Manasmita Movie Release : ಅಪ್ಪಣ್ಣ ಸಂತೋಷ್ ನಿರ್ದೇಶನದ 'ಮನಸ್ಮಿತ' ಚಿತ್ರ ಜೂ.3ಕ್ಕೆ ತೆರೆಗೆ!

ನಿರ್ದೇಶಕ ಅಪ್ಪಣ್ಣ  ಸಂತೋಷ್ ಅವರಿಗೆ ಇದು ಚೊಚ್ಚಲ ಚಿತ್ರವಾಗಿದೆ. ತನ್ನ ಚೊಚ್ಚಲ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ಹೀಗಾಗಿ ಚಿತ್ರದಲ್ಲಿ ಹೊಸಬರ ದಂಡೇ ಇದೆ. ಜೊತೆಗೆ ಹಿರಿಯ ಕಲಾವಿದರು ಕೂಡ ಸಾಥ್ ನೀಡಿದ್ದಾರೆ. 

Written by - Zee Kannada News Desk | Last Updated : Apr 28, 2022, 08:33 PM IST
  • ಹಲವು ವರ್ಷಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಸಂಗೀತ ಶೃತಿ ಹರಿಸಿ ಮೋಡಿ ಮಾಡಲು ಬರುತ್ತಿದೆ
  • ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ಸಿನಿಮಾ ಮನಸ್ಮಿತ.
  • ಅಪ್ಪಣ್ಣ ಸಂತೋಷ್ ಅವರು, ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ
Manasmita Movie Release : ಅಪ್ಪಣ್ಣ ಸಂತೋಷ್ ನಿರ್ದೇಶನದ 'ಮನಸ್ಮಿತ' ಚಿತ್ರ ಜೂ.3ಕ್ಕೆ ತೆರೆಗೆ! title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಫ್ಯಾಮಿಲಿ, ರೌಡಿಸಂ, ಹೀರೋಯಿಸಂ ಚಿತ್ರಗಳ ಅಬ್ಬರದ ನಡುವೆಯೇ ಅಪ್ಪಣ್ಣ ಸಂತೋಷ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿ ಚಿತ್ರವೊಂದು ಬುಡುಗಡೆಗೆ ಸಿದ್ಧವಾಗಿದೆ.

ಹೌದು, ಹಲವು ವರ್ಷಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಸಂಗೀತ ಶೃತಿ ಹರಿಸಿ ಮೋಡಿ ಮಾಡಲು ಬರುತ್ತಿದೆ ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ಸಿನಿಮಾ ಮನಸ್ಮಿತ. 

ಇದನ್ನೂ ಓದಿ : ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ನಟರ ಸಿನಿಮಾಗಳ ಹೆಡಮುರಿಗೆ ಕಟ್ಟಿದ ಕೆಜಿಎಫ್ 2...!

ಮನಸ್ಮಿತ ಚಿತ್ರದ ಮೊದಲ ಹಾಡು ಈಗಾಗಲೇ ಸಿನಿ ಪ್ರಿಯರ ಮನಗೆದ್ದಿದೆ. ಇದೀಗ ಏಪ್ರಿಲ್ 28ರಂದು ಚಿತ್ರದ ಎರಡನೇ ಹಾಡನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. 

ನಿರ್ದೇಶಕ ಅಪ್ಪಣ್ಣ  ಸಂತೋಷ್ ಅವರಿಗೆ ಇದು ಚೊಚ್ಚಲ ಚಿತ್ರವಾಗಿದೆ. ತನ್ನ ಚೊಚ್ಚಲ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ಹೀಗಾಗಿ ಚಿತ್ರದಲ್ಲಿ ಹೊಸಬರ ದಂಡೇ ಇದೆ. ಜೊತೆಗೆ ಹಿರಿಯ ಕಲಾವಿದರು ಕೂಡ ಸಾಥ್ ನೀಡಿದ್ದಾರೆ. 

ಸ್ವರ ಸಂಗೀತದ ತಾಳದ ಬೆಸುಗೆ ಜೊತೆಗೆ ಪ್ರೀತಿಯ ಕಥೆ ಪ್ರೇಕ್ಷಕರನ್ನ ಮೆಚ್ಚಿಸಲು ಬರುತ್ತಿದೆ. ಜೂನ್ 3ರಂದು ಮನಸ್ಮಿತ ಚಿತ್ರ ಬಿಡುಗಡೆಯಾಗಲಿದೆ.  

ಮನಸ್ಮಿತ ಸಿನಿಮಾದ ಮೊದಲ ಹಾಡಿಗೆ ಕ್ಲಾಸಿಕ್ ಟಚ್ ನೀಡಲಾಗಿತ್ತು. ವಾರದ ಹಿಂದೆ ರಿಲೀಸ್ ಆದ ಹಾಡು ಈಗಾಗಾಗಲೇ ಸಿನಿ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಪೂರ್ಣ ಶಾಸ್ತ್ರೀಯ ಸಂಗೀತದಲ್ಲಿ ಕ್ಲಾಸಿಕಲ್ ನೃತ್ಯ ಸಂಯೋಜನೆಯ ನೀಲ ಮೇಘ ಶ್ಯಾಮ ಹಾಡಿಗೆ ಜನರು ಫಿದಾ ಆಗಿದ್ದಾರೆ.  ಅದ್ರಲ್ಲೂ ಶಂಕರ್ ಮಹದೇವನ್ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಜನರನ್ನ ಮೈಮರೆಸುತ್ತದೆ. ಈ ಹಾಡಿಗೆ ಮಂಜು ಎಮ್ ದೊಡ್ಡಮಣಿ ಅವರು ಅಕ್ಷರ ಪದ ಜೋಡಣೆ ಮಾಡಿದ್ದಾರೆ. 

ಇದೀಗ ಎರಡನೇ ಹಾಡು ಬಿಡುಗಡೆಯಾಗಿದ್ದು, ಕಂಪ್ಲೀಟ್ ಮೆಲೋಡಿ ಸಾಂಗ್.  "ಮುದ್ದಾದ ಬಾನುಲಿ ವರದಿ" ಹಾಡು ಕೂಡ ಇಂಪಾಗಿದೆ. ಚಿತ್ರದಲ್ಲಿ ನಾಯಕ ನಾಯಕಿಯ ಕೆಮಿಸ್ಟ್ರಿ ಅದ್ಭುತವಾಗಿ ತೋರಿಸಲಾಗಿದೆ.  ಈ ಹಾಡನ್ನು ಶೂಟ್ ಮಾಡಿರುವ ಲೊಕೇಶನ್ ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಇನ್ನು ಚಿತ್ರದ ಸಂಗೀತ ನಿರ್ದೇಶನ ದ ಜವಾಬ್ದಾರಿಯನ್ನು ಹರಿಕಾವ್ಯ ವಹಿಸಿದ್ದಾರೆ. ಅಲ್ಲದೆ ಚಿತ್ರದ ಎರಡನೇ ಹಾಡಿಗೆ ಹರಿಕಾವ್ಯ ಧ್ವನಿಯಾಗಿ ಜೀವ ತುಂಬಿದ್ದಾರೆ. ಹರಿಕಾವ್ಯ ಜೊತೆಗೆ ಹರಿಹರನ್, ಸನಾ ಮೈದುಟ್ಟಿ ಕೂಡ ಸ್ವರಗೂಡಿಸಿದ್ದಾರೆ. ಈ ಹಾಡನ್ನು ಕೆ. ಕಲ್ಯಾಣ್ ರಚಿಸಿದ್ದಾರೆ. 

ಒಟ್ಟಾರೆ  ಮನಸ್ಮಿತ ಸಿನಿಮಾ ಹಾಡುಗಳು ಮತ್ತು ತಾರಾ ಬಳಗದ ಮೂಲಕವೇ ನಿರೀಕ್ಷೆ ಹುಟ್ಟುಹಾಕಿದೆ.  

ಸೀತಮ್ಮ ವಿ.ಟಿ ನಿರ್ಮಾಣದ ಸಿನಿಮಾದಲ್ಲಿ ಚರಣ್ ಗೌಡ , ಸಂಜನಾ ದಾಸ್ ,  , ಪಲ್ಲವಿ ಪುರೋಹಿತ್ ಅತುಲ್ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ  ಸುಚೇಂದ್ರ ಪ್ರಸಾದ್ , ರಾಜೇಂದ್ರ ಕಾರಂತ್,  ಓ. ಸುರೇಶ್ ಅಲಿಯಾಸ್ ಮುಗು ಸುರೇಶ್, ಕರಿ ಸುಬ್ಬು , ಶಿಲ್ಪಾ, ವೀಣಾ ಪೊನ್ನಪ್ಪ, ಸೌಭಾಗ್ಯ , ಪ್ರದೀಪ್ ಶಾಸ್ತ್ರಿ, ಪ್ರದೀಪ್ ಪೂಜಾರಿ ಸೇರಿದಂತೆ ಹಲವರ ತಾರಾಗಣವಿದೆ. ಇನ್ನು ಚಿತ್ರಕ್ಕೆ ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕ, ಮಧು ಅವರ ಸಂಕಲನವಿದೆ.

ಇದನ್ನೂ ಓದಿ : ‘1975’ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ ಸಿಂಧೂ ಲೋಕನಾಥ್..

ಅಂದ ಹಾಗೆ, ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಅಪ್ಪಣ್ಣ  ಸಂತೋಶ್ ಸಿನಿಮಾದ ಜರ್ನಿ ಬಗ್ಗೆ ಮಾತನಾಡ್ತಾ ಕೆಲ ವಿಚಾರಗಳನ್ನ ಹಂಚಿಕೊಂಡಿದ್ಧಾರೆ.  

ಅಪ್ಪಣ್ಣ ಸಂತೋಷ್ ಅವರು, ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ.. ಬಾಲ್ಯದಿಂದಲೇ ನಟನೆ ಸಿನಿಮಾರಂಗದ ಆಸೆ ಬೆಳೆಸಿಕೊಂಡವರು ನಂತರ ಕಂಪನಿಗಳಲ್ಲಿ ಕೆಲಸಗಳನ್ನ ಮಾಡುತ್ತಾ ಸೇಲ್ಸ್ ಎಕ್ಸಿಕ್ಯುಟಿವ್ ನಿಂದ ಹಿಡಿದು ಬ್ಯುಸಿನೆಸ್ ಮ್ಯಾನೇಜರ್ ವರೆಗೂ ಅನುಭವ ಪಡೆದುಕೊಂಡಿದ್ದರು. ಬಳಿಕ ಸ್ವಂತ ಉದ್ಯಮ ಶುರು ಮಾಡಿದ್ದರು. ಈ ನಡುವೆ, ಸಿನಿಮಾ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಅಪ್ಪಣ್ಣ ಸಂತೋಷ್ ಅವರಿಗೆ ಹಂಸಲೇಖಾ ಅವರ ಪರಿಚಯವಾಯ್ತು. ಹಾಗಾಗಿ ಹಂಸಲೇಖ ಅವರ ಶಕುಂತಲೆ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿದ್ದರು. ಆದ್ರೆ ಕೆಲವು ಕಾರಣಗಳಿಂದ  ಆ ಸಿನಿಮಾ ಡ್ರಾಪ್ ಔಟ್ ಆಯ್ತು.. ಆದ್ರೂ ಹಠ ಬಿಡದೇ ಸಿನಿಮಾ ಮಾಡಲೇಬೇಕೆಂಬ ಛಲದಲ್ಲಿ ಮನಸ್ಮಿತ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಪ್ಪಣ್ಣ ಸಂತೋಷ್ ಅವರ ಹೊಸ ಪ್ರಯತ್ನ ಶುಭವಾಗಲಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News