Tiku Weds Sheru Trailer: ನೀವೂ ಕೂಡ ಒಂದು ವೇಳೆ ನವಾಜುದ್ದೀನ್ ಸಿದ್ದಿಕಿ ಅವರ ನಟನೆಯ ಅಭಿಮಾನಿಯಾಗಿದ್ದು, ಅವರ 'ಟಿಕು ವೆಡ್ಸ್ ಶೇರು' ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದರೆ. ನಿಮಗೊಂದು ಒಳ್ಳೆಯ ಸುದ್ದಿ ಇದೆ. ಪ್ರಸ್ತುತ ಈ ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದೆ.  ಇದರಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ  ಸಹ ನಟಿ ಅವನೀತ್ ಕೌರ್ ನಡುವೆ ತುಂಬಾ ತಮಾಷೆ ಮತ್ತು ಅತ್ಯುತ್ತಮ ಕೆಮಿಸ್ಟ್ರಿ ನೋಡಲು ಸಿಗುತ್ತಿದೆ.


COMMERCIAL BREAK
SCROLL TO CONTINUE READING

ಚಿತ್ರದ ಕಥೆ ಏನು?
'ಟಿಕು ವೆಡ್ಸ್ ಶೇರು' ಕಥೆಯು ಟಿಕು (ಅವ್ನೀತ್ ಕೌರ್) ಮತ್ತು ಶೇರು (ನವಾಜುದ್ದೀನ್ ಸಿದ್ದಿಕಿ) ಅವರ ಜೀವನದ ಸುತ್ತ ಹೆಣೆದ ಒಂದು ಕತೆಯಾಗಿದೆ. ಇದರಲ್ಲಿ ಶೇರು ಮುಂಬೈನಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದಾನೆ ಮತ್ತು ಆತ ತನ್ನನ್ನು ತಾನು ಸೂಪರ್ ಸ್ಟಾರ್ ಎಂದು ಭಾವಿಸುತ್ತಾನೆ. ಚಿತ್ರದಲ್ಲಿ ನಟಿಯಾಗುವ ಕನಸು ಹೊತ್ತ ಟೀಕುವಿನ ಮದುವೆ ಸಂಬಂಧ ಶೇರು ಜೊತೆಗೆ ಕೂಡಿಬರುತ್ತದೆ ಮತ್ತು ಮುಂಬೈಗೆ ಹೋಗುವ ಒಂದೇ ಒಂದು ಉದ್ದೇಶದಿಂದ ಶೇರುವನ್ನು ಮದುವೆಯಾಗಲು ಆಕೆ ಸಿದ್ದಳಾಗುತ್ತಾಳೆ.



ಇದನ್ನೂ ಓದಿ-Modi Government: ಸರ್ಕಾರಿ ನೌಕರರನ್ನು ಒತ್ತಡ ಮುಕ್ತವಾಗಿರಿಸಲು ಆಶ್ಚರ್ಯಕರ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ


ಅಷ್ಟೇ ಅಲ್ಲ, ಮುಂಬೈಗೆ ಬಂದ ಟಿಕು ತನ್ನ ನಟಿಯಾಗುವ ಕನಸನ್ನು ನನಸಾಗಿಸಲು ಮನೆಯಿಂದ ಓಡಿ ಹೋಗುತ್ತಾಳೆ. ಈ ಕಥೆಯಲ್ಲಿ ಮುಂದೆ ಏನೆಲ್ಲಾ ಕುತೂಹಲಕಾರಿ ಟ್ವಿಸ್ಟ್‌ಗಳು ಬರುತ್ತವೆ ಎಂಬುದನ್ನು ನೋಡಲು, ನೀವು ಚಿತ್ರದ ಬಿಡುಗಡೆಗಾಗಿ ಕಾಯಬೇಕಾಗಿದೆ.


ಇದನ್ನೂ ಓದಿ-Biparjoy Update: ಭಾರಿ ವಿನಾಶ ಸೃಷ್ಟಿಸಲಿದೆ ಬಿಪರ್ ಜಾಯ್, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ!


ನಟಿಯಾಗಿ ಅವನೀತ್ ಅವಳ ಮೊದಲ ಚಿತ್ರ ಇದು
ಕೇವಲ 21 ವರ್ಷದ ಅವ್ನೀತ್ ಕೌರ್ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಚಲನಚಿತ್ರಗಳ ಹೊರತಾಗಿ, ಅವನೀತ್ ಅನೇಕ ಹಿಟ್ ಟಿವಿ ಶೋಗಳಲ್ಲಿ ತನ್ನ ಅತ್ಯುತ್ತಮ ನಟನೆಯಿಂದ ಜನರ ಹೃದಯವನ್ನು ಗೆದ್ದಿದ್ದಾರೆ. ಈ ಚಿತ್ರದಲ್ಲಿ ಆಕೆ ಎಷ್ಟರ ಮಟ್ಟಿಗೆ ಜನರನ್ನು ಮೆಚ್ಚಿಸಬಲ್ಲಳು ಎಂಬುದು ಕಾಲವೇ ನಿರ್ಧರಿಸಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ