Rajinikanth : ರಜನಿಕಾಂತ್‌ಗೆ ʻಸೂಪರ್ ಸ್ಟಾರ್ʼ ಬಿರುದು ತಂದುಕೊಟ್ಟ ಸಿನಿಮಾ ಇದೇ..!

Rajinikanth : ಜಮೀನ್ದಾರನ ನಿಷ್ಠಾವಂತ ಸಹಾಯಕ ಮೂಕಯ್ಯನ ಪಾತ್ರ ನೋಡಿದವರು ಆ ನಟನ ಅಭಿನಯಕ್ಕೆ ಮರುಳಾಗದೇ ಇರರು. ಅಂದು ಇದೇ ಪಾತ್ರ ರಜನಿಕಾಂತ್‌ ಅವರ ಸಿನಿ ಕರಿಯರ್‌ಗೆ ಟರ್ನಿಂಗ್‌ ಪಾಯಿಂಟ್‌ ಆಯಿತು. ಈ ಸಿನಿಮಾ ಮೂಲಕವೇ ರಜನಿಕಾಂತ್‌ ಜನರ ಮನಗೆದ್ದರು. ಯಾವುದು ಆ ಸಿನಿಮಾ? ಇಲ್ಲಿದೆ ನೋಡಿ..   

Written by - Chetana Devarmani | Last Updated : Jun 11, 2023, 11:35 AM IST
  • ʻಸೂಪರ್ ಸ್ಟಾರ್ʼ ಬಿರುದು ಪಡೆದ ನಟ ರಜನಿಕಾಂತ್‌
  • ಈ ಬಿರುದು ತಂದುಕೊಟ್ಟ ಸಿನಿಮಾ ಯಾವುದು ಗೊತ್ತಾ?
  • ಮೂಕಯ್ಯನ ಪಾತ್ರದಲ್ಲಿ ನೋಡುಗರ ಮನಗೆದ್ದಿದ್ದರು ರಜನಿಕಾಂತ್‌
Rajinikanth : ರಜನಿಕಾಂತ್‌ಗೆ ʻಸೂಪರ್ ಸ್ಟಾರ್ʼ ಬಿರುದು ತಂದುಕೊಟ್ಟ ಸಿನಿಮಾ ಇದೇ..!  title=
Rajinikanth

Rajinikanth : ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಬಿರುದು ನೀಡುವುದು ಸಾಮಾನ್ಯ. ಸುದೀಪ್‌ ಗೆ ಅಭಿನಯ ಚಕ್ರವರ್ತಿ, ಕಿಚ್ಚ ಎಂದು ಕರೆದರೆ, ದರ್ಶನ್‌ಗೆ ಚಾಲೆಂಜಿಂಗ್‌ ಸ್ಟಾರ್‌ ಎನ್ನುತ್ತಾರೆ. ಹೀಗೆ ಪ್ರೀತಿಯಿಂದ ಫ್ಯಾನ್ಸ್‌ ತಮ್ಮ ನೆಚ್ಚಿನ ಹೀರೋಗೆ ಬಿರುದು ನೀಡುತ್ತಾರೆ. ಅದೇ ರೀತಿ ರಜನಿಕಾಂತ್ ಅವರನ್ನು ತಮಿಳು ಚಿತ್ರರಂಗದ ʻಸೂಪರ್ ಸ್ಟಾರ್ʼ ಎಂದು ಕರೆಯುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ರಜನಿಕಾಂತ್‌ ಅವರಿಗೆ ಇದೇ ಬಿರುದನ್ನು ಜನರು ಏಕೆ ನೀಡಿದರು? ಯಾವ ಸಿನಿಮಾದಿಂದ ಅವರಿಗೆ ಸೂಪರ್‌ ಸ್ಟಾರ್‌ ಎಂಬ ಬಿರುದು ಸಿಕ್ಕಿತು ಗೊತ್ತಾ? 

ಈ ವಿಚಾರವನ್ನು ನಮನ್ ರಾಮಚಂದ್ರನ್ ಅವರು ರಜನಿಕಾಂತ್‌ ಅವರ ಅಧಿಕೃತ ಜೀವನಚರಿತ್ರೆಯಲ್ಲಿ ಬಹಿರಂಗಪಡಿಸಿದ್ದಾರೆ. ಎಂ ಭಾಸ್ಕರ್ ಅವರ 1978 ರ ʻಭೈರವಿʼ ಚಿತ್ರ ರಜನಿಕಾಂತ್ ಅವರಿಗೆ ʻಸೂಪರ್ ಸ್ಟಾರ್ʼ ಎಂಬ ಬಿರುದು ತಂದುಕೊಟ್ಟಿತು. ಚಿತ್ರದಲ್ಲಿ ರಜನಿಕಾಂತ್‌ ಮೂಕಯ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಜಮೀನ್ದಾರನ ನಿಷ್ಠಾವಂತ ಸಹಾಯಕನಾಗಿರುತ್ತಾರೆ. ಜಮೀನ್ದಾರನ ಮಗ ಮೂಕಯ್ಯನ ಸಹೋದರಿಯನ್ನು ಅತ್ಯಾಚಾರ ಮಾಡಿದ ನಂತರ ಅವನ ಯಜಮಾನನ ವಿರುದ್ಧ ತಿರುಗಿಬೀಳುತ್ತಾನೆ. 

ಇದನ್ನೂ ಓದಿ: ಕರೆಂಜಿತ್ ಕೌರ್ ʼಸನ್ನಿ ಲಿಯೋನ್‌ʼ ಆಗಿದ್ದೇಗೆ..! ಯುವಕರ ಹೃದಯದೊಡತಿಯ ಲೈಫ್‌ ಕಹಾನಿ

ಚಿತ್ರನಿರ್ಮಾಪಕ ಕಲೈಜ್ಞಾನಂ ರಜನಿಕಾಂತ್ ಅವರ ಅದ್ಭುತ ನಟನೆಯಿಂದ ಪ್ರಭಾವಿತರಾದರು. ಭೈರವಿ ಸಿನಿಮಾಗೆ ನಾಯಕನಾಗಿ ನಟಿಸಲು ಚಾನ್ಸ್‌ ನೀಡಿದರು. ಶ್ರೀಕಾಂತ್ ಅವರು ಈ ಸಿನಿಮಾದಲ್ಲಿ ವಿಲನ್‌ ಆಗಿದ್ದಾರೆ. ಆದರೆ ವಿತರಕ-ನಿರ್ಮಾಪಕ ಎಸ್ ಧನು ಅವರು ರಜನಿಕಾಂತ್ ಕೇವಲ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್‌ ಮಾಡುವುದು ಮಾತ್ರವಲ್ಲ, ಅವರೊಬ್ಬ ಅದ್ಭುತ ನಟ ಎಂಬುದನ್ನು ಅರಿತುಕೊಂಡರು. ಚೆನ್ನೈನ ಪ್ಲಾಜಾ ಥಿಯೇಟರ್‌ನಲ್ಲಿ ಗಮನ ಸೆಳೆಯುವ ಪೋಸ್ಟರ್‌ಗಳು ಮತ್ತು ನಟನ ಬೃಹತ್ ಕಟ್-ಔಟ್‌ಗಳೊಂದಿಗೆ ಹೆಚ್ಚಿನ ಮಾರುಕಟ್ಟೆ ಹೂಡಿಕೆಯೊಂದಿಗೆ ಮುಂದುವರಿಯಲು ನಿರ್ಮಾಪಕರು ನಿರ್ಧರಿಸಿದರು. ಅವರು "ಸೂಪರ್ ಸ್ಟಾರ್" ಎಂದು ಬರೆದಿರುವ ರಜನಿಕಾಂತ್ ಪೋಸ್ಟರ್‌ಗಳನ್ನು ಹಾಕಿದರು. 

ಉದ್ಯಮವು ಎಂಜಿ ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಅವರಂತಹ ದೊಡ್ಡ ತಾರೆಯರನ್ನು ಹೊಂದಿದ್ದ ಆ ಸಮಯದಲ್ಲಿ ರಜನಿಕಾಂತ್  ತಮ್ಮ ನಟನೆಯಿಂದ ಮಿಂಚಲು ಆರಂಭಿಸಿದ್ದರು. ಭೈರವಿ ಜೂನ್ 2, 1978 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಲು ಭೈರವಿ ತಂಡವು ಚಿತ್ರಮಂದಿರಗಳಿಗೆ ತೆರಳಿತು. ಮರುದಿನ, ಪ್ರೇಕ್ಷಕರು ರಜನಿಕಾಂತ್ ಅವರನ್ನು ಸೂಪರ್‌ಸ್ಟಾರ್ ಎಂದು ಕರೆಯಲು ಆರಂಭಿಸಿದರ. ಆ ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್‌ ಆಗಿ ಜನಪ್ರಿಯರಾದರು. ಈ ಚಿತ್ರವು ವರ್ಷದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಯಿತು. 

ಇದನ್ನೂ ಓದಿ: ಅಂದು ಸುದೀಪ್ ಕೊಟ್ಟ 50 ರೂ. ಬದುಕನ್ನೇ ಬದಲಿಸಿತು! ಪ್ರೊಡ್ಯೂಸರ್ ಆದ ಫ್ಯಾನ್‌ ಯಾರು ಗೊತ್ತಾ?

ಪ್ರಸ್ತುತ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಂ ಸಿನಿಮಾ ಶೂಟಿಂಗ್‌ ತಲೈವಾ ಬ್ಯುಸಿಯಾಗಿದ್ದಾರೆ. ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ರಜನಿಕಾಂತ್ 32 ವರ್ಷಗಳ ನಂತರ ಅಮಿತಾಬ್ ಬಚ್ಚನ್ ಅವರೊಂದಿಗೆ ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ. ಇಬ್ಬರ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ನಟ ರಜನಿಕಾಂತ್‌ ಇತ್ತೀಚೆಗೆ ಚೆನ್ನೈನಲ್ಲಿ ವರ್ಷದ ಬಹು ನಿರೀಕ್ಷಿತ ಚಿತ್ರ ಜೈಲರ್ ಶೂಟಿಂಗ್‌ನ್ನು ಮುಗಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News