Oo Antava Mava: ಕೇವಲ ಮೂರೇ ನಿಮಿಷದ ಐಟಂ ಸಾಂಗ್ ಗಾಗಿ Samantha Ruth ಪಡೆದ ಸಂಭಾವನೆ ಎಷ್ಟು ಗೊತ್ತಾ?

Samantha Item Song: ಇತ್ತೀಚೆಗೆ ಬಿಡುಗಡೆಯಾದ ಸಮಂತಾ ರೂತ್ ಅವರ ಹಾಡು 'ಊ ಅಂತಿಯಾ ಮಾವಾ'  ದಿನದಿಂದ ದಿನಕ್ಕೆ ಭಾರಿ ಹೆಡ್ ಲೈನ್ ಸೃಷ್ಟಿಸುತ್ತಿದೆ. ನಟಿ ಈ ಹಾಡಿಗಾಗಿ ಶ್ರಮಿಸಿದ್ದು ಮಾತ್ರವಲ್ಲದೆ ಭಾರೀ ಮೊತ್ತವನ್ನು ಸಹ ವಸೂಲಿ ಮಾಡಿದ್ದಾರೆ.

Written by - Nitin Tabib | Last Updated : Jan 16, 2022, 05:39 PM IST
  • ಸಮಂತಾ ರುತ್ 'ಊ ಅಂತಿಯಾ ಮಾವಾ' ಹಾಡಿನ ಕ್ರೇಜ್ ಹೆಚ್ಚಾಗುತ್ತಲೇ ಇದೆ.
  • ಈ ಹಾಡಿಗಾಗಿ ಸಮಂತಾ ಭಾರಿ ಪರಿಶ್ರಮವನ್ನೇ ಪಟ್ಟಿದ್ದಾರೆ ಎನ್ನಲಾಗಿದೆ.
  • ಪರಿಶ್ರಮದ ಜೊತೆಗೆ ಭಾರಿ ಸಂಭಾವನೆಯನ್ನು ಕೂಡ ಸಮಂತಾ ಪಡೆದಿದ್ದಾರೆ ಎಂದು ವರದಿಯಾಗಿದೆ.
Oo Antava Mava: ಕೇವಲ ಮೂರೇ ನಿಮಿಷದ ಐಟಂ ಸಾಂಗ್ ಗಾಗಿ Samantha Ruth ಪಡೆದ ಸಂಭಾವನೆ ಎಷ್ಟು ಗೊತ್ತಾ? title=
Samantha Item Song Fees (File Photo)

Samantha Item Song Fees: ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ (Samantha Ruth Prabhu) ಅವರು ಇತ್ತೀಚೆಗೆ ಬಿಡುಗಡೆಯಾದ 'ಊ ಅಂತಿಯಾ ಮಾವಾ' (Oo Antava Mava) ಹಾಡಿನ ಕಾರಣ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ಈ ಹಾಡು ಪ್ರೇಕ್ಷಕರಲ್ಲಿ ಭಾರಿ ಕ್ರೇಜ್ ಹುಟ್ಟುಹಾಕಿದೆ. ಇತ್ತೀಚೆಗೆ ಈ ಹಾಡಿನ ಮೇಕಿಂಗ್ ವಿಡಿಯೋ ಕೂಡ ಬಹಿರಂಗವಾಗಿದೆ. ಇದೀಗ ಈ ಹಾಡಿಗೆ ನಟಿ ಪಡೆದಿರುವ ಶುಲ್ಕವೆಷ್ಟು ಎಂಬ ಸುದ್ದಿ ಸದ್ಯ ಚರ್ಚೆಯಲ್ಲಿದೆ.

ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ದಿ ರೈಸ್' (Pushpa Movie) ಸಿನಿಮಾದ ಭರ್ಜರಿ ಪ್ರದರ್ಶನ ಮುಂದುವರೆದಿದೆ. ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದೇ ಸಮಯದಲ್ಲಿ, ಚಿತ್ರದ ಮತ್ತೊಂದು ವಿಶೇಷತೆ ಇದೆ ಮತ್ತು ಅದು ಸಮಂತಾ ರುತ್ ಪ್ರಭು ಮತ್ತು ಅಲ್ಲು ಅವರ ಮೇಲೆ ಚಿತ್ರಿಸಲಾದ ಚಿತ್ರದ 'ಊ ಅಂತಿಯಾ ಮಾವಾ' ಹಾಡು. ಈ ಹಾಡಿನ ಮೂಲಕ ಸಮಂತಾ ಮೊದಲ ಬಾರಿಗೆ ಐಟಂ ಸಾಂಗ್ (Samantha Ruth Prabhu Item Song) ಮಾಡಿದ್ದಾರೆ. ಈ ಹಾಡಿನಲ್ಲಿ ನಟಿಯ ಡ್ಯಾನ್ಸ್‌ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಹಾಡಿನ ಜನಪ್ರಿಯತೆಯ ಚರ್ಚೆಗಳ ಜೊತೆಗೆ ಈ ಹಾಡಿಗಾಗಿ ಸಮಂತಾ ಪಟ್ಟ ಶ್ರಮ ಹಾಗೂ ಆಕೆ ಪಡೆದ ಸಂಭಾವನೆಯ ಕುರಿತು ಕೂಡ ಭಾರಿ ಚರ್ಚೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ-ನಾಯಕತ್ವದಿಂದ ಕೆಳಗಿಳಿದ ಪತಿ ವಿರಾಟ್ ಗೆ 'ಪ್ರೇಮ ಬರಹ' ಬರೆದ ಅನುಷ್ಕಾ ಶರ್ಮಾ

ಮೊದಲನೆಯದಾಗಿ, ಈ ಚಿತ್ರದಲ್ಲಿ ನಟಿ ಸುಮಾರು 3 ನಿಮಿಷಗಳ ಐಟಂ ನಂಬರ್ ಮಾಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಇದಕ್ಕಾಗಿ ಸಮಂತಾ ಅವರಿಗೆ ನೀಡಿದ ಶುಲ್ಕವು ನಿಮ್ಮ ಆಲೋಚನೆಯನ್ನು ಮೀರುತ್ತದೆ. ಮಾಧ್ಯಮಗಳ ವರದಿ ಪ್ರಕಾರ, ಈ ಹಾಡಿಗೆ ಸಮಂತಾ ಸಂಪೂರ್ಣ 5 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕೂ  ಮೊದಲು ಈ ಡ್ಯಾನ್ಸ್ ಮಾಡಲು ನಟಿ ಹಿಂದೇಟು ಹಾಕಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ (Allu Arjun) ಅವರ ಮನವೊಲಿಕೆಯ ನಂತರ ಸಮಂತಾ ಈ ಹಾಡನ್ನು ಮಾಡಲು ಒಪ್ಪಿಕೊಂಡರು ಎನ್ನಲಾಗುತ್ತಿದೆ.

ಇದನ್ನೂ ಓದಿ-Viral Video: ಪುಷ್ಪ ಸಿನಿಮಾದ ‘ಸಾಮಿ-ಸಾಮಿ’ ಹಾಡಿಗೆ ತಾಂಜಾನಿಯಾ ಯುವಕನ ಅದ್ಭುತ ನೃತ್ಯ..!

ಈ ಹಾಡಿನ ಮೊದಲ ಕೆಲವು ಸ್ಟೆಪ್ಸ್‌ ಗಳಿಗೆ ಸಮಂತಾ ಅವರ ಆಕ್ಷೇಪ ಕೂಡ ಇತ್ತು ಎನ್ನಲಾಗಿದೆ, ಆದರೆ ನಂತರ ಅವರು ಕ್ರಮೇಣ ಹಾಡಿನ ಫ್ಲೋ ಜೊತೆಗೆ ಸಾಗಿದ್ದಾರೆ ಮತ್ತು ಹಾಡಿನ ಯಾವುದೇ ನೃತ್ಯದ ಹೆಜ್ಜೆಗಳನ್ನು ಬದಲಾಯಿಸಲಿಲ್ಲ. ಹಾಡಿನಲ್ಲಿ ಸಮಂತಾ ಅವರ ಚರ್ಚೆಯನ್ನು ನೋಡಿ, 'ಪುಷ್ಪಾ ಭಾಗ 2' ಚಿತ್ರದ ಡ್ಯಾನ್ಸ್ ನಂಬರ್‌ಗಾಗಿಯೂ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ 'ಪುಷ್ಪಾ 2' ಚಿತ್ರದ ಡಾನ್ಸ್ ನಂಬರ್ ಗಾಗಿ ಯಾರನ್ನು ಆಯ್ಕೆ ಮಾಡಲಾಗುವುದು ಎಂಬುದು ಸಮಯವೇ ನಿರ್ಧರಿಸಲಿದೆ. 

ಇದನ್ನೂ ಓದಿ-Shivarajkumar : ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News