ಶೂಟಿಂಗ್ ವೇಳೆ ಅವಘಡ : ʼಕಾಂತಾರʼ ಕಲಾವಿದ ನವೀನ್ ಕಾಲು ಮೂಳೆ ಮುರಿತ..!
ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ಅವಘಡದಲ್ಲಿ ಕಾಂತಾರ ಚಿತ್ರದ ಪಾತ್ರದಾರಿ, ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ನವೀನ್ ಡಿ ಪಡೀಲ್ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನವೀನ್ ಅವರ ತೊಡೆಯ ಮೂಳೆ ಮುರಿದು ಹೋಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ : ಸಿನಿಮಾದ ಶೂಟಿಂಗ್ ವೇಳೆ ಸಂಭವಿಸಿದ ಅವಘಡದಲ್ಲಿ ಕಾಂತಾರ ಚಿತ್ರದ ಪಾತ್ರದಾರಿ, ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ನವೀನ್ ಡಿ ಪಡೀಲ್ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನವೀನ್ ಅವರ ತೊಡೆಯ ಮೂಳೆ ಮುರಿದು ಹೋಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರದಲ್ಲಿ ವಕೀಲ ಪಾತ್ರದಲ್ಲಿ ನಟಿಸಿ ಎಲ್ಲರ ನಗುವಿಗೆ ಕಾರಣರಾಗಿದ್ದ ನವೀನ್ ಅವರು ತಮ್ಮ ಮುಂಬರುವ ಹೊಸ ಸಿನಿಮಾದ ಶೂಟಿಂಗ್ ವೇಳೆ ತಮ್ಮ ತೊಡೆಯ ಮೂಳೆ ಮುರಿದುಕೊಂಡಿದ್ದಾರೆ. ಹೀಗಾಗಿ ಅವರನ್ನು ಮೂರು ತಿಂಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಇದನ್ನೂ ಓದಿ: Kantara: ರಶ್ಮಿಕಾ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ಕೇಳಿ ಫ್ಯಾನ್ಸ್ ಶಾಕ್!
ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನವೀನ್ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ನಡೆದ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿತ್ತು. ಮಜಾ ಟಾಕೀಸ್ ನ ಗುಂಡು ಮಾಮಾ ಎಂದೇ ಖ್ಯಾತರಾಗಿದ್ದ ನವೀನ್ ಅವರು ಹಾಸ್ಯ ಕಲಾವಿದರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ತುಳು ಹಾಗೂ ಹಲವು ಕನ್ನಡದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
ನವೀನ್ ಡಿ ಪಡೀಲ್ ‘ಮಾಸ್ಟರ್ ಆಫ್ ಕಾಮಿಡಿ ಅಂಡ್ ಟ್ರಾಜೆಡಿ’ ಎಂದೇ ಖ್ಯಾತಿ ಪಡೆದವರು. ‘ಚಾಲಿ ಪೋಲಿಲು’, ‘ಕುಡ್ಲ ಕೆಫೆ’, ‘ಗಿರ್ಗಿಟ್’ ಮುಂತಾದ ತುಳು ಸಿನಿಮಾಗಳಲ್ಲಿ ನವೀನ್ ಡಿ ಪಡೀಲ್ ಅಭಿನಯಿಸಿದ್ದಾರೆ. ‘ಜರಾಸಂಧ’, ‘ಚೆಲ್ಲಾ ಪಿಲ್ಲಿ’, ‘ಹ್ಯಾಪಿ ಜರ್ನಿ’, ‘ಅನಂತು ವರ್ಸಸ್ ನುಸ್ರತ್’, ‘ರಾಬರ್ಟ್’, ‘ಕಾಂತಾರ’ ಮುಂತಾದ ಕನ್ನಡ ಸಿನಿಮಾಗಳಲ್ಲೂ ನವೀನ್ ಡಿ ಪಡೀಲ್ ಮಿಂಚಿದ್ದಾರೆ. ಕನ್ನಡ ಕಿರುತೆರೆಯ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಗುಂಡು ಮಾವನ ಪಾತ್ರ ನಿಭಾಯಿಸುತ್ತಿದ್ದರು ನವೀನ್ ಡಿ ಪಡೀಲ್.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.