ಈ ನಟ ಮತ್ತು ನಿರ್ದೇಶಕರ ಕಾಂಬಿನೇಷನ್ನ 2ನೇ ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ!
ಕನ್ನಡದ ಕೆಲ ನಟರು ಮತ್ತು ನಿರ್ದೇಶಕರ ಕಾಂಬಿನೇಷನ್ನಲ್ಲಿ ಬಂದ ಸಿನಿಮಾಗಳು ಸೂಪರ್ ಹಿಟ್ ಆಗುವುದರ ಜೊತೆಗೆ ಸಿನಿರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಅಷ್ಟೇ ಅಲ್ಲದೆ ಅವರ ಕಾಂಬಿನೇಷನ್ ನ ಮುಂದಿನ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಉಪೇಂದ್ರ ಮತ್ತು ಶಿವರಾಜ್ ಕುಮಾರ್
ಓಂ ಕನ್ನಡ ಚಿತ್ರರಂಗದ ಪಾಲಿಗೆ ಎಂಟನೇ ಅದ್ಭುತ ಎಂದು ಬಣ್ಣಿಸಬಹುದಾದ ಚಿತ್ರ. 1995ರಲ್ಲಿ ತೆರಕಂಡ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ನಾಯಕನಾಗಿ ನಟಿಸಿದರು. ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರೆ ಪಾರ್ವತಮ್ಮ ರಾಜಕುಮಾರ್ ತಮ್ಮ ಶ್ರೀ ವಜ್ರೇಶ್ವರಿ ಕಂಬೈನ್ಸ್ ಅಢಿಯಲ್ಲಿ ಚಿತ್ರ ನಿರ್ಮಿಸಿದ್ದರು. ಈ ಚಿತ್ರ ಹಲವು ಬಾರಿ ಮರು ಬಿಡುಗಡೆಯಾಗಿ ಹಲವು ದಾಖಲೆ ನಿರ್ಮಿಸಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರವೊಂದರಲ್ಲಿಯೇ ಸುಮಾರು 30 ಬಾರಿ ತೆರೆಕಂಡಿದೆ. ಈ ಚಿತ್ರದಲ್ಲಿ ಉಪೇಂದ್ರ ಬೆಂಗಳೂರು ಭೂಗತ ಲೋಕದ ವಾಸ್ತವ ವ್ಯಕ್ತಿಗಳ ದರ್ಶನ ಮಾಡಿಸಿದ್ದರು.1995ರಲ್ಲಿ ಮೂಡಿಬಂದ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಬ್ಲಾಕ್ ಬಸ್ಟರ್ ಆಗಿತ್ತು. ಅವರ ಅಭಿನಿಮಾಗಳು ಮತ್ತೆ ಇವರಿಬ್ಬರ ಕಾಂಬಿನೇಷನ್ ನ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಪ್ರಶಾಂತ್ ನೀಲ್ ಮತ್ತು ಶ್ರೀಮುರುಳಿ
2014ರಲ್ಲಿ ಬಂದ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾ ಶ್ರೀಮುರಳಿಗೆ ಬಿಗ್ ಬ್ರೇಕ್ ನೀಡಿತ್ತು. ಇದು ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಿಮಾ. `ಉಗ್ರಂ' ಮುರಳಿ ಸಿನಿಜೀವನದ ಕಳಸಪ್ರಾಯ ಚಿತ್ರ. ಈ ಸಿನಮಾ ಅದ್ಭುತ ಯಶಸ್ಸು ಕಂಡಿತು. ತಮ್ಮ ಮೊದಲ ನಿರ್ದೇಶನದಲ್ಲೇ ಪ್ರಶಾಂತ್ ನೀಲ್ ಒಳ್ಳೆಯ ಹೆಸರು ಗಳಿಸಿದರು. ಪ್ರಶಾಂತ್ ನೀಲ್ ಮತ್ತು ಶ್ರೀಮುರುಳಿ ಕಾಂಬಿನೇಷನ್ ಮತ್ತೊಂದು ಸಿನಿಮಾಗಾಗಿ ಸಿನಿರಸಿಕರು ಕಾಯುತ್ತಿದ್ದಾರೆ.
ಸಿಂಪಲ್ ಸುನಿ-ರಕ್ಷಿತ್ ಶೆಟ್ಟಿ
2013ರಲ್ಲಿ ಬಿಡುಗಡೆಯಾದ ಸಿಂಪಲ್ ಸುನಿ ನಿರ್ದೇಶನದ ಹಾಗೂ ರಕ್ಷಿತ್ ನಟನೆಯ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಹಿಟ್ ಆಗಿತ್ತು. ಈ ಸಿನಿಮಾ ಯುವಜನತೆಗೆ ಸಖತ್ ಇಶವಾಗಿತ್ತು. ಈ ಸಿನಿಮಾ ರಕ್ಷಿತ್ ಶೆಟ್ಟಿ ಅವರ ಸಿನಿಜೀವನಕ್ಕೆ ಬಿಗ್ ಬ್ರೇಕ್ ನೀಡಿತ್ತು. ಮತ್ತೆ ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿದರೆ ಹಿಟ್ ಆಗುವುದಂತೂ ಪಕ್ಕ.
ಪ್ರೇಮ್-ದರ್ಶನ್
2003ರಲ್ಲಿ ಬಿಡುಗಡೆಗೊಂಡ 'ಕರಿಯ' ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಪ್ರೇಮ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಇದೊಂದು ಗ್ಯಾಂಗ್ ಸ್ಟರ್ ಸಿನಿಮಾವಾಗಿತ್ತು. ಕರಿಯ ಚಿತ್ರದಲ್ಲಿ ದರ್ಶನ್ ನಾಯಕನಾಗಿ ನಟಿಸಿದ್ದು, ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಿರ್ದೇಶಕ ಪ್ರೇಮ್ ಮತ್ತು ನಾಯಕ ನಟ ದರ್ಶನ್ ಇಬ್ಬರಿಗೂ ಈ ಚಿತ್ರ ಟರ್ನಿಂಗ್ ಪಾಯಿಂಟ್ ಆಗಿತ್ತು.
ಸಂತೋಷ್ ಆನಂದ್ ರಾಮ್-ಯಶ್
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'Mr & Mrs ರಾಮಾಚಾರಿ' ಸಿನಿಮಾ 8 ವರ್ಷಗಳ ಹಿಂದೆ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅಲ್ಲಿಯವರೆಗಿನ ಎಲ್ಲಾ ಕನ್ನಡ ಸಿನಿಮಾಗಳ ಬಾಕ್ಸಾಫೀಸ್ ದಾಖಲೆ ಅಳಿಸಿ ಇಂಡಸ್ಟ್ರಿ ಹಿಟ್ ಲಿಸ್ಟ್ ಸೇರಿತ್ತು. 2014ರ ಡಿಸೆಂಬರ್ 25ರಂದು 'Mr & Mrs ರಾಮಾಚಾರಿ' ಸಿನಿಮಾ ಬಿಡುಗಡೆ ಆಗಿತ್ತು. ಮೊದಲ ವಾರ ಸಿನಿಮಾ ಎಲ್ಲಾ ಕಡೆ ಹೌಸ್‌ಫುಲ್ ಆಗಿತ್ತು. ಕೆಲವೆಡೆ ಪ್ರೇಕ್ಷಕರು ಟಿಕೆಟ್‌ಗಾಗಿ ಪರದಾಡುವಂತಾಗಿತ್ತು. ಶ್ರೀನಾಥ್, ಅಚ್ಯುತ್ ಕುಮಾರ್, ಮಾಳವಿಕಾ, ಅರುಣಾ ಬಾಲರಾಜ್ ಚಿತ್ರದ ತಾರಾಗಣದಲ್ಲಿದ್ದರು. ಎಲ್ಲಾ ಕಮರ್ಷಿಯಲ್ ಅಂಗಳನ್ನು ಹದವಾಗಿ ಬೆರಸಿ ಚಿತ್ರವನ್ನು ಸೊಗಸಾಗಿ ಕೊಟ್ಟಿಕೊಟ್ಟಿದ್ದರು. ಮತ್ತೆ ಯಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ಸಿನಿಮಾಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ-ಅಣ್ಣಾವ್ರ ಮೊಮ್ಮಗ ಅಪ್ಪು ಪ್ರೀತಿಯ ಪುತ್ರ ಯುವ ಹೀರೋ ಆಗಿ ಲಾಂಚ್ ಆಗೋ ಸಮಯ ಬಂದೇ ಬಿಡ್ತು!
ಯೋಗರಾಜ್ ಭಟ್-ಕಿಚ್ಚ ಸುದೀಪ್
ಕನ್ನಡ ಚಿತ್ರಗಳಿಗೆ ಹೊಸತನದ ಸ್ಪರ್ಶ ನೀಡಿದವರು ಯೋಗರಾಜ್ ಭಟ್. ನಿರ್ದೇಶಕ ಯೋಗರಾಜ್ ಭಟ್ಟರನ್ನು ಕನ್ನಡದ ವಿಕಟ ಕವಿ ಅಂತಲೇ ಕರೆಯುತ್ತಾರೆ. ಹಾಗಾಗಿ ಭಟ್ಟರು ಯಾವುದೇ ಸಿನಿಮಾ ಮಾಡುತ್ತಿದ್ದಾರೆ ಅಂದರೂ ಕೂಡ ನಿರೀಕ್ಷೆಗಳು ಹುಟ್ಟಿ ಕೊಳ್ಳುತ್ತವೆ. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಅದೇ ರೀತಿ 2004ರಲ್ಲಿ ಮೂಡಿಬಂದ ಯೋಗರಾಜ್ ಭಟ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನ ರಂಗ SSLC ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾದಲ್ಲಿನ ಡೈಲಾಗ್ ಗಳು ಸಿನಿರಸಿಕರಿಗೆ ಹತ್ತಿರವಾಗಿದ್ದವು.
ನರ್ತನ್ - ಶಿವರಾಜ್ ಕುಮಾರ್
ನಿರ್ದೇಶಕ ನರ್ತನ್ ಅವರ ಚೊಚ್ಚಲ ಸಿನಿಮಾ ಮಫ್ತಿ. ಈ ಸಿನಿಮಾದಲ್ಲಿ ಶ್ರೀಮುರಳಿ ನಾಯಕನಾಗಿ ನಟಿಸಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 2017ರಲ್ಲಿ ಬಿಡುಗಡೆಯಾದ ಈ ಸಿನಿಮಾ ಶಿವಣ್ಣನ ವೃತ್ತಿ ಜೀವನದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಿರ್ದೇಶಕ ನರ್ತನ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಶಶಾಂಕ್ ಮತ್ತು ಸುದೀಪ್
2013ರಲ್ಲಿ ಬಂದ ಶಶಾಂಕ್ ಮತ್ತು ಸುದೀಪ್ ಕಾಂಬಿನೇಷನ್ನ ಬಚ್ಚನ್ ಸಿನಿಮಾ ಹಿಟ್ ಕೂಡ ಒಳ್ಳೆಯ ಹೆಸರು ಮಾಡಿತ್ತು. ಸುದೀಪ್ ಪಾತ್ರದ ವಿಭಿನ್ನ ಪಾತ್ರಗಳು ಪೈಕಿ 'ಬಚ್ಚನ್' ಕೂಡ ಒಂದಾಗಿತ್ತು. ಕಿಚ್ಚ ಇಲ್ಲ ಕೋಪವನ್ನು ಹೊತ್ತ ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಶಶಾಂಕ್ ಹಾಗೂ ಸುದೀಪ್ ಒಂದಾಗಿದ್ದರು. ರವಿಶಂಕರ್ ಖಳನಾಯಕನಾಗಿ, ಪೋಲಿಸ್ ಪಾತ್ರದಲ್ಲಿ ತೆಲುಗಿನ ಜಗಪತಿ ಬಾಬು ನಟಿಸಿದ್ದರು. ಚಿತ್ರ 10 ಕೋಟಿಯಲ್ಲಿ ನಿರ್ಮಾಣವಾಗಿ 42 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸಿನಿಮಾ ಮೆಲ್ಬೋರ್ನ್, ಕ್ಯಾಲಿಫೊರ್ನಿಯ, ಜರ್ಮನಿ ಸೇರಿದಂತೆ ಸಾಕಷ್ಟು ದೇಶದಲ್ಲಿ ಬಿಡುಗಡೆಯಾಗಿತ್ತು.
ಇದನ್ನೂ ಓದಿ-'ಕಾಂತಾರ' ಗೆಲುವಿನ ಬೆನ್ನಲ್ಲೆ ರಿಷಬ್ ಜೊತೆ 'ಕಾಂತಾರ ಪ್ರೀಕ್ವೆಲ್' ಗೆ ನಡೆದಿದೆ ಭರ್ಜರಿ ಸಿದ್ಧತೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.