MS Dhone love story : 2008-09ರ ಸುಮಾರಿಗೆ ಮಾಡೆಲ್ ಮತ್ತು ನಟಿ ರಾಯ್ ಲಕ್ಷ್ಮಿ ಜೊತೆ ಧೋನಿ ಡೇಟಿಂಗ್ (MS Dhoni) ನಡೆಸುತ್ತಿದ್ದರು ಎಂಬ ವದಂತಿಗಳಿದ್ದವು. ಅಲ್ಲದೆ ಈ ಜೋಡಿ ಆಗಾಗ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹಲ್‌ಚಲ್‌ ಸೃಷ್ಟಿಸುತ್ತಿದ್ದರು. ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.


COMMERCIAL BREAK
SCROLL TO CONTINUE READING

ಹೌದು.. 2009 ರಲ್ಲಿ ಈ ಜೋಡಿ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿತು. ಅದರ ನಂತರ ಕಾರಣಾಂತರದಿಂದ ದೂರಾದರು ಎಂದು ಹೇಳಲಾಗುತ್ತದೆ. ಈ ಕುರಿತು ಲಕ್ಷ್ಮಿ, ಧೋನಿಯೊಂದಿಗಿನ ನನ್ನ ಸಂಬಂಧವ ಗಾಯದ ಕಲೆಯಂತಿತ್ತು, ಅದು ದೀರ್ಘಕಾಲದವರೆಗೆ ಮಾಯವಾಗುವುದಿಲ್ಲ ಎಂದು 2014 ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದರು.


ಇದನ್ನೂ ಓದಿ:ಸಾಯಿ ಪಲ್ಲವಿ ಸ್ಕೂಲ್‌ನಲ್ಲಿ ಇದ್ದಾಗಲೇ ಆ ಕೆಲಸ ಮಾಡಿ ಸಿಕ್ಕಿಬಿದ್ದಿದ್ರಂತೆ..! ಫ್ಯಾನ್ಸ್‌ ಶಾಕ್‌


ವರದಿಗಳ ಪ್ರಕಾರ, 2007 ರಲ್ಲಿ ಪ್ರಸಿದ್ಧ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಗ್ಗೆ ಧೋನಿ ತಲೆ ಕೆಡಿಸಿಕೊಂಡಿದ್ದರು ಅಂತ ಹೇಳಲಾಗಿದೆ. ಅದೇ ವರ್ಷದಲ್ಲಿ ಧೋನಿ ಮತ್ತು ದೀಪಿಕಾ ಇಬ್ಬರೂ ಭಾರೀ ಜನಪ್ರಿಯತೆಯನ್ನು ಗಳಿಸಿದ್ದು ಆಶ್ಚರ್ಯಕರವಾಗಿತ್ತು. ದೀಪಿಕಾ ಅವರ 'ಓಂ ಶಾಂತಿ ಓಂ' ಚಿತ್ರಕ್ಕಾಗಿ ಮತ್ತು ಧೋನಿ ಟಿ20 ವಿಶ್ವಕಪ್‌ ಗೆಲುವು. ವಿಶ್ವಕಪ್‌ ಸಂಭ್ರಮಾಚರಣೆ ಕಾರ್ಯಕ್ರಮದ ವೇಳೆ ಧೋನಿ ಮತ್ತು ದೀಪಿಕಾ ರ‍್ಯಾಂಪ್ ವಾಕ್ ಮಾಡಿದ್ದರು. ಇದರಿಂದಾಗಿ ಇಬ್ಬರ ನಡುವೆ ಎನೋ ಇದೆ ಅಂತ ಜನ ಕನ್ಫರ್ಮ್‌ ಮಾಡಿಕೊಂಡಿದ್ದರು. 


ಅಲ್ಲದೆ, ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, 'ಗಜ್ನಿ' ನಟಿ ಆಸಿನ್ ಮತ್ತು ಧೋನಿಯೂ ಸಹ ಕೆಲ ಕಾಲ ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆಸಿನ್ ಮತ್ತು ಧೋನಿ ಒಟ್ಟಿಗೆ ಕಮರ್ಷಿಯಲ್ ಜಾಹೀರಾತನ್ನು ಮಾಡಿದ್ದಾರೆ. ಈ ವೇಳೆ ಅವರ ನಡುವೆ ಸ್ನೇಹವಾಗಿತ್ತು. ಇದರಿಂದಾಗಿ ಇಬ್ಬರ ನಡುವೆ ಲಿಂಕ್ ಇದೆ ಎಂಬ ವದಂತಿಗಳು ಹಬ್ಬಿದ್ದವು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.