South India’s richest actress: ನಟಿಯರು ತಮ್ಮ ನಟರಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಹಲವಾರು ನಾಯಕಿಯರು ಭಾರತೀಯ ಚಲನಚಿತ್ರೋದ್ಯಮದಲ್ಲಿನ ವೇತನದ ಅಸಮಾನತೆಯ ಬಗ್ಗೆ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಆದರೆ ಕೆಲವು ನಟಿಯರಿದ್ದಾರೆ, ಅವರು ತಮ್ಮದೇ ಆದ ಛಾಪನ್ನು ಸಿನಿರಂಗದಲ್ಲಿ ಮೂಡಿಸಿದ್ದಾರೆ. ಇವರು ಸಹ ನಟರಂತೆ ಕೋಟಿ ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಕ್ರೇಜ್‌ ಕ್ರಿಯೇಟ್‌ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಲೇಡಿ ಸೂಪರ್‌ಸ್ಟಾರ್‌ ಈಗ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ದೊಡ್ಡ ಬಾಲಿವುಡ್ ಚಿತ್ರಗಳಲ್ಲಿಯೂ ಸೌತ್‌ ನಟಿಯರು ಅಭಿನಯಿಸುತ್ತಿದ್ದಾರೆ. ದಕ್ಷಿಣ ಭಾರತದ ಈ ಟಾಪ್ ನಟಿಯರು ಪ್ರತಿ ಚಿತ್ರಕ್ಕೆ ಉತ್ತಮ ಸಂಭಾವನೆಯನ್ನು  ಪಡೆಯುತ್ತಿದ್ದಾರೆ. ಹೀಗಿರುವಾಗ ದಕ್ಷಿಣ ಚಿತ್ರರಂಗದ ಶ್ರೀಮಂತ ನಟಿ ಯಾರೆಂದು ಇಂದು ತಿಳಿಯೋಣ. 


ಇದನ್ನೂ ಓದಿ: ಪಠಾಣ್, RRR ಅಲ್ಲ.. ಕೊರೊನಾ ಬಳಿಕ ಅತಿ ಹೆಚ್ಚು ಲಾಭ ಗಳಿಸಿದ್ದು ಕನ್ನಡದ ಈ ಸಿನಿಮಾ!


ನಯನತಾರಾ : ವರದಿಗಳ ಪ್ರಕಾರ, 38 ವರ್ಷದ ನಯನತಾರಾ ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ನಯನತಾರಾ ಪ್ರಸ್ತುತ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಆಕೆಯ ಒಟ್ಟು ಆಸ್ತಿ ಸುಮಾರು 165 ಕೋಟಿ ರೂ. 


ತಮನ್ನಾ ಭಾಟಿಯಾ : 'ಮಿಲ್ಕಿ ಬ್ಯೂಟಿ' ಎಂದೇ ಜನಪ್ರಿಯರಾಗಿರುವ ತಮನ್ನಾ ಇಂದು ಭಾರತದ ಟಾಪ್ ನಟಿಯರಲ್ಲಿ ಒಬ್ಬರು. 33 ವರ್ಷದ ತಮನ್ನಾ ಅವರ ಒಟ್ಟು ಆಸ್ತಿ ಸುಮಾರು 110 ಕೋಟಿ ರೂ.


ಅನುಷ್ಕಾ ಶೆಟ್ಟಿ : ಬಾಹುಬಲಿ ತಾರೆ ಅನುಷ್ಕಾ ಶೆಟ್ಟಿ ತಮಿಳು ಮತ್ತು ತೆಲುಗು ಇಂಡಸ್ಟ್ರಿಯ ಅಗ್ರ ನಟಿಯರ ಪಟ್ಟಿಯಲ್ಲಿದ್ದಾರೆ. ವರದಿಗಳ ಪ್ರಕಾರ, 41 ವರ್ಷದ ಅನುಷ್ಕಾ ಶೆಟ್ಟಿ ಸುಮಾರು 100 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 


ಇದನ್ನೂ ಓದಿ: ರಜನಿಕಾಂತ್‌ಗೆ ʻಸೂಪರ್ ಸ್ಟಾರ್ʼ ಬಿರುದು ತಂದುಕೊಟ್ಟ ಸಿನಿಮಾ ಇದೇ..!


ಸಮಂತಾ ರುತ್ ಪ್ರಭು : ಶಾಕುಂತಲಂ ತಾರೆ ಸಮಂತಾ ರುತ್ ಪ್ರಭು ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ ಸಮಂತಾ ರುತ್ ಪ್ರಭು ಅವರ ಒಟ್ಟು ಆಸ್ತಿ ಸುಮಾರು 89 ಕೋಟಿ ರೂ. 


ರಶ್ಮಿಕಾ ಮಂದಣ್ಣ : ಅಲ್ಲು ಅರ್ಜುನ್ ಜೊತೆಗಿನ ಪುಷ್ಪ ಚಿತ್ರದ ಯಶಸ್ಸಿನ ನಂತರ ‘ನ್ಯಾಷನಲ್ ಕ್ರಶ್’ ಎಂಬ ಬಿರುದು ಪಡೆದಿರುವ ರಶ್ಮಿಕಾ ಮಂದಣ್ಣ ಮನೆಮಾತಾಗಿದ್ದರು. ಅವರು ಸುಮಾರು 28 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ.


ಪೂಜಾ ಹೆಗ್ಡೆ : ಪೂಜಾ ಹೆಗ್ಡೆ ಈಗ ಭಾರತೀಯ ಚಿತ್ರರಂಗದ ಟಾಪ್‌ ನಟಿಯರ ಸಾಲಿಗೆ ಸೇರಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ನಟಿಸಿರುವ ಪೂಜಾ ಹೆಗ್ಡೆ ದಕ್ಷಿಣ ಚಿತ್ರರಂಗದಲ್ಲಿ ಚಿರಪರಿಚಿತರು. ವರದಿಗಳ ಪ್ರಕಾರ ಆಕೆಯ ಒಟ್ಟು ಆಸ್ತಿ ಸುಮಾರು 50 ಕೋಟಿ ರೂ. 


ಇದನ್ನೂ ಓದಿ: ರಾಗಿಣಿ ಮನೆಯಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ; ಇಲ್ಲಿವೆ ನೋಡಿ ಫೋಟೊಸ್..!‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.