Nayanthara: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಸಾಯಿ ಪಲ್ಲವಿ ಹಾಗೂ ತ್ರಿಶಾ ಅವರ ಮದುವೆ ವಿಚಾರವಾಗಿ ಸಾಕಷ್ಟು ಸುಳ್ಳು ಸುದ್ದಿಗಳು ಹಬ್ಬಿದ್ದವು. ಇವೆಲ್ಲ ಗಾಸಿಪ್‌ಗಳಿಗೂ ಸ್ವತಃ ಅವರೇ ಪ್ರತಿಕ್ರಿಯಿಸಿ ಅಂತ್ಯ ಹಾಡಿದ್ದರು. ಇದೀಗ ಜವಾನ್‌ ಸಿನಿಮಾ ಮೂಲಕ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಅವರ ಬಗ್ಗೆ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. 


COMMERCIAL BREAK
SCROLL TO CONTINUE READING

ಜವಾನ್‌ ಚಿತ್ರದಲ್ಲಿ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹಾಗೂ ನಯನತಾರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಯನತಾರಾ ಪಾತ್ರ  ಸಹ ಸಖತ್ ಪವರ್‌ಫುಲ್ ಆಗಿದೆ. ಆದರೆ ದೀಪಿಕಾ ಅವರನ್ನೇ ಅಟ್ಲೀ ಹೈಲೈಟ್‌ ಮಾಡಿದ್ದಕ್ಕೆ ನಯನತಾರಾ ಮುನಿಸಿಕೊಂಡಿದ್ದಾರೆ ಎಂದು ಟ್ವಿಟ್ಟರ್ ಹಾಗೂ ಯೂಟ್ಯೂಬ್ ಚಾನೆಲ್‌ಗಳು ವರದಿ ಮಾಡಿದ್ದವು. 


ಇದನ್ನೂ ಓದಿ-ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ-ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್


ಇದೇ ಕಾರಣಕ್ಕೆ ಲೇಡಿ ಸೂಪರ್‌ ಸ್ಟಾರ್‌ ಮತ್ತೆ ಅಟ್ಲಿ ನಿರ್ದೇಶನದಲ್ಲಿ ನಟಿಸುವುದಿಲ್ಲ ಎನ್ನುವ ಸುದ್ದಿಯೂ ಸಹ ಸಖತ್‌ ವೈರಲ್‌ ಆಗಿತ್ತು. ಆದರೆ ಸೂಕ್ತ ಮಾಹಿತಿ ತಿಳಿಯದೇ ವದಂತಿ ಹಬ್ಬಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ನಯನತಾರಾ ಸುಳ್ಳು ಸುದ್ದಿ ಬರೆದವರ ಮತ್ತು ಹಬ್ಬಿಸಿದವರ ವಿರುದ್ಧ ನಯನತಾರಾ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 


ಇತ್ತೀಚೆಗೆ ನಿರ್ದೇಶಕ ಅಟ್ಲಿ ಹುಟ್ಟುಹಬ್ಬಕ್ಕೆ ನಯನತಾರಾ ವಿಷ್‌ ಮಾಡಿದ್ದರು. ಅಲ್ಲದೇ ಅಟ್ಲಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಇದನ್ನೇಲ್ಲಾ ನೋಡಿದರೆ ಅವರಿಬ್ಬರ ನಡುವೆ ಯಾವುದೇ ವೈಮನಸ್ಯೆವಿಲ್ಲ..ಹರಡಿರುವ ಸುದ್ದಿಗಳೆಲ್ಲಾ ಸುಳ್ಳು ಎಂಬುದು ಸ್ಪಷ್ಟವಾಗಿತ್ತು. 


ಇದನ್ನೆಲ್ಲಾ ಹೊರತುಪಡಿಸಿ ಅನಾವಶ್ಯಕವಾಗಿ ಸುಳ್ಳು ವದಂತಿಗಳನ್ನು ಹುಟ್ಟುಹಾಕಿ ನಯನತಾರಾ ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಆದ್ದರಿಂದ ಲೇಡಿ ಸೂಪರ್‌ ಸ್ಟಾರ್ ಅವರ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಚರ್ಚೆಯೊಂದು ಜೋರಾಗಿದೆ. 


ಇದನ್ನೂ ಓದಿ-ಸಿಲ್ಕ್​ ಸ್ಮಿತಾ ಶವದೊಂದಿಗೆ ಲೈಂಗಿಕ ಕ್ರಿಯೆ! ಸಂಚಲನ ಸೃಷ್ಟಿಸಿದ ಕಾಲಿವುಡ್​ ನಟನ ಬಹಿರಂಗ ಹೇಳಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ