ನವದೆಹಲಿ : ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಯಾವುದೇ ಸಮಾರಂಭವಿರಲಿ, ವಿಮಾನ ನಿಲ್ದಾಣವಾಗಲಿ ಅಥವಾ ರಸ್ತೆಯಾಗಲಿ, ಐಶ್ವರ್ಯ ರೈ ಬಚ್ಚನ್ ಅವರ ಪ್ರತಿ ನೋಟವು ಅವರ ಅಭಿಮಾನಿಗಳಮೆಚ್ಚುಗೆಗೆ ಪಾತ್ರವಾಗುತ್ತದೆ.  ಶೀಘ್ರದಲ್ಲೇ  ಐಶ್ವರ್ಯ ರೈ 'ಪೊನ್ನಿಯಿನ್ ಸೆಲ್ವನ್' (Ponniyin Selvan) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಈ ಚಿತ್ರದ ಒಂದು ಲುಕ್ ಸಾಮಾಜಿಕ ಮಾಧ್ಯಮದಲ್ಲಿ ಲೀಕ್ ಆಗಿದೆ.


COMMERCIAL BREAK
SCROLL TO CONTINUE READING

 ಸಾಕಷ್ಟು ರಾಯಲ್ ಆಗಿದೆ ಐಶ್ವರ್ಯ ಲುಕ್ :
ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಮುಂದಿನ ಚಿತ್ರ ಪೊನ್ನಿಯಿನ್ ಸೆಲ್ವನ್' (Ponniyin Selvan) ಚಿತ್ರದಲ್ಲಿ ಅವರ ಲುಕ್ ಸಾಕಷ್ಟು ರಾಯಲ್ ಆಗಿ ಕಾಣುತ್ತದೆ. ಇದೀಗ ಈ ಚಿತ್ರದ ಲುಕ್ ಚಿತ್ರ ಸೆಟ್ ನಿಂದ ಹೊರ ಬಿದ್ದಿದೆ. ಇದರಲ್ಲಿ ಐಶ್ವರ್ಯ (Aishwarya Rai) ಕೆಂಪು ರೇಷ್ಮೆ ಸೀರೆ ಮತ್ತು ಹೆವಿ ಚಿನ್ನದ ಆಭರಣಗಳನ್ನು ಧರಿಸಿರುವುದು ಕಂಡು ಬರುತ್ತದೆ. ಐಶ್ವರ್ಯ ಹಾರ, ಬಳೆಗಳು, ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದಾರೆ. ಇದರಲ್ಲಿ ಐಶ್ವರ್ಯ ರಾಣಿಯಂತೆ ಕಂಗೊಳಿಸುತ್ತಿದಾರೆ. ಈ ಫೋಟೋವನ್ನು ನೋಡಿದರೆ,  ಚಿತ್ರದಲ್ಲಿ ಅವರ ಪಾತ್ರವು ರಾಜಮನೆತನಕ್ಕೆ ಅಥವಾ ರಾಣಿಯ ಪಾತ್ರಕ್ಕೆ ಸಂಬಂಧಿಸಿದ್ದು, ಎನ್ನುವುದು ಸ್ಪಷ್ಟವಾಗುತ್ತದೆ.


Sandalwood Drug Scandal: ರಾಗಿಣಿ, ಸಂಜನಾ ಡ್ರಗ್ ಸೇವಿಸಿದ್ದು ದೃಢ; ಕಾದಿದೆ ಭಾರೀ ಶಾಕ್!


ಈ ವೈರಲ್ ಫೋಟೋದಲ್ಲಿ (Viral photo) ಐಶ್ವರ್ಯ ಮಾತ್ರವಲ್ಲದೆ ಚಿತ್ರದ ಸಂಪೂರ್ಣ ತಂಡ ಕೂಡಾ ಕಾಣಿಸುತ್ತದೆ.  ಗಮನಾರ್ಹವಾಗಿ, ಈ ಚಿತ್ರದಲ್ಲಿ ಐಶ್ವರ್ಯ ನಂದಿನಿ ಮತ್ತು ಆಕೆಯ ತಾಯಿ ಮಂದಾಕಿನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಂದರೆ, ಆಕೆ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಹಳ ಸಮಯದ ನಂತರ ಜೊತೆಯಾಗಿ ಕೆಲಸ ಮಾಡುತ್ತಿರುವ ಜೋಡಿ : 
'ಪೊನ್ನಿಯಿನ್ ಸೆಲ್ವನ್' ಚಿತ್ರವು ಬಹಳ ಸಮಯದಿಂದ ಚರ್ಚೆಯಲ್ಲಿದೆ.  'ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ನಿರ್ದೇಶನವಿದೆ. ಇದಕ್ಕೂ ಮುಂಚೆಯೇ, ಮಣಿರತ್ನಂ ಮತ್ತು ಐಶ್ವರ್ಯ ರೈ ಬಚ್ಚನ್ ಅನೇಕ ಹಿಟ್‌ಗಳನ್ನು ನೀಡಿದ್ದಾರೆ.


ಇದನ್ನೂ ಓದಿ :  Abracadabra: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಆಬ್ರಕಡಾಬ್ರ’ದಲ್ಲಿ ಹಿರಿಯ ನಟ ಅನಂತ್ ನಾಗ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ