E paada punya paada movie: "ದಾರಿ ಯಾವುದಯ್ಯಾ ವೈಕುಂಠಕೆ" ಚಿತ್ರ ನಿರ್ದೇಶಕರಾದ ಸಿದ್ದು ಪೂರ್ಣಚಂದ್ರ ರವರ ಮತ್ತೊಂದು ಚಿತ್ರ "ಈ ಪಾದ ಪುಣ್ಯಪಾದ". ಇದರ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಶಿವನಂದಿ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರಕ್ಕೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ರವರು  ಕ್ಲಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.


COMMERCIAL BREAK
SCROLL TO CONTINUE READING

ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ರವರು ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಇದೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ರಾಮನಗರ, ಚನ್ನಪಟ್ಟಣ, ಮದ್ದೂರು, ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗುತ್ತದೆಂದು ಸಿದ್ದು ಪೂರ್ಣಚಂದ್ರ ತಿಳಿಸಿದರು. 


ಇದನ್ನೂ ಓದಿ: ಕೇವಲ 11 ರೂ. ಜೇಬಿನಲ್ಲಿ ಇಟ್ಟುಕೊಂಡು ಒಂದು ಕಾಲದಲ್ಲಿ ತುತ್ತು ಊಟಕ್ಕೂ ಪರದಾಡಿದ್ದರಂತೆ ಈ ಸ್ಟಾರ್‌ ನಟ..! ಇಂದು ಕೋಟಿ ಆಸ್ತಿಯ ಒಡೆಯ


ಮುಖ್ಯ ಪಾತ್ರದಲ್ಲಿ ಆಟೋ ನಾಗರಾಜ್ ರವರು ಅಭಿನಯಿಸುತ್ತಿದ್ದಾರೆ. ಉಳಿದಂತೆ "ಸಂಭವಾಮಿ ಯುಗೇ ಯುಗೇ" ಚಿತ್ರ ಖ್ಯಾತಿಯ ಜಯ್ ಶೆಟ್ಟಿ, ಬಲ ರಾಜ್ವಾಡಿ, ಚೈತ್ರ, ನಂದಿನಿ ರಾಜ್ ಜೀವನ್ ರಿಚಿ, ಪ್ರಮಿಳ ಸುಬ್ರಮಣ್ಯಂ, ಶಂಕರ್ ಭಟ್ ಹರೀಶ್ ಕುಂದೂರ್, ಯೋಗಿತ, ಬೇಬಿ ರಿಧಿ, ಯೋಗೇಶ್ ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ. ಸಹ ನಿರ್ಮಾಪಕರಾಗಿ ಶ್ರೀಯುತ ಸನ್ನಿ,  ಎ.ಕೆ ಪುಟ್ಟರಾಜು ಮತ್ತು ಪ್ರಮಿಳಾ ಸುಭ್ರಮಣ್ಯಂ ರವರೂ ಕೂಡ ಸಹ ನಿರ್ಮಾಪಕರಾಗಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಕಲನ ದೀಪಕ್ ಸಿ ಎಸ್, ಕಲೆ ಬಸವರಾಜ್ ಆಚಾರ್, ವಸ್ತ್ರ ವಿನ್ಯಾಸ ನಾಗರತ್ನ ಕೆಹೆಚ್, ಸಂಗೀತ ಅನಂತ್ ಆರ್ಯನ್, ಮೇಕಪ್ ಸಿದ್ದು ರಾಯಚೂರ್, ಸ್ವರೂಪ್ ವಿ ಎಫ್ ಎಕ್ಸ್. ಕಲರಿಂಗ್ ನಿಖಿಲ್ ಕಾರ್ಯಪ್ಪ.


ವಿಭಿನ್ನ ಕಥಾ ಹಂದರ ಹೊಂದಿದ ಈ  ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭೂತಿಯನ್ನು ಕಟ್ಟಿಕೊಡುತ್ತದೆ.    ಇಲ್ಲಿ ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಅದರಲ್ಲಿ ಮುಖ್ಯವಾಗಿ ಆನೆಕಾಲು ರೋಗಿಯ ಜೀವನ ಶೈಲಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಿಸಲಾಗುತ್ತದೆ. ಇದರ ಜೊತೆಗೆ ಮಕ್ಕಳ ಪಾದ, ವೃದ್ದರ ಪಾದ, ದಾಸರ ಪಾದ, ಸ್ವಾಮೀಜಿಗಳ  ಪಾದದ ಕಥೆ ಹೇಳಲಾಗುತ್ತದೆ. ಎಲ್ಲೂ ನೋಡಿರದ ಕೇಳಿರದ ಈ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿರುವೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿವರಿಸಿದರು.


ಇದನ್ನೂ ಓದಿ: ರಿಷಬ್ ಶೆಟ್ಟಿ ರಿಯಲ್‌ ಹೆಸರು ಏನು ಗೊತ್ತಾ.. ಆ ಘಟನೆ ಬಳಿಕ ನಿಜನಾಮವನ್ನೇ ಬದಲಿಸಿಬಿಟ್ರು ಡಿವೈನ್‌ ಸ್ಟಾರ್! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.