Samantha Ruth Prabhu : ನಾಗ ಚೈತನ್ಯ, ಸಮಂತಾಗೆ ಡಿವೋರ್ಸ್‌ ನೀಡಿದ ನಂತರ ಖ್ಯಾತ ಬಾಲಿವುಡ್ ನಟಿ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ.. ಮೂಲತಃ ಆಂಧ್ರದ ತೆನಾಲಿ ಮೂಲದ ಶೋಭಿತಾ, ಸಧ್ಯ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ವೆಬ್‌ ಸೀರಿಸ್, ಸಿನಿಮಾ, ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಡಿವೋರ್ಸ್‌ ನಂತರ ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರು ಡೇಟಿಂಗ್‌ ಮಾಡುತ್ತಿದ್ದರು ಎಂಬ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿತ್ತು, ಫೋಟೋಸ್‌ ಸಹ ವೈರಲ್‌ ಆಗಿದ್ದವು. ಅಂತಿಮವಾಗಿ ಈ ವರ್ಷ ಆಗಸ್ಟ್ 8 ರಂದು ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡರು. 


ಇದನ್ನೂ ಓದಿ:ಮೊನ್ನೆ... ಮೊನ್ನೆಯಷ್ಟೇ ಪುಟ್ಟ ಲಂಗ ಹಾಕ್ಕೊಂಡು ಓಡಾಡುತ್ತಿದ್ಳು.. ಇವತ್ತೂ ನೋಡಿದ್ರೆ.. ವ್ಹಾ..!! ಎಷ್ಟು ದೊಡ್ಡವಳಾಗಿದಾಳೆ..


ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ನಾಗಾರ್ಜುನ ಅವರಿಗೆ ಮಗನ ಮದುವೆಯ ಬಗ್ಗೆ ಪ್ರಶ್ನೆ ಮಾಡಿತ್ತು, ಆಗ ಅವರು, ಸಮಯ ಹಿಡಿಯುತ್ತದೆ ಎಂದು ಸ್ಪಷ್ಟಪಡಿಸಿದ್ದರು.. ಆದರೆ ಇತ್ತೀಚೆಗೆ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆಗೆ ಸಂಬಂಧಿಸಿದ ಕೆಲಸಗಳು ಶುರುವಾಗಿದ್ದಾಗಿ ತಿಳಿದು ಬಂದಿದೆ.. ವಿಶಾಖಪಟ್ಟಣಂನಲ್ಲಿರುವ ಸೋಭಿತಾ ಮನೆಯಲ್ಲಿ ಅರಿಶಿನ ಶಾಸ್ತ್ರ ಸೇರಿದಂತೆ ವಿವಾಹ ಪೂರ್ವ ಕಾರ್ಯಕ್ರಮಗಳು ಶುರುವಾಗಿದ್ದಾಗಿ ತಿಳಿದು ಬಂದಿದೆ.. ಈ ಕುರಿತು ಸ್ವತಃ ನಟಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 


ಇತ್ತೀಚಿಗೆ ನಟಿ ಹಂಚಿಕೊಂಡಿರುವ ಫೋಟೋಸ್‌ಗಳಲ್ಲಿ, ಕಿತ್ತಳೆ ಬಣ್ಣ ಮತ್ತು ಹಸಿರು ಬಣ್ಣದ ಬಾರ್ಡರ್ ಸೀರೆಯಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದರು. ಈ ಸೀರೆಯನ್ನು ನಾಗ ಚೈತನ್ಯ ಅವರ ತಾಯಿ ದಗ್ಗುಬಾಟಿ ಲಕ್ಷ್ಮಿ ಉಡುಗೊರೆಯಾಗಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ 8 ರಂದು ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ.. 


ಇದನ್ನೂ ಓದಿ:ಎಷ್ಟು ಬಾರಿ ಪ್ರಯತ್ನಿಸಿದರೂ ಪತಿ ಸಹಕರಿಸುತ್ತಿಲ್ಲ.. ನನ್ನ ಆ ಆಸೆ ಈಡೇರುತ್ತಿಲ್ಲ..! ಇಬ್ಬರು ಮಕ್ಕಳಿದ್ದರೂ.. ನಟಿ ಆಸೆ ಕೇಳಿ ಫ್ಯಾನ್ಸ್‌ ಶಾಕ್‌..


ಈ ನಡುವೆ ನಾಗ ಚೈತನ್ಯ ಮತ್ತು ಶೋಭಿತಾ ಮದುವೆಗೆ ಬರುವಂತೆ ಸಮಂತಾ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂಬ ವರದಿಗಳಿವೆ. ಸಮಂತಾ ನಾಗ ಚೈತನ್ಯ ಅವರ ಮಾಜಿ ಪತ್ನಿ. ಆದರೆ ಈ ಕುರಿತು ಸ್ಯಾಮ ಇಲ್ಲವೇ ಶೋಭಿತಾ ಮತ್ತು ನಾಗ ಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ