Mrunal Thakur boyfriend : ಬಹುಭಾಷಾ ನಟಿ ಮೃಣಾಲ್‌ ಠಾಕೂರ್ ಅತೀ ಕಡಿಮೆ ಸಮಯದಲ್ಲಿ ಸೌತ್ ಸಿನಿರಂಗದಲ್ಲಿ ಸ್ಟಾರ್ ಗಿರಿ ಪಡೆದ ನಟಿ. ಸೀತಾ ರಾಮಂ ಸಿನಿಮಾದ ಮೂಲಕ ಕ್ರೇಜ್‌ ಗಿಟ್ಟಿಸಿಕೊಂಡ ಚೆಲುವೆ ಇದೀಗ ದಕ್ಷಿಣ ಸಿನಿರಂಗದ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟನೆ ಮತ್ತು ಸೌಂದರ್ಯದಿಂದ ಅಪಾರ ಅಭಿಮಾನಿ ಬಳಗ ಹೊಂದಿರುವ ಮೃಣಾಲ್ ಠಾಕೂರ್, ಹನು ರಾಘವಪುಡಿ ನಿರ್ದೇಶನದ ಸೀತಾ ರಾಮಂ ಸಿನಿಮಾದ ಮೂಲಕ ದಕ್ಷಿಣ ಸಿನಿರಂಗ ಪ್ರವೇಶಿಸಿದರು. ತಮ್ಮ ಮೊದಲ ಸಿನಿಮಾದಿಂದಲೇ ಪ್ರೇಕ್ಷಕರ ಮನ ಗೆದ್ದರು. ಮೃಣಾಲ್ ಸೀತಾ ಮಹಾಲಕ್ಷ್ಮಿ ಪಾತ್ರವನ್ನು ಬಹಳ ಅದ್ಭುತವಾಗಿ ನಿರ್ವಹಿಸಿದರು. 


ಇದನ್ನೂ ಓದಿ:ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?


ಸೀತಾ ರಾಮಂ ನಂತರ ತೆಲುಗಿನಲ್ಲಿ ಈ ಸುಂದರಿ ಕ್ರೇಜ್ ಹೆಚ್ಚಾಯಿತು. ನ್ಯಾಚುರಲ್ ಸ್ಟಾರ್ ನಾನಿ ಜೊತೆ ʼಹಾಯ್ ನನ್ನಾʼ ಸಿನಿಮಾದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಹತ್ತಿರವಾದರು. ಕೊನೆಯದಾಗಿ ʼಫ್ಯಾಮಿಲಿ ಸ್ಟಾರ್ʼ ಮೂಲಕ ತೆರೆ ಮೇಲೆ ಕಾಣಿಸಿಕೊಂಡರು. ವಿಜಯ್ ದೇವರಕೊಂಡ ನಟನೆಯ ಈ ಸಿನಿಮಾ ನಿರೀಕ್ಷೆಯಂತೆ ಹೆಚ್ಚು ಪ್ರಭಾವ ಬೀರಲಿಲ್ಲ.


ಈ ಮಧ್ಯೆ, ಮೃಣಾಲ್ ಒಬ್ಬ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಅಲ್ಲದೆ, ಮೃಣಾಲ್ ಬಾಯ್ ಫ್ರೆಂಡ್ ಅವರೆ ಎಂಬ ಗುಸುಗುಸು ಮಾತು ಕೇಳಿಬರುತ್ತಿದೆ. ಅವರು ಯಾರು ಅಲ್ಲ ಬಾಲಿವುಡ್‌ ಯಂಗ್‌ ನಟ ಸಿದ್ಧಾಂತ್ ಚತುರ್ವೇದಿ. 


ಇದನ್ನೂ ಓದಿ:ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ 'Huu ಅಂತೀಯಾ...Uhuu ಅಂತೀಯಾ!


ಮೃಣಾಲ್ ಸಿದ್ಧಾಂತ್‌ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಆದರೆ ಇದು ಅಧಿಕೃತವಲ್ಲ. ಇತ್ತೀಚಿಗೆ ಇವರಿಬ್ಬರು ಹೋಟೆಲ್‌ನಿಂದ ಹೊರಬರುತ್ತಿರುವಾಗ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.