ಬೆಂಗಳೂರು : ಕಾಂತಾರ ಯಶಸ್ಸನ ಮೂಲಕ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕನ್ನಡದ ಕಾಂತಾರ ಎಲ್ಲರನ್ನು ಆಕರ್ಷಿಸುತ್ತಿದೆ. ಭಾಷೆಯ ಅಡೆತಡೆಗಳನ್ನು ದಾಟಿ 2022 ರ ಅತಿದೊಡ್ಡ ಬ್ಲಾಕ್‌ಬಸ್ಟರ್‌ಸಿನಿಮಾಗಳಲ್ಲಿ ಒಂದಾಗಿ ಕಾಂತಾರ ಹೊರಹೊಮ್ಮಿದೆ. ಇತ್ತೀಚೆಗೆ ನವಾಜುದ್ದೀನ್ ಸಿದ್ದಿಕಿ ಅವರು ರಿಷಬ್‌ ಶೆಟ್ಟಿ ಬಗ್ಗೆ ಅಸೂಯೆ ಇದೆ ಅಂತ ಹೇಳಿದ್ದು, ಇದಕ್ಕೆ ರಿಷಬ್‌ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಅಜೆಂಡಾ ಆಜ್ ತಕ್ 22 ರಲ್ಲಿ ಮಾತನಾಡಿದ ರಿಷಬ್ ಮತ್ತು ನವಾಜುದ್ದೀನ್ ಚಿತ್ರರಂಗದಲ್ಲಿ ಕೆಲಸ ಮಾಡಿದ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಅವರ ಸಂಭಾಷಣೆಯ ಸಮಯದಲ್ಲಿ, ನವಾಜ್ ಅವರು ರಿಷಬ್ ಅವರ ಕೆಲಸದ ಬಗ್ಗೆ ಹೊಟ್ಟೆಕಿಚ್ಚು ಹೊಂದಿದ್ದಾಗಿ ತಿಳಿಸಿದರು. ಯಾರಾದರೂ ಒಳ್ಳೆಯ ಕೆಲಸ ಮಾಡುತ್ತಿದ್ದರೆ ಅಸೂಯೆ ಮತ್ತು ಆರೋಗ್ಯಕರ ಸ್ಪರ್ಧೆಯ ಭಾವನೆ ಇರುತ್ತದೆ ಎಂದು ತಿಳಿಸಿದರು. ಇದು ಈ ರಿತಿಯ ಭಾವನೆ ನಿಮ್ಮನ್ನು ಬೆಳವಣಿಗೆಯತ್ತ ಸಾಗುವಂತೆ ಮಾಡುತ್ತದೆ ಎಂದು ಹೇಳಿದರು.


ಇದನ್ನೂ ಓದಿ: Pathaan : ಪಠಾಣ್ ʼಬೇಷರಮ್ ರಂಗ್ʼ ಸಾಂಗ್ ಔಟ್.. ಸಖತ್ತಾಗಿದೆ ಕಿಂಗ್‌ ಖಾನ್‌, ದೀಪ್ಸ್‌ ಲುಕ್‌


ನಂತರ ನವಾಜ್‌ ಮಾತಿಗೆ ಉತ್ತರಿಸಿದ ರಿಷಬ್, ಸೇಕ್ರೆಡ್ ಗೇಮ್ಸ್ ಸೇರಿದಂತೆ ನವಾಜ್‌ ಅವರ ಅನೇಕ ಚಲನಚಿತ್ರಗಳನ್ನು ತಾನು ವೀಕ್ಷಿಸಿದ್ದೇನೆ. ನಾನು ಅವರ ಬಹುದೊಡ್ಡ ಅಭಿಮಾನಿ. ಮಧ್ಯಮ ವರ್ಗದಿಂದ ಬಂದ ಅವರು ಇಂದು ಈ ಸ್ಥಾನದಲ್ಲಿ ನಿಂತಿದ್ದಾರೆ ಅಂದ್ರೆ ಅದಕ್ಕೆ ಅವರ ಪರಿಶ್ರಮ ಕಾರಣ. ಅದನ್ನು ನಾನು ಮೆಚ್ಚಿಕೊಂಡಿದ್ದೇನೆ. ಇವರೇ ನನಗೆ ಬಹುದೊಡ್ಡ ಸ್ಪೂರ್ತಿ ಎಂದರು.


ನವಾಜ್‌ ಅವರಿಗೆ ಪ್ರರಿಶ್ರಮ ದೊಡ್ಡದು. ಯಾವುದೇ ಹಿನ್ನೆಲೆಯಿಲ್ಲದಿದ್ದರೂ ಇಂದು ಉತ್ತಮ ಸ್ಥಾನದಲ್ಲಿದ್ದಾರೆ. ರಂಗಭೂಮಿಯಿಂದ ಬಂದು ಇಂದು ಬಿಗ್‌ ಪರದೆಯ ಮೇಲೆ ಮಿಂಚುತ್ತಿದ್ದಾರೆ. ಅವರು ಕೆಲಸಗಳೇ ನನಗೆ ಸ್ಪೂರ್ತಿ. ಅವರಂತೆ ನಾನು ಈ ಹಿಂದೆ ಸಣ್ಣ ಪಾತ್ರಗಳನ್ನು ಮಾಡಿದ್ದೇನೆ. ನವಾಜ್‌ ನಮ್ಮ ಹಿರಿಯರು, ಅವರು ನಡೆದು ಬಂದ ದಾರಿಯಲ್ಲಿಯೇ ನಾವು ಪ್ರಯಾಣಮಾಡುತ್ತಿದ್ದೇವೆ ಎಂದು ರಿಷಬ್ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.