ಇದ್ದರೂ, ಹೋದರೂ ಸಾಧನೆಗಳು ಮಾತ್ರ ಅಮರ...' ಹೀಗೆ ಕನ್ನಡ ನಾಡಿನ ಹೆಮ್ಮೆಯ ನಟ ಸಂಚಾರಿ ವಿಜಯ್‌ ಇಂದು ನಮ್ಮೊಡನೆ ಇಲ್ಲದೆ ಹೋದರೂ, ಮತ್ತೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಹೌದು, ಸಂಚಾರಿ ವಿಜಯ್‌ ಅಭಿನಯದ ತಲೆದಂಡ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಒಲಿದು ಬಂದಿದೆ. ಜೊತೆಗೆ ಹೊಸಬರ ಕನ್ನಡ ಚಿತ್ರಗಳು ಸಖತ್‌ ಸದ್ದು ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ.


COMMERCIAL BREAK
SCROLL TO CONTINUE READING

ಅಂದಹಾಗೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡ ನಾಡಿನ ಸಿನಿಮಾಗಳು ಭಾರಿ ಸದ್ದು ಮಾಡಿವೆ. ಡೊಳ್ಳು ಸೇರಿದಂತೆ ತಲೆದಂಡ ಮತ್ತು ಜೀಟಿಗೆ, ನಾದದ ನವನೀತ ಸಿನಿಮಾಗಳಿಗೆ ಪ್ರಶಸ್ತಿ ಒಲಿದು ಬಂದಿದೆ. ಈ ಹಿಂದೆ 'ನಾನು ಅವನಲ್ಲ... ಅವಳು' ಸಿನಿಮಾದ ಅತ್ಯದ್ಭುತ ನಟನೆಗಾಗಿ ಸಂಚಾರಿ ವಿಜಯ್‌ ಅವರು ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಬಳಿಕ ಸಂಚಾರಿ ವಿಜಯ್‌ ನಟಿಸಿದ್ದ ‘ಹರಿವು’, ‘ನಾತಿಚರಾಮಿ’ ಚಿತ್ರಗಳು ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದವು. ಇದೀಗ ಅವರ 'ತಲೆದಂಡ' ಕೂಡ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದೆ.


ಪೃಥ್ವಿ ಅಂಬರ್ ‘ದೂರದರ್ಶನ’ ಅಂಗಳದಿಂದ ಬಂತು ಫಸ್ಟ್ ಪೋಸ್ಟರ್


‘ಡೊಳ್ಳು’ ಸಾಧನೆ
ಇನ್ನುಳಿದಂತೆ ಕಥೆ ಹಾಗೂ ಟೈಟಲ್‌ನಿಂದಲೇ ಗಮನ ಸೆಳೆದಿದ್ದ ‘ಡೊಳ್ಳು’ ಚಿತ್ರ ಹಾಗೂ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ನಾದದ ನವನೀತ' ಮತ್ತು ‘ಜೀಟಿಗೆ’ ಚಿತ್ರಕ್ಕೆ ‘ಅತ್ಯುತ್ತಮ ತುಳು ಸಿನಿಮಾ’ ಅವಾರ್ಡ್‌ ಸಿಕ್ಕಿದೆ. ಪವನ್ ಒಡೆಯರ್ ಹಾಗೂ ಅಪೇಕ್ಷಾ ನಿರ್ಮಾಣದ ‘ಡೊಳ್ಳು’ಗೆ ಸಾಗರ್ ಪುರಾಣಿಕ್ ಆಕ್ಷನ್‌ & ಕಟ್‌ ಹೇಳಿದ್ದರು. ‘ಡೊಳ್ಳು’ ಸಿನಿಮಾ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಪಡೆದಿತ್ತು. ಇದೀಗ ‘ರಾಷ್ಟ್ರ ಪ್ರಶಸ್ತಿ’ಯ ಹೆಮ್ಮೆ ಮುಡಿಗೇರಿಸಿಕೊಂಡಿದೆ.


‘ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಸಿನಿಮಾ’ ವಿಭಾಗದಲ್ಲಿ ‘ತಲೆದಂಡ’ ಸಿನಿಮಾಗೆ ಪ್ರಶಸ್ತಿ ಬಂದಿದೆ. ಕೊವಿಡ್ 19 ಪ್ರೇರಿತ ಮೊಟ್ಟ ಮೊದಲ ತುಳು ಚಿತ್ರ ಎಂಬ ಹೆಗ್ಗಳಿಕೆ ಪಡೆದಿದ್ದ ‘ಜೀಟಿಗೆ’ ಚಿತ್ರಕ್ಕೆ ‘ಅತ್ಯುತ್ತಮ ತುಳು ಸಿನಿಮಾ’ ಅವಾರ್ಡ್‌ ಸಿಕ್ಕಿದೆ. ಈ ಮೂಲಕ ಕನ್ನಡ ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಮಾತ್ರವಲ್ಲ, ಪ್ರಶಸ್ತಿ ವಿಭಾಗದಲ್ಲೂ ಸದ್ದು ಮಾಡುತ್ತಿವೆ.


ಪ್ರಶಸ್ತಿ ವಿಜೇತರ  ಪಟ್ಟಿ:


ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ


ಅತ್ಯುತ್ತಮ ನಟ: ಸೂರ್ಯ ಹಾಗೂ ಅಜಯ್ ದೇವಗನ್


ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್


ಅತ್ಯುತ್ತಮ ಮಕ್ಕಳ ಚಿತ್ರ: ಸುಮಿ (ಮರಾಠಿ)


ಪರಿಸರ ಸಂರಕ್ಷಣೆಯ ಚಿತ್ರ: ತಲೆದಂಡ (ಕನ್ನಡ)


ಅತ್ಯುತ್ತಮ ಹಿಂದಿ ಚಿತ್ರ: ತುಳಸಿದಾಸ್ ಜೂನಿಯರ್


ಅತ್ಯುತ್ತಮ ಛಾಯಾಗ್ರಹಣ: ಅವಿಜಾತಿಕ್ (ಬೆಂಗಾಳಿ)


ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ನಂಚಮ್ಮ


ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ


ಅತ್ಯುತ್ತಮ ತಮಿಳು ಚಿತ್ರ: ಶಿವರಂಜನಿಯುಂ ಇನ್ನುಮ್ ಸಿಲಾ ಪೆಂಗಲ್ಲುಮ್


ಅತ್ಯುತ್ತಮ ಮಲಯಾಳಂ ಚಿತ್ರ: ತಿಂಕಲಜ್ಜ ನಿಶ್ಚಯಂ


ಅತ್ಯುತ್ತಮ ಮರಾಠಿ ಚಿತ್ರ: ಗೋಸ್ತಾ ಏಕ ಪೈತಾನಿಚಿ


ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.