ’ ಸ್ಪರ್ಧಿಗಳ ಗುಂಪು ಇನ್ನೊಂದೆಡೆ ಇದೆ.
ಬಿಗ್ ಬಾಸ್ ನೀವೇ ಈಗ ಬಾಸ್: ವೋಟ್‌ ಮಾಡಿ; ನಿಮ್ಮ ಅಧಿಕಾರ ಚಲಾಯಿಸಿ; ಸ್ಪರ್ಧಿಗಳ ಭವಿಷ್ಯ ನಿರ್ಧರಿಸಿ title=

Bigg Boss Season 10: ಬಿಗ್‌ಬಾಸ್‌ ಸೀಸನ್‌10 ಹಲವು ರೀತಿಯಲ್ಲಿ ಭಿನ್ನವೂ, ವಿಶಿಷ್ಟವೂ ಆಗಿದೆ. ಹಲವು ಹೊಸ ಸಂಗತಿಗಳಿವೆ ಎಂಬುದು ಮೊದಲ ದಿನದಿಂದಲೇ ಸ್ಪಷ್ಟವಾಗಿತ್ತು. ಈ ಸಲ ಪ್ರೇಕ್ಷರ ಭಾಗವಹಿಸುವಿಕೆಗೂ ಸಾಕಷ್ಟು ಅವಕಾಶಗಳಿರುವುದು ಇನ್ನೊಂದು ವಿಶೇಷ. ಬರೀ ಭಾಗವಹಿಸುವುದಷ್ಟೇ ಅಲ್ಲ, ಬಿಗ್‌ಬಾಸ್‌ ತೆಗೆದುಕೊಳ್ಳುವ ಹಲವು ಬಹುಮುಖ್ಯ ನಿರ್ಧಾರಗಳನ್ನು ಪ್ರಭಾವಿಸುವ, ನಿರ್ಣಯಿಸುವ ಪವರ್‍‌ಫುಲ್‌ ಅಧಿಕಾರವೂ ಪ್ರೇಕ್ಷಕರಿಗೆ ಇದೆ. ಹೇಗೆ ಅಂತೀರಾ? 

ಬಿಗ್‌ಬಾಸ್‌ ಕನ್ನಡ JioCinema 24ಗಂಟೆ ಉಚಿತ ಪ್ರಸಾರದಲ್ಲಿ ‘ನೀವೀಗ ಬಾಸ್‌’ ಸೆಗ್ಮೆಂಟ್‌ ಇಂಥದೊಂದು ಪವರ್‍‌ಪುಲ್‌ ಅಧಿಕಾರವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಇದರಲ್ಲಿ ಕೇಳಲಾಗುವ ಪ್ರಶ್ನೆಗೆ ಜನರು ವೋಟ್‌ಗಳು ಮನೆಯೊಳಗಿನ ಹಲವು ಮುಖ್ಯ ಸಂಗತಿಗಳನ್ನು ನಿರ್ಣಯಿಸುತ್ತವೆ. 

‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ಪ್ರಶ್ನೆಯೊಂದನ್ನು ಜನಮತಕ್ಕಾಗಿ ಇಡಲಾಗಿದೆ. ಇದರ ಮೂಲಕ ಬಿಗ್‌ಬಾಸ್‌ ಮನೆಯೊಳಗಿನ ‘ಅಸಮರ್ಥ’ರ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ಪ್ರೇಕ್ಷಕಪ್ರಭುವಿಗೆ ನೀಡಲಾಗಿದೆ.

ಇದನ್ನೂ ಓದಿ- ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಬರಲು ಪಡೆದ ಸಂಭಾವನೆ ಗೊತ್ತಾ.!

ಬಿಗ್ ಬಾಸ್ ಮನೆಯೊಳಗೆ ಎರಡು ಗುಂಪುಗಳಾಗಿರುವುದು ಗೊತ್ತೇ ಇದೆ. ಜನರ ವೋಟ್‌ನಿಂದ ನೇರವಾಗಿ ಮನೆಯೊಳಗೆ ಪ್ರವೇಶಿಸಿದ ಹತ್ತು ‘ಸಮರ್ಥ’ ಸ್ಪರ್ಧಿಗಳ ಗುಂಪು ಒಂದೆಡೆಯಿದೆ. ಜನರು ಹೋಲ್ಡ್‌ನಲ್ಲಿ ಇಟ್ಟಿರುವ ಏಳು ‘ಅಸಮರ್ಥ’ ಸ್ಪರ್ಧಿಗಳ ಗುಂಪು ಇನ್ನೊಂದೆಡೆ ಇದೆ. ಈ ಏಳು ಸ್ಪರ್ಧಿಗಳಿಗೆ ಮನೆಯೊಳಗಿನ ಕೆಲವು ಸೌಲಭ್ಯಗಳನ್ನು ಮೊಟಕುಗೊಳಿಸಲಾಗಿದೆ. ಈಗ ಅವರಲ್ಲಿ ಸಮರ್ಥರು ಯಾರು ಎಂಬುದನ್ನು ತೀರ್ಮಾನಿಸುವ ಸಂದರ್ಭ ಬಂದಿದೆ. ಅದರ ಅಧಿಕಾರವನ್ನು ಜನರಿಗೆ ನೀಡಲಾಗಿದೆ.

ಮೊದಲ ಪ್ರಶ್ನೆ ಹೀಗಿದೆ: ಈ ಏಳು ಮಂದಿ ಅಸಮರ್ಥರಲ್ಲಿ ಯಾರೆಲ್ಲ ಸಮರ್ಥರಾಗಲು ಅರ್ಹರು?
ಈ ಪ್ರಶ್ನೆಯನ್ನು ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ಜನಮತಕ್ಕಾಗಿ ಇಡಲಾಗಿದೆ. ಇಂದು (ಅ.13)ರಾತ್ರಿ ಹನ್ನೊಂದು ಗಂಟೆಯವರೆಗೆ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕಬಹುದು. ಅತಿ ಹೆಚ್ಚು ಮತ ಪಡೆದ ಸ್ಪರ್ಧಿ ಎಲ್ಲರಿಗಿಂತ ಮೊದಲು ‘ಸಮರ್ಥ’ರ ಗುಂಪಿಗೆ ಸೇರಿಕೊಳ್ಳುತ್ತಾರೆ. 

ಇದನ್ನೂ ಓದಿ- Bigg Boss 10 | ತಲೆ ಬಗ್ಗಿಸಿ ನಿಂತ್ಕೊಳ್ಳಿ.. ಗುರಾಯಿಸೋದೆಲ್ಲಾ ಬೇಡ : ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ಫಸ್ಟ್‌ ಡೇ ಪ್ರಥಮ್‌ ಕಿರಿಕ್‌

ಇಂಥ ಹಲವು ಪ್ರಶ್ನೆಗಳನ್ನು ಜನಮತಕ್ಕಾಗಿ ಇಟ್ಟು ಮನೆಯೊಳಗಿನ ಮುಖ್ಯ ಸಂಗತಿಗಳನ್ನು ನಿರ್ಧರಿಸುವ ಅಧಿಕಾರವನ್ನು ಬಿಗ್‌ಬಾಸ್‌ ಕನ್ನಡ ಜನರ ಕೈಗೆ ನೀಡುತ್ತಿದೆ. ಅದಕ್ಕಾಗಿ JioCinema 24 ಗಂಟೆ ನೇರಪ್ರಸಾರದಲ್ಲಿ ‘ನೀವೀಗ ಬಾಸ್‌’ ಸೆಗ್ಮೆಂಟ್‌ ಅನ್ನು ನೋಡುತ್ತಿರಿ. ವೋಟ್‌ ಮಾಡಿ; ನಿಮ್ಮ ಅಧಿಕಾರವನ್ನು ಚಲಾಯಿಸಿ; ನಿಮ್ಮ ಅಭಿಪ್ರಾಯವನ್ನು ಬಿಗ್‌ಬಾಸ್‌ ಮನೆಯೊಳಗೆ ತಲುಪಿಸಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News