ಅಣ್ಣಾವ್ರ ಮೊಮ್ಮಗ ಅಪ್ಪು ಪ್ರೀತಿಯ ಪುತ್ರ ಯುವ ಹೀರೋ ಆಗಿ ಲಾಂಚ್ ಆಗೋ ಸಮಯ ಬಂದೇ ಬಿಡ್ತು!

ಏನೇ ಮಾಡಿದ್ರು ಪಕ್ಕಾ ಪ್ಲಾನ್ ಮಾಡಿಕೊಂಡೆ ಮಾಡುವ ಹೊಂಬಾಳೆ ಟೀಮ್ ಯುವಮೊದಲ ಚಿತ್ರಕ್ಕೂ ಭರ್ಜರಿ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಇಳಿದಿದ್ದಾರೆ.. ಹಾಗಾದ್ರೆ ಅದ್ಯಾವ ಶುಭದಿನದಂದು ಯುವ ಸಿನಿಮಾ ಸೆಟ್ಟೇರುತ್ತೆ ಅಂತ ಕೇಳಿದ್ರೆ ಅದಕ್ಕೆ ನಮ್ಮ ಉತ್ತರ...

Written by - YASHODHA POOJARI | Edited by - Yashaswini V | Last Updated : Mar 2, 2023, 08:08 AM IST
  • ಅಪ್ಪು ಅನುಪಸ್ಥಿತಿಯಲ್ಲಿ ಯುವ ಮೊದಲ ಚಿತ್ರಕ್ಕೆ ಶಿವಣ್ಣ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ಕೊಡಲಿದ್ದಾರೆ
  • ಅಪ್ಪು ನೆನಪಲ್ಲೇ ಪವರ್ ಸ್ಟಾರ್ ಹುಟ್ಟು ಹಬ್ಬದ ದಿನದಂದು ಚಿತ್ರದ ಶೂಟಿಂಗ್ ಶುರು ಮಾಡಲು ಸಂತೋಷ್ ಆನಂದ್ ರಾಮ್ ಈಗಾಗಲೇ ಶೆಡ್ಯೂಲ್ ಫಿಕ್ಸ್ ಮಾಡಿದ್ದಾರೆ.
  • ಇದೇ ವರ್ಷ ಯುವ ಚಿತ್ರವನ್ನು ಅದ್ದೂರಿಯಾಗಿ ರಿಲೀಸ್ ಮಾಡುವ ಅಲೋಚನೆಯಲ್ಲಿದ್ದಾರೆ ಹೊಂಬಾಳೆ ಬಳಗ.
ಅಣ್ಣಾವ್ರ ಮೊಮ್ಮಗ ಅಪ್ಪು ಪ್ರೀತಿಯ ಪುತ್ರ ಯುವ ಹೀರೋ ಆಗಿ ಲಾಂಚ್ ಆಗೋ ಸಮಯ ಬಂದೇ ಬಿಡ್ತು! title=
Yuva RajKumar

ಬೆಂಗಳೂರು: ದೊಡ್ಮನೆ ಅಭಿಮಾನಿಗಳ ಎರಡು ವರ್ಷದ ಸುಂದರ ಕನಸೊಂದು ಇನ್ನೆರಡು ದಿನಗಳಲ್ಲಿ ನನಸಾಗಲಿದೆ.. ಪವರ್ ಸ್ಟಾರ್ ನ ಪವರ್ ಫುಲ್ ಆಗಿ ಬೆಳ್ಳೆತೆರೆ ಮೇಲೆ ತೋರಿಸಲು ಪ್ಲಾನ್ ಮಾಡಿದ್ದ ಹೊಂಬಾಳೆ ಬಳಗ.. ಅಪ್ಪು ಇಲ್ಲದ ನೋವಲ್ಲಿ ಯುವನನ್ನು ಹೀರೋ ಆಗಿ ಲಾಂಚ್ ಮಾಡೋಕೆ ಸಕಲ ಸಿದ್ದತೆಗಳಾಗ್ತಿವೆ.. ಹಾಗಾದ್ರೆ ಅಣ್ಣಾವ್ರ ಮೊಮ್ಮಗ ಅಪ್ಪು ಪ್ರೀತಿಯ ಪುತ್ರ ಯುವ ಹೀರೋ ಆಗಿ ಲಾಂಚ್ ಆಗೋದ್ಯಾವಾಗ ಅಂತೀರಾ ಇಲ್ಲಿದೆ ಅದರ ಕಂಪ್ಲೀಟ್ ಡಿಟೈಲ್ಸ್...

ಅಪ್ಪು ಎಂಬ ಆಲದಮರ ಉಸಿರು ಚೆಲ್ಲದೆ ನಮ್ಮ ಜೊತೆಯೇ ಹಸಿರಾಗಿ ಇದ್ದಿದ್ರೆ, ಆ ನೆರಳಲ್ಲಿ ರಾಘಣ್ಣನ ಕಿರಿಯ ಪುತ್ರ ಯುವರಾಜ್ ನಾಯಕನಾಗಿ ಚಂದನ ವನಕ್ಕೆ ಬಲಗಾಲಿಟ್ಟು ಬೆಳ್ಳಿ ತೆರೆ ಮೇಲೆ ರಾರಾಜಿಸಿ ಬಿಡ್ತಿದ್ರು.. ಆದ್ರೆ ವಿಧಿಯ ಕ್ರೂರತೆ ಅಪ್ಪು ಶರಣಾಗಿದ್ದು, ಯುವ ನಾಯಕನಾಗಿ ನಟಿಸೋದು ಕೊಂಚ ತಡವಾಗಿದೆ... ಪಿಅರ್ ಕೆ ಪ್ರೋಡಕ್ಷನ್ ನಲ್ಲಿ ಯುವನನ್ನು ಲಾಂಚ್ ಮಾಡಲು ಅಪ್ಪು ಕನಸು ಕಂಡಿದ್ರು.. ಆದ್ರೆ ಕನಸು ಕನಸಾಗೆ ಉಳಿಯಿತು. ಅಪ್ಪು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ರೆ ಏನಂತೆ ಅವ್ರು ನಾವು ಮಾಡೊ ಪ್ರತಿ ಕೆಲಸದಲ್ಲೂ ನಮ್ಮ ಜೊತೆ ಇರ್ತಾರೆ ಎಂದು ಕೊಂಡು  ಕೆಲಸ ಮಾಡ್ತಿರುವ ಹೊಂಬಾಳೆ ಫಿಲಂಸ್ ಅಪ್ಪು ಕನಸ್ಸನ್ನು ನನಸು ಮಾಡೊಸಲುವಾಗಿ.. ಅಪ್ಪು ಗಾಗಿ ಹೆಣೆಸಿದ್ದ ಕಥೆಯಲ್ಲಿ ಯುವರಾಜ್ ಕುಮಾರ್ ನ ಸ್ಯಾಂಡಲ್ ವುಡ್ ಗೆ ಕರೆತರೋದಾಗಿ ಘೋಷಿಸಿತ್ತು.

ಅಪ್ಪು ಅಗಲಿಕೆ‌ ನಂತ್ರ ಯಾವಾಗ ಅಪ್ಪು ಮಾಡಬೇಕಿದ್ದ ಚಿತ್ರದಲ್ಲಿ ಯುವ ನಟಿಸ್ತಾರೆ ಅಂತ ಗೊತ್ತಾಯ್ತೋ ಆ ಗಳಿಗೆಯಿಂದಲೇ ಆ ಅಮೃತಗಳಿಗೆ ಯಾವಾಗ ಬರುತ್ತೆ ಅಂತ ಸಮಸ್ತ ದೊಡ್ಮನೆ ಅಭಿಮಾನಿಗಳು ಕಾಯ್ತಿದ್ರು. ಈಗ ಕೊನೆಗೂ ದೊಡ್ಮನೆ ದೇವರುಗಳ ಆಸೆಗೆ ಪರಮಾತ್ಮ ಅಸ್ತು ಎಂದಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬರುವ ಯುವ ಮೊದಲ ಚಿತ್ರಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಇದನ್ನೂ ಓದಿ- 7 ವರ್ಷ ಡೇಟಿಂಗ್... ಮದುವೆಯಾದ ಬಳಿಕ ಕೈಕೊಟ್ಟ ಸ್ಟಾರ್ ನಟ: ಈಡೇರಲೇ ಇಲ್ಲ ಈ ನಟಿಯ ಕನಸು!

ಏನೇ ಮಾಡಿದ್ರು ಪಕ್ಕಾ ಪ್ಲಾನ್ ಮಾಡಿಕೊಂಡೆ ಮಾಡುವ ಹೊಂಬಾಳೆ ಟೀಮ್ ಯುವಮೊದಲ ಚಿತ್ರಕ್ಕೂ ಭರ್ಜರಿ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಇಳಿದಿದ್ದಾರೆ.. ಹಾಗಾದ್ರೆ ಅದ್ಯಾವ ಶುಭದಿನದಂದು ಯುವ ಸಿನಿಮಾ ಸೆಟ್ಟೇರುತ್ತೆ ಅಂತ ಕೇಳಿದ್ರೆ ಅದಕ್ಕೆ ನಮ್ಮ ಉತ್ತರ  ಮಾರ್ಚ್ 3...

ಅಪ್ಪು ಕಳೆದುಕೊಂಡು ನೋವಲ್ಲಿದ್ದ  ಪವರ್ ಫ್ಯಾನ್ಸ್ ಗಳ ಅಂಗಳದಲ್ಲಿ ನಿರೀಕ್ಷೆ ಮತ್ತು ಭರವಸೆ ಮೂಡಿಸಿದ್ದ ಯುವ ಮೊದಲ ಚಿತ್ರ ಪವರ್ ಸ್ಟಾರ್ ಹುಟ್ಟಿದ ಅದೃಷ್ಟದ ತಿಂಗಳಾದ ಮಾರ್ಚ್ನಲ್ಲಿ ಸೆಟ್ಟೇರಲಿದೆ‌. ನಾಳೆ ಅಂದ್ರೆ ಮಾರ್ಚ್ 3 ನೇ ತಾರೀಖು ದೊಡ್ಮನೆ ಮಂದಿಯ ಸಮ್ಮುಖದಲ್ಲಿ ಅಶೋಕ ಹೋಟೆಲ್ ನಲ್ಲಿ ಸಿಂಪಲ್ ಆಗಿ ಆದ್ರು ಸಂಭ್ರಮಕ್ಕೆ ಕೊರತೆಯಿಲ್ಲದಂತೆ ಯುವ ಅಭಿನಯದ ಮೊದಲ ಚಿತ್ರ ಗ್ರ್ಯಾಂಡ್ ಆಗಿ ಸೆಟ್ಟೇರಲಿದೆ.

ವಿಶೇಷ ಅಂದ್ರೆ ಆದೇ ದಿನವೇ ಚಿತ್ರದ ಟೈಟಲ್ ಟೀಸರ್ ಅನ್ನು ಲಾಂಚ್ ಮಾಡಿ ದೊಡ್ಮನೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡೊಕೆ ಸಂತೋಷ್ ಆನಂದ್ ರಾಮ್ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಸಖತ್ ಎಫರ್ಟ್ ಹಾಕಿ ನಗರದ ಮಿನರ್ವ ಮಿಲ್ ನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಟೈಟಲ್ ಟೀಸರ್ ಶೂಟ್ ಮಾಡಿರುವ ಸಂತೋಷ್ ಆನಂದ್ ರಾಮ್ ಸದ್ಯ ಅದನ್ನ ಎಡಿಟ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದು, ಇವತ್ತು ಟೀಸರ್ ಕೆಲಸ ಕಂಪ್ಲೀಟ್ ಮಾಡಿ. ಮಾರ್ಚ್ ಮೂರನೇ ತಾರೀಖು ಚಿತ್ರದ ಮುಹೂರ್ತ ಮುಗಿಸಿ, ನಂತರ ಟೀಸರ್ ಅನ್ನು ಅಭಿಮಾನಿಗಳಿಗೆ ಅರ್ಪಿಸಲಿದ್ದಾರೆ.

ಇದನ್ನೂ ಓದಿ- ಪ್ರಪಂಚದ ಅತೀ ದೊಡ್ಡ ಥಿಯೇಟರ್‌ನಲ್ಲಿ ಆರ್‌ಆರ್‌ಆರ್‌ ಸ್ಪೆಷಲ್‌ ಸ್ಕ್ರೀನಿಂಗ್‌..! ಎಲ್ಲಿ.. ಯಾವಾಗ..?

ಅಪ್ಪು ಅನುಪಸ್ಥಿತಿಯಲ್ಲಿ ಯುವ ಮೊದಲ ಚಿತ್ರಕ್ಕೆ ಶಿವಣ್ಣ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ಕೊಡಲಿದ್ದು, ಅಪ್ಪು ನೆನಪಲ್ಲೇ ಪವರ್ ಸ್ಟಾರ್ ಹುಟ್ಟು ಹಬ್ಬದ ದಿನದಂದು ಚಿತ್ರದ ಶೂಟಿಂಗ್ ಶುರು ಮಾಡಲು ಸಂತೋಷ್ ಆನಂದ್ ರಾಮ್ ಈಗಾಗಲೇ ಶೆಡ್ಯೂಲ್ ಫಿಕ್ಸ್ ಮಾಡಿದ್ದಾರೆ. ಇದಲ್ಲದೆ ಯುವ ಚಿತ್ರಕ್ಕೆ ಅಂದು ಹೇಳಿದಂತೆ ಕನ್ನಡದ ಹುಡುಗಿ ರುಕ್ಮಿಣಿ ವಸಂತ ಅವರನ್ನು ಫೈನಲ್ ಮಾಡ್ಕೊಂಡು.. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರನ್ನು ಟೀಮ್ ಗೆ ಸೇರಿಸ್ಕೊಂಡು ಒಂದೊಳ್ಳೆ ಚಿತ್ರ ಮಾಡಿ, ಇದೇ ವರ್ಷ ಯುವ ಚಿತ್ರವನ್ನು ಅದ್ದೂರಿಯಾಗಿ ರಿಲೀಸ್ ಮಾಡುವ ಅಲೋಚನೆಯಲ್ಲಿದ್ದಾರೆ ಹೊಂಬಾಳೆ ಬಳಗ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News