ಬೆಂಗಳೂರು : ಜಗ್ಗೇಶ್ ಅವರ ಸಹಕಾರದೊಂದಿಗೆ ಶುರುವಾದ ‘ನವರಸ ನಟನ ಅಕಾಡೆಮಿ’ ಇದೀಗ ಆರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.ಕಳೆದ 6 ವರ್ಷಗಳಲ್ಲಿ 150ಕ್ಕೂ ಹೆಚ್ಚು ಬ್ಯಾಚ್ ಮೂಲಕ ವಿದ್ಯಾರ್ಥಿಗಳಿಗೆ ಅಭಿನಯ,ನಾಟಕ,ನಿರ್ದೇಶನ,ನೃತ್ಯ, ಸಾಹಸ, ಮೂಕಾಭಿನಯ, ಮೇಕಪ್, ಸಂಕಲನ ಮತ್ತು ಡಬ್ಬಿಂಗ್ ಸೇರಿದಂತೆ ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಮೊದಲಾದ ಕೆಲಸಗಳ  ಬಗ್ಗೆ ಈ ಅಕಾಡೆಮಿ ತರಬೇತಿ ನೀಡುತ್ತಾ ಬಂದಿದೆ.


COMMERCIAL BREAK
SCROLL TO CONTINUE READING

ಇದೀಗ ಜುಲೈ 20ರಿಂದ ಹೊಸ ಬ್ಯಾಚ್ ಶುರುವಾಗುತ್ತಿದೆ. ಹಿರಿಯ ನಿರ್ದೇಶಕ ಶಿವಮಣಿ ಈ ಅಕಾಡೆಮಿಯ ಪ್ರಾಂಶುಪಾಲರಾಗಿದ್ದು, ಈ ಸಲ ಸಾಕಷ್ಟು ಹೊಸ ವಿಷಯಗಳನ್ನು ಸೇರಿಸಿಕೊಳ್ಳಲಾಗಿದೆ. ಹೊಸ  ವಿದ್ಯಾರ್ಥಿಗಳಿಗೆ ಅವೆಲ್ಲವೂ ಲಭ್ಯವಾಗಲಿದೆ.ನಾಲ್ಕು ಮತ್ತು ಆರು ತಿಂಗಳ ನಟನೆ, ನಿರ್ದೇಶನದ ಕೋರ್ಸ್, ವಾರದ ತರಗತಿಗಳು ಮತ್ತು ವಾರಾಂತ್ಯದ ತರಗತಿಗಳು  ಅಕಾಡೆಮಿಯಲ್ಲಿ ನಡೆಯಲಿದೆ.  


ಇದನ್ನೂ ಓದಿ :Ramesh Bhat: ಹಿರಿಯ ನಟ ರಮೇಶ್ ಭಟ್ ಹೆಂಡತಿ-ಮಕ್ಕಳು ಯಾರು ಗೊತ್ತಾ? ಇವರ ಮಗ ತುಂಬಾ ಫೇಮಸ್!!


ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ನವರಸ ನಟನ ಅಕಾಡೆಮಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಮಾಲೂರು ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಇನ್ನಿತರೆ ಪಟ್ಟುಗಳನ್ನು ಕಲಿಸಿಕೊಡಲಿದ್ದಾರೆ.


‘ನವರಸ ನಟನ ಅಕಾಡೆಮಿ’ಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಈಗ ಸಾಕಷ್ಟು ಸಿನಿಮಾ,ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.ಹಾಗೆಯೇ ಕೆಲವರು ಸ್ವತಂತ್ರ ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಳ್ಳುತ್ತಿರೋದು ಈ ಸಂಸ್ಥೆಯ ಹೆಚ್ಚುಗಾರಿಕೆ.


ಇದನ್ನೂ ಓದಿ :ಮಹೇಂದ್ರ ಮುನ್ನೋತ್‌ರಿಂದ ಗೋಶಾಲೆಗಳ ಉಳಿವಿಗಾಗಿ ಇಂತಹದ್ದೊಂದು ಯಾನ..!


ಪ್ರಾಂಶುಪಾಲರಾದ ಶಿವಮಣಿ ಸೇರಿದಂತೆ ಕನ್ನಡದ ಹೆಸರಾಂತ ನಿರ್ದೇಶಕರು,ಕಲಾವಿದರು, ತಂತ್ರಜ್ಞರಿಂದ ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇ ಕಿರುಚಿತ್ರವೊಂದನ್ನು ತಯಾರು ಮಾಡಿಸಿ ಅರ್ಹತಾ ಪತ್ರ ನೀಡಲಾಗುತ್ತದೆ‌.ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಸೌಲಭ್ಯವನ್ನು ಕೂಡಾ ನೀಡಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ