ಬೆಂಗಳೂರು : ಇತ್ತೀಚೆಗೆ ನವರಸ ನಾಯಕ ಜಗ್ಗೇಶ್ (Jaggesh) ಮತ್ತು ದರ್ಶನ್ ಅಭಿಮಾನಿಗಳ ನಡುವೆ ನಡೆದ ಮನಸ್ತಾಪ ಎಲ್ಲರಿಗೂ ಗೊತ್ತೇ ಇದೆ. ಈ ಸಮಸ್ಯೆಗಳೆಲ್ಲಾ ಬಗೆಹರಿದೂ ಆಗಿದೆ. ಈಗ ಜಗ್ಗೇಶ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಜಗ್ಗೇಶ್ (Jaggesh) ಮೊದಲಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಏನೇ ಇದ್ದರೂ ಸಾಮಾಜಿಕ ಜಾಲತಾಣಗಳ (Social media) ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಇದೀಗ ಜಗ್ಗೇಶ್ ವಿಮರ್ಶಾತ್ಮಕವಾಗಿ ಬರೆದು ಪೋಸ್ಟ್ ವೊಂದನ್ನು ಹಾಕಿದ್ದಾರೆ. 


ಇದನ್ನೂ ಓದಿ : 'ಯೌವನದ ಮದದಲ್ಲಿ ನೋಯಿಸಿದ್ದರೆ..' ಜಗ್ಗೇಶ್ ಬರೆದ ಪತ್ರ ಓದಿದರೆ ಕಣ್ಣಲ್ಲಿ ಹನಿಯುದುರತ್ತದೆ..


ವಿಶ್ವ ಎಂಬ ಚಲಿಸುವ ಗಾಡಿಯಲ್ಲಿ ಮನುಕುಲದ ಸಮಸ್ತರು ಪ್ರಯಾಣಿಕರು (Passengers). ಈ ಪ್ರಯಾಣದಲ್ಲಿ ಯಾರು ಸ್ನೇಹಿತರಲ್ಲಾ. ಯಾರು ಶತೃಗಳು ಅಲ್ಲಾ. ಕೆಲವರು ನಗುತ್ತ ಮಾತಾಡಿಸುತ್ತಾರೆ. ಕೆಲವರು ನೋಡಿಯು ನೋಡದಂತೆ ಅವರ ಬಗ್ಗೆ ಮಾತ್ರ ಚಿಂತಿಸಿ ಅನ್ಯರ ತಳ್ಳಿ ಜಾಗಹಿಡಿದು ಕೂರುತ್ತಾರೆ. ಕೆಲವರು ತಮ್ಮ ಸಂತೋಷಕ್ಕಾಗಿ ಜೋರಾಗಿ ಕೂಗಾಡುತ್ತಾ ಆನಂದಿಸಿ ಅನ್ಯರಿಗೆ ನೋವುಂಟು ಮಾಡುತ್ತಾರೆ. ಕೆಲವರು ತಮ್ಮ ಸಂತೋಷ ನೆಮ್ಮದಿಗಾಗಿ ಅನ್ಯರ ಬೈಯುತ್ತ ಗೆದ್ದಂತೆ ಬೀಗಿ ಪ್ರಯಾಣಿಸುತ್ತಾರೆ. ಕೆಲವರು ಗುರು ಹಿರಿಯರ ಕಂಡಕ್ಷಣ ಅವರ ಆಸನ ಹಿರಿಯರಿಗೆ ಬಿಟ್ಟುಕೊಟ್ಟು ಸಾರ್ಥಕ ಭಾವದಿಂದ ಪ್ರಯಾಣ (travel) ಆನಂದಿಸುತ್ತಾರೆ. ಕೆಲವರು ಪ್ರಯಾಣದಲ್ಲಿ ಸಣ್ಣ ಚಿಲ್ಲರೆ ಗಲಾಟಿಯಿಂದ ಹಲ್ಲೆ ಕೊಲೆಯವರೆಗು ಹೋಗಿ ಸಾಮರಸ್ಯ ಹಾಳು ಮಾಡಿ ಅವರು ಹಾಳಾಗುತ್ತಾರೆ. 


H Vishwanath: 'ಅವಕಾಶ ಸಿಕ್ಕರೆ ಖಂಡಿತಾ 'ಬಿಗ್​ ಬಾಸ್' ಮನೆಗೆ ಹೋಗುತ್ತೇನೆ'


ಅದರಲ್ಲಿ ಕೆಲವರು ಮಾತ್ರ ಈ ಪ್ರಯಾಣ ಜಂಜಾಟ ಗಮನಿಸದೆ ತಮ್ಮಲ್ಲೆ ತಾವು ಲೀನವಾಗಿ ಕೆಸರಂತ ಈ ಪ್ರಯಾಣದಲ್ಲಿ ಅದಕ್ಕಂಟದೆ ತಾವರೆ ಹೂವಿನಂತೆ (flower) ಮೇಲೆಬಂದು ಪ್ರಯಾಣ ಆನಂದವಾಗಿ ಮುಗಿಸಿದ ಮೇಲೆಯು ಮನಸಲ್ಲಿ ಉಳಿಯುತ್ತಾರೆ. ಇದ ಹೇಳಲು ಕಾರಣ ಈ ಬದುಕಿನ ಪ್ರಯಾಣದ ಪ್ರಕ್ರಿಯೆ ಕೂಡಿಕಳೆದಾಗ ಉಳಿವುದು ಒಂದೆ "ಸತ್ ಚಿತ್ ಆನಂದ "ಸಚ್ಚಿದಾನಂದ ರೂಪ. ಅದು ಶಿವನ (lord shiva) ಆನಂದ ಸ್ಥಿತಿ.  ಇದ ಅರಿತು ಜೀವನ ಪ್ರಯಾಣ ಮಾಡಿದವ ಮಾತ್ರ ಉತ್ತಮ ಪ್ರಯಾಣಿಕ. ಇದರಲ್ಲಿ ನೀವು ಯಾವ ರೀತಿ ಪ್ರಯಾಣಿಕರು ಚಿಂತಿಸಿ ಬದುಕಿನ ಪ್ರಯಾಣಮಾಡಿ..ಶುಭಮಸ್ತು. ಎಂದು ಜಗ್ಗೇಶ್ ಬರೆದಿದ್ದಾರೆ. 


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.