Neenadena serial : ಈ ಹೊಸ ಕಥೆಯ ಅಧ್ಯಾಯವು ಕರ್ನಾಟಕದ ಸುಂದರ ತಾಣ ದೈವಾರಾಧನೆಯ ತವರೂರಾಗಿರುವ ತುಳುನಾಡಿನಲ್ಲಿ ಆರಂಭವಾಗುತ್ತದೆ. ನಾಯಕ ವಿಕ್ರಂ ದಂಧೆ ನಡೆಸುತ್ತಾ, ಗೂಂಡಾಗಿರಿ ಮಾಡಿಕೊಂಡು ಕುಡ್ಲದ ಕರುಣಾಕರ್ ಶೆಟ್ಟಿ ಎಂಬ ಡಾನ್‌ನ ಬಲಗೈ ಬಂಟನಾಗಿರ್ತಾನೆ. ಇನ್ನು ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಮಗಳಾಗಿದ್ದು, ಉಡುಪಿ ಕೃಷ್ಣನ ಭಕ್ತೆಯಾಗಿರ್ತಾಳೆ. ಜೊತೆಗೆ ಬೇರೆ ಬೇರೆ ರೀತಿಯ ವಸ್ತ್ರಗಳಿರುವ ಕಾಸ್ಟ್ಯೂಮ್ ಅಂಗಡಿಯನ್ನು ಹೊಂದಿರುತ್ತಾಳೆ. 


COMMERCIAL BREAK
SCROLL TO CONTINUE READING

ಒಂದ್ಕಡೆ ರೌಡಿಯಾಗಿದ್ರು ಒಳ್ಳೇದನ್ನೆ ಮಾಡೋ ವಿಕ್ರಂ, ಇನ್ನೊಂದ್ಕಡೆ  ನೇರ ನಡೆಯನ್ನು ಹೊಂದಿದ್ದು ಯಾವ ಸವಾಲಿಗೂ ಸೈ ಅನ್ನೋ ವೇದಾ. ಇವರಿಬ್ಬರು ಹೇಗೆ ಒಂದಾಗ್ತಾರೆ ? ಈ ಎರಡು ವಿರುದ್ಧ ಮನಸುಗಳ ಸೆಣಸಾಟವೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.


ಇದನ್ನೂ ಓದಿ:ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ‘ದೃಷ್ಟಿಬೊಟ್ಟು’..! ಹೊಸ ಧಾರಾವಾಹಿ ಸೆಪ್ಟೆಂಬರ್ 9ರಿಂದ ಪ್ರಸಾರ


ಹಳೆ ಹೆಸರಿನಲ್ಲಿ ಹೊಸ ಕಥೆಯೊಂದಿಗೆ ಶುರುವಾಗುತ್ತಿರುವ ಈ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನಾಗಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಶಿವು ಅಭಿನಯಿಸುತ್ತಿದ್ದಾರೆ. ನೀವು ಮೆಚ್ಚಿರುವ ವಿಕ್ರಂ-ವೇದಾ ಜೋಡಿ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಪ್ರಸ್ತುತ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ರವರು 'ಪಿಂಗಾರ ಪ್ರೊಡಕ್ಷನ್' ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.


ಹೊಸ ಕಥೆಯ ಜೊತೆ ವಿಕ್ರಂ-ವೇದಾರ ಸೆಣಸಾಟದೊಂದಿಗೆ ಶುರುವಾಗ್ತಿದೆ "ನೀನಾದೆ ನಾ" ಪ್ರೀತಿಯ ಹೊಸ ಅಧ್ಯಾಯ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ ತಪ್ಪದೇ ವೀಕ್ಷಿಸಿ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.