Veera Simha Reddy : ಸಿಂಹದ ಮುಂದೆ ಆಕ್ಟ್‌ ಮಾಡೋದು ಕಷ್ಟ.. ಜೈ ಬಾಲಯ್ಯ ಎಂದ ವಿಜಿ..!

ನಟಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ʼವೀರ ಸಿಂಹ ರೆಡ್ಡಿʼ ಟ್ರೇಲರ್‌ ಆರ್ಭಟ ಜೋರಾಗಿದೆ. ಬಿಡುಗಡೆಯಾದ ದಿನವೇ ಲಕ್ಷಾಂತರ ಮಂದಿ ಬಾಲಯ್ಯನ ಉಗ್ರಾವತಾರಕ್ಕೆ ಫಿದಾ ಆಗಿದ್ದಾರೆ. ಅಲ್ಲದೆ, ಬಾಲಯ್ಯನ ಎದುರು ಕನ್ನಡದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್‌ ಅಬ್ಬರಿಸಿದ್ದಾರೆ. ನಿನ್ನೆ ನಡೆದ ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಮಾತನಾಡಿದ ವಿಜಯ್‌, ಬಾಲಯ್ಯ ಅವರ ನಟನೆಯನ್ನು ಕೊಂಡಾಡಿದರು.

Written by - Krishna N K | Last Updated : Jan 7, 2023, 12:47 PM IST
  • ನಟಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ʼವೀರ ಸಿಂಹ ರೆಡ್ಡಿʼ ಟ್ರೇಲರ್‌ ಆರ್ಭಟ ಜೋರಾಗಿದೆ.
  • ಬಾಲಯ್ಯನ ಎದುರು ಕನ್ನಡದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್‌ ಅಬ್ಬರಿಸಿದ್ದಾರೆ.
  • ಸಂಕ್ರಾತಿ ಹಬ್ಬಕ್ಕೆ ವೀರ ಸಿಂಹರೆಡ್ಡಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
Veera Simha Reddy : ಸಿಂಹದ ಮುಂದೆ ಆಕ್ಟ್‌ ಮಾಡೋದು ಕಷ್ಟ.. ಜೈ ಬಾಲಯ್ಯ ಎಂದ ವಿಜಿ..! title=

Duniya Vijay : ನಟಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ʼವೀರ ಸಿಂಹ ರೆಡ್ಡಿʼ ಟ್ರೇಲರ್‌ ಆರ್ಭಟ ಜೋರಾಗಿದೆ. ಬಿಡುಗಡೆಯಾದ ದಿನವೇ ಲಕ್ಷಾಂತರ ಮಂದಿ ಬಾಲಯ್ಯನ ಉಗ್ರಾವತಾರಕ್ಕೆ ಫಿದಾ ಆಗಿದ್ದಾರೆ. ಅಲ್ಲದೆ, ಬಾಲಯ್ಯನ ಎದುರು ಕನ್ನಡದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್‌ ಅಬ್ಬರಿಸಿದ್ದಾರೆ. ನಿನ್ನೆ ನಡೆದ ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಮಾತನಾಡಿದ ವಿಜಯ್‌, ಬಾಲಯ್ಯ ಅವರ ನಟನೆಯನ್ನು ಕೊಂಡಾಡಿದರು.

ಹೌದು.. ನಟ ವಿಜಯ್ ಇದೇ ಮೊದಲ ಬಾರಿಗೆ ಟಾಲಿವುಡ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ʼವೀರ ಸಿಂಹರೆಡ್ಡಿʼಯಲ್ಲಿ ಬಾಲಯ್ಯ ಎದುರು ವಿಲನ್‌ ಪಾತ್ರದಲ್ಲಿ ವಿಜಿ ಮಿಂಚಿದ್ದಾರೆ. ಇತ್ತೀಚಿಗೆ ಕೋಬ್ರಾ ಕಡಕ್‌ ಲುಕ್‌ ಫೋಟೋಸ್‌ ವೈರಲ್‌ ಆಗಿದ್ದವು. ನಿನ್ನೆ ನಡೆದ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ ದುನಿಯಾ ವಿಜಯ್, ಸಿಂಹದ ಮುಂದೆ ಆಕ್ಟ್‌ ಮಾಡೋದು ಕಷ್ಟ ಅಂತ ಹೇಳುವ ಮೂಲಕ ಬಾಲಯ್ಯರನ್ನು ಹೊಗಳಿದರು.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಪುತ್ರಿ ಡೇಟಿಂಗ್!

ಮೊದಲು ತೆಲುಗು ಭಾಷೆಯಲ್ಲಿ ಮಾತನಾಡಿದ ವಿಜಿ, ಜೈ ಬಾಲಯ್ಯ ಅಂತ ಘೋಷನೆ ಕೂಗಿದರು. ಅವಕಾಶಕ್ಕಾಗಿ ನಟ ಬಾಲಕೃಷ್ಣ, ಡೈರೆಕ್ಟರ್‌ ಗೋಪಿಚಂದ್‌ ಹಾಗೂ ಮೈತ್ರಿ ಮೂವೀಸ್‌ ಅವರಿಗೆ ಧನ್ಯವಾದ ಅರ್ಪಿಸಿದರು. ನಂತರ ಬಾಲಕೃಷ್ಣ ಅವರ ಕುರಿತು ಮಾತನಾಡುತ್ತ.. ಸಿಂಹದ ಮುಂದೆ ನಟಿಸುವುದು ಬಹಳ ಕಷ್ಟವಾಗಿತ್ತು. ಅದಕ್ಕೆ ಬಹಳ ಧೈರ್ಯ ಬೇಕು. ನಾನು ಪ್ರತಿದಿನ ಪ್ರಾರ್ಥನೆ ಮಾಡಿಕೊಂಡು ಸೆಟ್‌ಗೆ ಬರುತ್ತಿದ್ದೆ. ಆಮೇಲೆ ಬಾಲಯ್ಯ ಅವರೊಟ್ಟಿಗೆ ಕನೆಕ್ಟ್ ಆದೆ ಎಂದರು.

ಅಲ್ಲದೆ, ವೀರ ಸಿಂಹ ರೆಡ್ಡಿ ಸಿನಿಮಾ ಸಂಕ್ರಾತಿಗೆ ಬಿಡುಗಡೆಯಾಗುತ್ತಿದೆ. ಉಗ್ರ ನರಸಿಂಹನ ರೂಪದಲ್ಲಿ ಬಾಲಕೃಷ್ಣ ಅವರು ಕಾಣಿಸಿಕೊಂಡಿದ್ದಾರೆ. ನೀವು ಉಗ್ರಾವಾಗಿ ನೋಡಿದ್ರೆ ಅವರು ಉಗ್ರರೂಪದಲ್ಲಿ, ಶಾಂತ ರೀತಿಯಲ್ಲಿ ನೋಡಿದ್ರೆ ಶಾಂತರೂಪವಾಗಿ ಕಾಣಿಸುತ್ತಾರೆ ಅಂತ ಸಿನಿಮಾದಲ್ಲಿನ ಎನ್‌ಬಿಕೆ ಅವರ ಪಾತ್ರದ ಕುರಿತು ಮಾತನಾಡಿದ್ರು. ಕೊನೆಗೆ ನಮ್ಮ ಕನ್ನಡ ನಾಡಿನ ಜನತೆಯ ಪರವಾಗಿ ಬಾಲಕೃಷ್ಣ ಅವರಿಗೆ ಅಭಿನಂದಿಸುತ್ತಿದ್ದೇನೆ. ಜೈ ಕರ್ನಾಟಕ ಮಾತೆ ಎಂದು ಹೇಳಿದರು.

ಇದನ್ನೂ ಓದಿ: "ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್.. ಸಿಗರೇಟ್‌ನಿಂದ ಸುಡುತ್ತಿದ್ದ": ಮಾಜಿ ಗೆಳತಿಯ ಗಂಭೀರ ಆರೋಪ

ವಿಜಯ್‌ ಕುರಿತು ಬಾಲಕೃಷ್ಣ ಅವರು ಮಾತನಾಡಿ, ʼಲೆಜೆಂಡ್ʼ ಸಿನಿಮಾದ ಜಗಪತಿ ಬಾಬು, ʼಅಖಂಡʼ ಚಿತ್ರದಲ್ಲಿನ ಶ್ರೀಕಾಂತ್ ಪಾತ್ರಗಳ ರೀತಿಯಲ್ಲೇ ʼವೀರಸಿಂಹ ರೆಡ್ಡಿʼ ಚಿತ್ರದಲ್ಲಿ ದುನಿಯಾ ವಿಜಯ್ ಪಾತ್ರ ಅದ್ಭುತವಾಗಿದೆ. ವಿಜಯ್‌ ಚೆನ್ನಾಗಿ ನಟಿಸಿದ್ದಾರೆ. ಅವರ ನಟನೆ ಹೇಗಿದೆ ಅನ್ನೋದನ್ನು ಥಿಯೇಟರ್‌ನಲ್ಲಿ ನೋಡ್ತೀರಾ. ಕನ್ನಡದಲ್ಲಿ ಒಳ್ಳೆಯ ಹೀರೊ ದುನಿಯಾ ವಿಜಯ್. ಕನ್ನಡ - ತೆಲುಗು ಮೈತ್ರಿಗೆ ಗುರುತಾಗಿ ನಮ್ಮ ಚಿತ್ರದಲ್ಲಿ ವಿಜಯ್ ಬಂದು ನಟಿಸಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.

ನಿನ್ನೆ ಬಹುನಿರೀಕ್ಷಿತ ವೀರ ಸಿಂಹರೆಡ್ಡಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈಗಾಗಲೇ 4.8 ಮಿಲಿಯನ್‌ ಜನರು ಟ್ರೇಲರ್‌ನ್ನು ವೀಕ್ಷಿಸಿದ್ದಾರೆ. ಬಾಲಯ್ಯ ಅಬ್ಬರ ಹಾಗೂ ವಿಜಯ್‌ ಖಡಕ್‌ ಲುಕ್‌ಗೆ ತೆಲುಗು ಮತ್ತು ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದು, ಸಿನಿಮಾದ ಮೇಲಿನ ನೀರಿಕ್ಷೆ ಹೆಚ್ಚಿಸಿದೆ. ಸಂಕ್ರಾತಿ ಹಬ್ಬಕ್ಕೆ ವೀರ ಸಿಂಹರೆಡ್ಡಿ ಸಿನಿಮಾ ಥಿಯೇಟರ್‌ಗಳಲ್ಲಿ ಅಬ್ಬರಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News