Taraka Ratna health updates : ತೆಲುಗು ಚಿತ್ರ ನಟ ನಂದಮೂರಿ ತಾರಕ ರತ್ನ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಇಂದು ಬೆಳಿಗ್ಗೆ ನಟ ನಂದಮೂರಿ ಬಾಲಕೃಷ್ಣ, ನಂದಮೂರಿ ತಾರಕ ರಾಮರಾವು, ಡಾ. ಶಿವರಾಜಕುಮಾರ್‌ ಹಾಗೂ, ಸಚಿವ ಕೆ.ಸುಧಾಕರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾರಕ್‌ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಅಲ್ಲದೆ, ಎನ್‌ಟಿಆರ್‌ ಅಭಿಮಾನಿಗಳ ಆರ್ಶೀವಾದ ಇರೋವರೆಗೂ ಅಣ್ಣನಿಗೆ ಏನೂ ಆಗಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ನಿನ್ನೆ ಕುಪ್ಪಂನಿಂದ ಆರಂಭವಾದ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ʼಯುವಗಲಂʼ ಪಾದಯಾತ್ರೆಯಲ್ಲಿ ನಟ ತಾರಕ್‌ ರತ್ನ ಅವರು ಭಾಗವಹಿಸಿದ್ದರು. ಈ ವೇಳೆ ಅವರು ಕುಸಿದು ಬಿದ್ದಿದ್ದರು. ಸದ್ಯ ಬೆಂಗಳೂರಿನ ನಾರಾಯಣ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರು ಹಾಗೂ ನಟ, ನಟಿಯರು ಸಚಿವರು ಅಸ್ಪತ್ರೆಗೆ ಭೇಟಿ ನೀಡಿ ತಾರಕ್‌ ಆರೋಗ್ಯದ ಕುರಿತು ವಿಚಾರಿಸುತ್ತಿದ್ದಾರೆ.


ಇದನ್ನೂ ಓದಿ: Nani Dasara Teaser : ಸೌತ್‌ ಸೂಪರ್‌ ಸ್ಟಾರ್‌ಗಳಿಂದ ನಾನಿ 'ದಸರಾ' ಟೀಸರ್‌ ರಿಲೀಸ್‌


ಆಸ್ಪತ್ರೆಗೆ ಭೇಟಿ ನೀಡಿ ಅಣ್ಣನ ಆರೋಗ್ಯ ವಿಚಾರಿಸಿದ ಜೂ.ಎನ್‌ಟಿಆರ್‌, ನಾರಾಯಣ ಹೃದಯಾಲಯ ವೈದ್ಯರಿಂದ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ತಾರಕ ವೈದ್ಯ ಬಲದ ಜೊತೆ ಆತ್ಮ ಬಲದ ಜೊತೆ ಹೋರಾಟ ಮಾಡುತ್ತಿದ್ದಾರೆ. ತಾರಕನಿಗೆ ಅಸಂಖ್ಯಾತ ಅಭಿಮಾನಿಗಳ ಹಾರೈಕೆ ಇದೆ. ಅತಿ ಶೀಘ್ರದಲ್ಲಿ ವಿಷಮ ಸ್ಥಿತಿಯಿಂದ ಪಾರಾಗುವ ವಿಶ್ವಾಸ ಇದೆ. ನಮ್ಮೆಲ್ಲರ ಜೊತೆ ಆನಂದದಿಂದ ಇನ್ನಷ್ಟು ದಿನ ಇರಲಿ ಎಂದು ಭಗವಂತನಲ್ಲಿ‌ ಬೇಡಿಕೊಳ್ಳುವೆ. ಸ್ಟಬಲ್ ಇದ್ದಾರೆ ಆದ್ರೆ ಪ್ರಾಣಾಪಾಯದಿಂದ ಪಾರಾಗಿಲ್ಲ. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.


ನಟ ಶಿವರಾಜ್ ಕುಮಾರ್ ಅವರು ಮಾತನಾಡಿ, ತಾರಕ ರತ್ನ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣಿಸಿಕೊಂಡಿದೆ. ಕಣ್ಣುಗಳ ಚಲನೆ ಕಂಡು ಬರುತ್ತಿದೆ. ಸದ್ಯ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ವೈದ್ಯರು ಪ್ರಯತ್ನ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ತಾರಕ್ ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಭರವಸೆ ಇದೆ. ಒಂದು ಕುಟುಂಬವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ವೈದ್ಯರ ಭೇಟಿ ಬಳಿಕ ನಟ ಡಾ. ಶಿವರಾಜ್ ಕುಮಾರ್ ಹೇಳಿದರು.


ಇದನ್ನೂ ಓದಿ: Rashmika : ಸಿದ್ದಾರ್ಥ್​ ಜೊತೆ ರಶ್ಮಿಕಾ ಹಾರ್ಟ್ ಸಿಂಬಲ್​ ಪೋಸ್! ಶುರುವಾಯ್ತು ನ್ಯೂ ಗಾಸಿಪ್‌?


ಇನ್ನು ನಟ ಬಾಲಕೃಷ್ಣ ಅವರು ಮಾತನಾಡಿ, ತಾರಕ ರತ್ನ ಕುಸಿದು ಬಿದ್ದು ಪ್ರಜ್ಞಾಹೀನರಾದಾಗ ಅಚ್ಚರಿ ನಡೆದಿತ್ತು. ತೀವ್ರ ಹೃದಯಾಘಾತದ ಬಳಿಕ ಹೃದಯ ಸ್ಥಂಭನವಾಗಿತ್ತು. ವೈದ್ಯರ ಪರಿಶೀಲನೆ ವೇಳೆ ಹೃದಯ ಬಡಿತ ಸ್ಥಬ್ದವಾಗಿತ್ತು. ಬಳಿಕ ಅಚ್ಚರಿಯೆಂಬಂತೆ ಹೃದಯ ಬಡಿತ ಮರಳಿತ್ತು. ವೈದ್ಯರ ಶಿಪಾರಸ್ಸಿನಂತೆ ನಾರಾಯಣ ಹೃದಯಾಲಯಕ್ಕೆ ಶಿಪ್ಟ್ ಮಾಡಲಾಗಿದೆ. ವೈದ್ಯರು ಬಹಳ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ತಾರಕ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಕೆಲವೊಮ್ಮೆ ಕಣ್ಣು ಮಿಟಕಿಸುವುದು, ದೇಹ ಅಲುಗಾಡುವುದು ಕಂಡು ಬರುತ್ತಿದೆ ಎಂದರು.


ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಅವರು ಮಾತನಾಡಿ, ತೀವ್ರ ಹೃದಯಾಘಾತದಿಂದ ಅಸ್ವಸ್ಥರಾದ ತಾರಕ್ ಅವರಿಗೆ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಗ್ರೀನ್ ಕಾರಿಡಾರ್ ಮೂಲಕ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ನಾರಾಯಣ ಹೃದಯಾಲದಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ. ನ್ಯೂರಾಲಜಿ, ಕಾರ್ಡಿಯಾಲಜಿ ಸೇರಿದಂತೆ ನುರಿತ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿದೆ. ನಿಮಾನ್ಸ್ ಆಸ್ಪತ್ರೆ ಮೆದುಳಿನ ತಜ್ಞ ವೈದ್ಯರ ತಂಡದಿಂದಲು ಸಹ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಸದ್ಯ ತಾರಕ್ ಆರೋಗ್ಯದ ಸ್ಥಿತಿ ಸ್ಥಿರಿವಾಗಿದೆ. ಆದರೆ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.