Nandamuri Balakrishna Helicopter Emergency Landing : ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಒಂಗೋಲ್ ನಿಂದ ಹೈದರಾಬಾದ್ ನಿಂದ ಹೊರಟಿದ್ದ ಹೆಲಿಕಾಪ್ಟರ್ 15 ನಿಮಿಷದಲ್ಲಿ ವಾಪಸ್ ಬಂದು ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ. ಹೆಲಿಕಾಪ್ಟರ್‌ನಲ್ಲಿ ಬಾಲಕೃಷ್ಣ ಅವರ ಜೊತೆ ನಟಿ ಶ್ರುತಿ ಹಾಸನ್ ಹಾಗೂ ʼವೀರ ಸಿಂಹರೆಡ್ಡಿʼ ಚಿತ್ರತಂಡದ ಕೆಲವು ಸದಸ್ಯರಿದ್ದು ಎಂದು ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ನಿನ್ನೆ ವೀರಸಿಂಹ ರೆಡ್ಡಿ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಒಂಗೋಲುನಲ್ಲಿ ಅದ್ಧೂರಿಯಾಗಿ ನಡೆಯಿತು. ಇಂದು ಬಾಲಕೃಷ್ಣ, ಶೃತಿ ಹಾಸನ್ ಹಾಗೂ ಚಿತ್ರತಂಡದ ಕೆಲ ಸದಸ್ಯರು ಒಂಗೋಲ್ ನಿಂದ ಹೈದರಾಬಾದ್‌ಗೆ ಹೆಲಿಕಾಪ್ಟರ್‌ ಮೂಲಕ ತೆರಳಿದ್ದರು. ಹೆಲಿಕಾಪ್ಟರ್‌ ಹೊರಟ ಸ್ವಲ್ಪ ಸಮಯದ ನಂತರ, ಅಂದ್ರೆ ಕೇವಲ 15 ನಿಮಿಷಗಳಲ್ಲಿ, ಮತ್ತೆ ಹಿಂತಿರುಗಿ ತುರ್ತು ಲ್ಯಾಂಡಿಂಗ್ ಆಗಿದೆ. ಬಾಲಕೃಷ್ಣ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಅದ್ರೆ ಇದು ನಿಜವಲ್ಲ ಎಂದು ಪೈಲಟ್ ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: Kantara 100 days : ಹೋ... ಇದು ಬೆಳಕಲ್ಲ ʼ100 ದಿನʼದ ದರ್ಶನ..!


ಈ ಕುರಿತು ಹೆಲಿಕಾಪ್ಟರ್‌ನ ಪೈಲಟ್‌ ಮಾಹಿತಿ ನೀಡಿದ್ದು, ಯಾವುದೇ ತಾಂತ್ರಿಕ ದೋಷವಿಲ್ಲ, ಹೈದರಾಬಾದ್‌ಗೆ ತೆರಳುವ ಮಾರ್ಗ ಪೂರ್ತಿ ಮಂಜಿನಿಂದ ಆವೃತವಾಗಿದೆ. ಮುಂಜಾಗೃತ ಕ್ರಮವಾಗಿ ನಾವು ಹಿಂತಿರುಗಿದೆವು. ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದರು. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಹೆಲಿಕಾಪ್ಟರ್‌ ತಾಂತ್ರಿಕ ದೋಷ ಹಿನ್ನೆಲೆ ಎಮರ್ಜನ್ಸಿ ಲ್ಯಾಂಡಿಂಗ್‌ ಆಗಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು.


ನಂದಮೂರಿ ಬಾಲಕೃಷ್ಣ ನಾಯಕನಾಗಿ ಮತ್ತು ಶೃತಿ ಹಾಸನ್ ನಾಯಕಿಯಾಗಿ ನಟಿಸಿರುವ ಹೈ ವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ವೀರ ಸಿಂಹ ರೆಡ್ಡಿಯನ್ನು ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 12 ರಂದು ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.