ಸಮಂತಾ-ನಾಗ ಚೈತನ್ಯ ಪ್ಯಾಚ್-ಅಪ್! ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ್ಯಾರು? ತಂದೆ ನಾಗಾರ್ಜುನ ಬಿಚ್ಚಿಟ್ಟರು ಸತ್ಯ!
Samantha-Naga Chaitanya divorce: ನಾಗಾರ್ಜುನ ಇತ್ತೀಚಿನ ಸಂದರ್ಶನದಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರ ವಿಚ್ಛೇದನಕ್ಕೆ ಮೊದಲು ಅರ್ಜಿ ಸಲ್ಲಿಸಿದ್ದು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನವದೆಹಲಿ: ಸ್ಟಾರ್ ಕಪಲ್ ಆಗಿದ್ದ ಸಮಂತಾ ರುತ್ ಪ್ರಭು (Samantha) ಮತ್ತು ನಾಗ ಚೈತನ್ಯ (Naga Chaitanya) ಅವರ ವಿಚ್ಛೇದನ ಎಲ್ಲರಿಗೂ ಒಂದು ರೀತಿಯ ಶಾಕಿಂಗ್ ಸುದ್ದಿಯೇ ಆಗಿತ್ತು. ಪ್ಯಾಚ್-ಅಪ್ ಕುರಿತು ವದಂತಿಗಳು ಕೂಡ ಶುರುವಾಗಿವೆ. ಆದರೆ, ಇದೇ ಮೊದಲ ಬಾರಿಗೆ ಹಿರಿಯ ನಟ ಮತ್ತು ಸ್ಯಾಮ್ ಅವರ ಮಾವ ಅಂದರೆ ನ್ನಾಗ ಚೈತನ್ಯ ಅವರ ತಂದೆ ನಾಗಾರ್ಜುನ ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Janhvi Kapoor: ನಟನೆ ಬಿಟ್ಟು ಕ್ರಿಕೆಟರ್ ಆದ ಬಾಲಿವುಡ್ ನಟಿ ಜಾಹ್ನವಿ ಕಪೂರ್..!
IndiaGlitz.com ಪ್ರಕಾರ, ನಾಗಾರ್ಜುನ (Nagarjunana) ಇತ್ತೀಚಿನ ಸಂದರ್ಶನದಲ್ಲಿ ವಿಚ್ಛೇದನಕ್ಕೆ ಮೊದಲು ಅರ್ಜಿ ಸಲ್ಲಿಸಿದ್ದು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. "ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ್ದು ಸಮಂತಾ. ನಾಗ ಚೈತನ್ಯ ಅವರ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಅವರು ನನ್ನ ಬಗ್ಗೆ ತುಂಬಾ ಚಿಂತಿತರಾಗಿದ್ದರು, ನಾನು ಏನು ಯೋಚಿಸುತ್ತೇನೆ ಮತ್ತು ಕುಟುಂಬದ ಖ್ಯಾತಿಗೆ ಏನಾಗುತ್ತದೆ ಎಂದು ಯೋಚಿಸುತ್ತಿದ್ದರು" ಎಂದು ನಾಗಾರ್ಜುನ ಹೇಳಿದ್ದಾರೆ.
"ನಾಗ ಚೈತನ್ಯ ಅವರು ನಾನು ಚಿಂತಿತನಾಗಿದ್ದೇನೆ ಎಂದು ನನಗೆ ತುಂಬಾ ಸಾಂತ್ವನ ಹೇಳಿದರು. ಅವರಿಬ್ಬರೂ ಮದುವೆ ಜೀವನದಲ್ಲಿ 4 ವರ್ಷಗಳಿಂದ ಒಟ್ಟಿಗೆ ಇದ್ದರು. ಆದರೆ ಅವರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ, ಇಬ್ಬರೂ ತುಂಬಾ ಹತ್ತಿರವಾಗಿದ್ದರು. ಬಿರುಕು ಹೇಗೆ ಬಂದಿತು ಎಂದು ನನಗೆ ತಿಳಿದಿಲ್ಲ. ಅವರಿಬ್ಬರು 2021 ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದರು, ಅದರ ನಂತರ ಸಮಸ್ಯೆಗಳು ಉದ್ಭವಿಸಿವೆ ಎಂದು ತೋರುತ್ತದೆ" ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಾಲಿವುಡ್ ಹಂಗಾಮಾದೊಂದಿಗಿನ ಅವರ ಸಂದರ್ಶನವೊಂದರಲ್ಲಿ, ನಾಗ ಚೈತನ್ಯ ಅವರಿಗೆ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಉತ್ತಮವಾಗಿ ಹಂಚಿಕೊಳ್ಳುವ ನಟಿಯನ್ನು ಹೆಸರಿಸಲು ಕೇಳಿದಾಗ, ಅವರು ತಮ್ಮ ಮಾಜಿ ಪತ್ನಿ ಸಮಂತಾ ಹೆಸರನ್ನು ತೆಗೆದುಕೊಂಡರು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ಸಮಂತಾ ಮತ್ತು ನಾಗ ಚೈತನ್ಯ ಒಂದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಚ್ಛೇದನದ (Samantha-Naga Chaitanya divorce) ನಿರ್ಧಾರವನ್ನು ಘೋಷಿಸಿದರು.
ಇದನ್ನೂ ಓದಿ: 777 Charlie: ಶೀಘ್ರವೇ ‘777 ಚಾರ್ಲಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ
ಸಮಂತಾ ಮತ್ತು ನಾಗ ಚೈತನ್ಯ 2010 ರಲ್ಲಿ ಗೌತಮ್ ಮೆನನ್ ಅವರ ಯೇ ಮಾಯಾ ಚೇಸಾವೆ ಸೆಟ್‌ನಲ್ಲಿ ಭೇಟಿಯಾದರು ಮತ್ತು ಸ್ವಲ್ಪ ಕಾಲ ಡೇಟಿಂಗ್ ಮಾಡಿದ ಈ ಜೋಡಿಯು 2017 ರ ಅಕ್ಟೋಬರ್ ನಲ್ಲಿ ಗೋವಾದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.