Ram charan daughter : ಅಂಬಾನಿ ಕುಟುಂಬ ಭವ್ಯತೆ ಹೆಸರುವಾಸಿಗೆ. ಉದ್ಯಮದಲ್ಲಿ ಅಷ್ಟೇ ಅಲ್ಲದೆ ಸಿನಿರಂಗದಲ್ಲಿಯೂ ಉತ್ತಮ ಸ್ನೇಹ ಬಳಗವನ್ನು ಅಂಬಾನಿ ಕುಟುಂಬ ಹೊಂದಿದೆ. ಇದೀಗ ನಟ ರಾಮ್ ಚರಣ್ ಮತ್ತು ಅವನ ಹೆಂಡತಿ ಉಪಾಸನಾ ದಂಪತಿಗಳ ಮಗಳಿಗೆ 24 ಕ್ಯಾರೆಟ್‌ ಚಿನ್ನದ ತೊಟ್ಟಿಲು ಉಡುಗೂರೆಯಾಗಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ತೆಲುಗು ನಟ ಚಿರಂಜೀವಿ ಸುಪುತ್ರ ನಟ ರಾಮ್‌ ಚರಣ್‌ ತೇಜ ಮತ್ತು ಉಪಾಸನಾ ಇತ್ತೀಚಿಗೆ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಈ ಸಂದರ್ಭದಲ್ಲಿ ಮೆಗಾ ಫ್ಯಾಮಿಲಿ ಜೊತೆ ಹತ್ತಿರದ ಸಂಬಂಧ ಹೊಂದಿರುವ ಅಂಬಾನಿ ಕುಟುಂಬವು ಅವರಿಗೆ ಅದ್ಭುತವಾದ 24 ಕ್ಯಾರೆಟ್ ಚಿನ್ನದ ತೊಟ್ಟಿಲನ್ನು ಉಡುಗೂರೆಯಾಗಿ ನೀಡಿದೆ. ಇದರ ಮೌಲ್ಯ ₹ 10 ಮಿಲಿಯನ್ ಎಂದು ಹೇಳಲಾಗಿದೆ. ಈ ಅದ್ಭುತ ಉಡುಗೂರೆ ಅಂಬಾನಿ ಮತ್ತು ಮೆಗಾ ಫ್ಯಾಮಿಲಿ ನಡುವೆ ಇರುವ ಸೌಹಾರ್ದತೆಯ್ನನು ಸಂಕೇತಿಸುತ್ತದೆ. 


ಇದನ್ನೂ ಓದಿ: 45 ಸೆಕೆಂಡ್ ಜಾಹೀರಾತಿಗೆ ರಾಜಮೌಳಿ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?


ಇನ್ನು ಉಪಾಸನಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಗುವಿನ ನಾಮಕರಣದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆ ತಮ್ಮ ಮುದ್ದಾದ ಮಗುವಿನ ಜೊತೆಗಿರುವ ಚಿತ್ರವನ್ನು ಪೊಸ್ಟ್‌ ಮಾಡಿದ್ದಾರೆ. ಅಲ್ಲದೆ, ರಾಮ್‌ ಚರಣ್‌ ತೇಜ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ತಮ್ಮ ಮಗಳಿಗೆ ಸಂಗೀತದ ಉಡುಗೂರೆ ನೀಡಿದ ಕಾಲಬೈರವ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಜೂನ್ 14, 2012 ರಂದು ಮದುವೆಯಾದರು. ಹನ್ನೊಂದು ವರ್ಷಗಳ ವೈವಾಹಿಕ ನಂತರ, ದಂಪತಿಗಳು ಡಿಸೆಂಬರ್ 2022 ರಲ್ಲಿ ತಮ್ಮ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದರು. 20 ಜೂನ್ 2023 ರಂದು ಅಪೋಲೋ ಹಾಸ್ಪಿಟಲ್ ಜುಬಿಲಿ ಹಿಲ್ಸ್ ಹೈದರಾಬಾದ್‌ನಲ್ಲಿ ಹೆಣ್ಣು ಮಗುವಿಗೆ ಉಪಾಸನಾ ಅವರು ಜನ್ಮ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.