ನವದೆಹಲಿ: ಹಿಂದಿ ಭಾಷೆಯ ವಿಚಾರವಾಗಿ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವಿನ ಟ್ವಿಟ್ಟರ್ ಸಮರ ಈಗ ದೇಶವ್ಯಾಪಿ ಭಾರಿ ಸಂಚಲನ ಮೂಡಿಸಿದೆ.ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿಕೆ ನೀಡಿದ ಸುದೀಪ್ ಗೆ ಉತ್ತರಿಸುತ್ತಾ ಅಜೇಯ್ ದೇವಗನ್ ಹಿಂದಿಯಲ್ಲಿ ಟ್ವೀಟ್ ಮಾಡಿ ಹಿಂದಿ ಮಾತೃ ಭಾಷೆಯು ಹೌದು ರಾಷ್ಟ್ರಭಾಷೆಯು ಹೌದು ಎಂದು ಹೇಳುವುದಲ್ಲದೆ ಸುದೀಪ್ ಗೆ ಕನ್ನಡದಿಂದ ಹಿಂದಿಗೆ ನಿಮ್ಮ ಚಿತ್ರಗಳನ್ನು ಯಾಕೆ ಡಬ್ ಮಾಡುತ್ತೀರಿ ಎಂದು ಹಿಂದಿಯಲ್ಲಿ ಪ್ರಶ್ನಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ನಿಮಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದರೆ ಹೇಗಿರ್ತಿತ್ತು....! ಅಜಯ್ ದೇವಗನ್ ಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್


ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕಿಚ್ಚ ಸುದೀಪ್ ನೀವು ಹಿಂದಿಯಲ್ಲಿ ಬರೆದದ್ದು ನಮಗೆ ಅರ್ಥವಾಗಿದೆ, ಒಂದು ವೇಳೆ ನಾನು ಕೂಡ ಕನ್ನಡದಲ್ಲಿ ನಿಮಗೆ ಪ್ರತಿಕ್ರಿಯಿಸಿದ್ದರೆ ಹೇಗಾಗಿರುತ್ತಿತ್ತು ಎಂದು ಹೇಳಿದ್ದಾರೆ.ಈಗ ಈ ಚರ್ಚೆಗೆ ಹೊಸ ಸೇರ್ಪಡೆಯಾಗಿ ಬಾಲಿವುಡ್ ನಟಿ ಮೂನ್ ಮೂನ್ ಸೇನ್ ಕೂಡ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿವೆ- ಮನೋಜ್ ಬಾಜ್‌ಪೇಯಿ


ಮಾಜಿ ಟಿಎಂಸಿ ಸಂಸದೆಯಾಗಿರುವ ಮೂನ್ ಮೂನ್ ಸೇನ್ ಹಿಂದಿ, ಬೆಂಗಾಲಿ, ಮಲಯಾಳಂ ಮತ್ತು ಕನ್ನಡದಲ್ಲಿ ನಟಿಸಿದ್ದಾರೆ.ಈಗ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ನಾನು 20 ಕ್ಕೂ ಭಾಷೆಗಳಲ್ಲಿ ಕೆಲಸ ಮಾಡಿದ್ದೇನೆ.ನಾನು ಎಲ್ಲಾ ರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ, ಹೆಚ್ಚಾಗಿ ನನಗೆ ಡಬ್ ಮಾಡಲಾಗಿದೆ.ತಪ್ಪು ತಿಳುವಳಿಕೆಗಳೂ ಉಂಟಾಗಿವೆ.ಬಹುತೇಕ ರಾಜ್ಯಗಳಲ್ಲಿ ಹಿಂದಿ ನಿರರ್ಗಳವಾಗಿ ಬರುವುದಿಲ್ಲ.ತಮಿಳುನಾಡಿನ ಹಳ್ಳಿಗಳಿಗೆ ಹೋಗಿ, ಅಲ್ಲಿ ಅದು ಕೇವಲ ಸನ್ನೆಯ ಭಾಷೆಯಾಗಿದೆ,ಸಂವಿಧಾನ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಎಂದೂ ಒಪ್ಪಿಕೊಂಡಿಲ್ಲ,ಅದರ ಬಗ್ಗೆ ಮಾತನಾಡಲು ನಾವ್ಯಾರು? ದಕ್ಷಿಣದ ಜನರು ಅಥವಾ ನಾಗಾಲ್ಯಾಂಡಿನ ಜನರು ಹಿಂದಿಯಲ್ಲಿ ಮಾತನಾಡುತ್ತಾರೆಯೇ? ಮುಂದಿನ ಒಂದೆರೆಡು ವರ್ಷಗಳ ಕಾಲ ನಾವು ಇಂಗ್ಲಿಷ್ ಭಾಷೆಗೆ ಅಂಟಿಕೊಳ್ಳೋಣ,ಇಡೀ ಅಂಚೆ ವ್ಯವಸ್ಥೆಯನ್ನು ನಾವು ಬದಲಾಯಿಸಬೇಕಾಗಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: Manasmita Movie Release : ಅಪ್ಪಣ್ಣ ಸಂತೋಷ್ ನಿರ್ದೇಶನದ 'ಮನಸ್ಮಿತ' ಚಿತ್ರ ಜೂ.3ಕ್ಕೆ ತೆರೆಗೆ!


ನಾನು ಸಂಸತ್ತಿನಲ್ಲಿದ್ದಾಗ, ಅನೇಕ ಜನರು ಆಡುಮಾತಿನ ಹಿಂದಿ ಮಾತನಾಡುತ್ತಿರಲಿಲ್ಲ, ಬದಲಾಗಿ ಶುದ್ಧ ಹಿಂದಿ ಮಾತನಾಡುತ್ತಿದ್ದರು,ನನ್ನಂತಹ ಮೂಲ ಹಿಂದಿಯನ್ನು ಅರ್ಥಮಾಡಿಕೊಳ್ಳುವವರಿಗೆ ಸಮಸ್ಯೆಗಳಿದ್ದವು, ಇತರರ ಬಗ್ಗೆ ಯೋಚಿಸಿ.ನಮ್ಮಲ್ಲಿ ಬಹು ಭಾಷೆಗಳಿವೆ, ಆಹಾರವಿದೆ ಮತ್ತು ನಾವು ಅದಕ್ಕೆ ಅಂಟಿಕೊಳ್ಳೋಣ.ನೀರಿನಿಂದ ಹಿಡಿದು ಉದ್ಯೋಗಗಳವರೆಗೆ ವಲಸೆಯವರೆಗಿನ ಬಹು ಸಮಸ್ಯೆಗಳನ್ನು ನಾವು ಎದುರಿಸಬೇಕಾದಾಗ ಈ ಚರ್ಚೆಯ ಅಗತ್ಯವಿಲ್ಲ ಎನಿಸುತ್ತದೆ. ನೀವು ಜನರಿಗೆ ಶೌಚಾಲಯವನ್ನು ನೀಡುತ್ತಿದ್ದೀರಿ, ಆದರೆ ಮನೆಯ ಬಗ್ಗೆ ಏನು?  ದೇಶದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.