ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ ಎಂದ `ಎಣ್ಣೆ ನಮ್ದು` ಖ್ಯಾತಿಯ ನವೀನ್ ಸಜ್ಜು
ಎಣ್ಣೆ ನಮ್ದು ಊಟ ನಿಮ್ದು ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎಲ್ಲರಿಗೂ ಎಣ್ಣೆ ನಸೆ ಏರೆಸಿದ್ದ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಈಗ `ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ` ಎಂದು ಘೋಷಿಸಿಕೊಂಡಿದ್ದಾರೆ !
ಬೆಂಗಳೂರು: ಎಣ್ಣೆ ನಮ್ದು ಊಟ ನಿಮ್ದು ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎಲ್ಲರಿಗೂ ಎಣ್ಣೆ ನಸೆ ಏರೆಸಿದ್ದ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಈಗ 'ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ' ಎಂದು ಘೋಷಿಸಿಕೊಂಡಿದ್ದಾರೆ !
ಇದೇನಪ್ಪಾ ಎಂದು ನೀವೆಲ್ಲಾ ಹುಬ್ಬೇರಿಸಬೇಡಿ ! ಇದು ಸದ್ಯದಲ್ಲೇ ಬರಲಿರುವ ಅವರ ಮ್ಯೂಸಿಕಲ್ ವಿಡಿಯೋ ಸಾಂಗ್ ನ ಶೀರ್ಷಿಕೆ. ಕನ್ನಡದಲ್ಲಿ ಲೂಸಿಯಾ ಮೂಲಕ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟ ನವೀನ ಸಜ್ಜು, ತಮ್ಮದೇ ವಿಶಿಷ್ಟ ಶೈಲಿ ಸಂಗೀತ ಹಾಗೂ ಹಿನ್ನಲೆಯ ಗಾಯನದಿಂದ ಗಮನ ಸೆಳೆದಿದ್ದಾರೆ. ಎಣ್ಣೆ ಸಾಂಗ್ ನಂತರ ನವೀನ ಸಜ್ಜು ಏನು ಮಾಡ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ 'ನಾಳೆಯಿಂದ ಎಣ್ಣೆ ಬುಟ್ಬುಡ್ತಿನಿ' ಎಂದು ಉತ್ತರ ನೀಡಿದ್ದಾರೆ. ಶನಿವಾರದಂದು (ಜುಲೈ 27) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನವೀನ್ ಸಜ್ಜುಗೆ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ಹಿನ್ನಲೆಯಲ್ಲಿ ಅವರೆಲ್ಲರಿಗೂ ಧನ್ಯವಾದ ಹೇಳಿ ಈ ರೀತಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಹೊಸ ಯೋಜನೆ ಬಗ್ಗೆ ಬರೆದುಕೊಂಡಿದ್ದಾರೆ.
"ಹುಟ್ಟುಹಬ್ಬದ ಶುಭಾಶಯ ಕೋರಿದ ಎಲ್ಲ ಸ್ನೇಹಿತರಿಗೂ ಆತ್ಮೀಯ ಕೃತಜ್ಞತೆಗಳು. ಈ ದಿನ ನನಗೆ ಡಬ್ಬಲ್ ಖುಷಿ ನೀಡಿದ ದಿನ. ಜನ್ಮ ದಿನದಂದೇ ನನ್ನದೇ ಸಂಯೋಜನೆ, ನಿರ್ದೇಶನದಲ್ಲಿ ಬರುತ್ತಿರುವ ನನ್ನ ಮುಂದಿನ ಬಹುನಿರೀಕ್ಷಿತ ಮ್ಯೂಸಿಕಲ್ ವಿಡಿಯೋ ಸಾಂಗ್ 'ನಾಳೆಯಿಂದ ಎಣ್ಣೆ ಬುಟ್ಬುಡ್ತಿನಿ' ಹಾಡಿನ ಪೋಸ್ಟರ್ ಅನ್ನು ನನ್ನ ಪ್ರೀತಿಯ ಸತೀಶಣ್ಣ ಮತ್ತು ಅಚ್ಚುತ್ ಸಾರ್ ಹಾಗೂ ಹಲವು ಆತ್ಮೀಯ ಸ್ನೇಹಿತರು ಬಿಡುಗಡೆ ಮಾಡಿದ್ದಾರೆ... ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ ಸದಾ ಹೀಗೆ ನನ್ನ ಮೇಲೆ ಇರಲಿ ಧನ್ಯವಾದಗಳು Coming soon " ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಹೊಸ ಯೋಜನೆ ಬಗ್ಗೆ ಬರೆದುಕೊಂಡಿದ್ದಾರೆ.