Abracadabra: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಆಬ್ರಕಡಾಬ್ರ’ದಲ್ಲಿ ಹಿರಿಯ ನಟ ಅನಂತ್ ನಾಗ್..!

ಮ್ಯಾಜಿಕ್ ಆಧಾರಿತ ವಿಶಿಷ್ಟ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಕಾಣಿಸಿಕೊಳ್ಳಲಿದ್ದಾರೆ.

Written by - Puttaraj K Alur | Last Updated : Aug 24, 2021, 10:34 AM IST
  • ಮ್ಯಾಜಿಕ್ ಆಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಿರಿಯ ನಟ ಅನಂತ್ ನಾಗ್
  • ಶಿಶಿರ್ ರಾಜಮೋಹನ್ ನಿರ್ದೇಶನದ ‘ಆಬ್ರಕಡಾಬ್ರಾ’ದಲ್ಲಿ ಮ್ಯಾಜಿಕ್ ಮಾಡಲಿರುವ ಅನಂತ್ ನಾಗ್
  • ರಕ್ಷಿತ್ ಶೆಟ್ಟಿಯವರ ‘ಪರಂವಾ ಸ್ಟುಡಿಯೋಸ್​’ ಜೊತೆ ಚಿತ್ರಕ್ಕೆ ಬಂಡವಾಳ ಹೂಡಲಿರುವ ಜಿ.ಎಸ್.ಗುಪ್ತಾ
Abracadabra: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಆಬ್ರಕಡಾಬ್ರ’ದಲ್ಲಿ ಹಿರಿಯ ನಟ ಅನಂತ್ ನಾಗ್..! title=
‘ಆಬ್ರಕಡಾಬ್ರ’ದಲ್ಲಿ ಹಿರಿಯ ನಟ ಅನಂತ್ ನಾಗ್ (Photo Courtesy: Twitter/@ParamvahStudios)

ಬೆಂಗಳೂರು: ಹಿರಿಯ ನಟ ಅನಂತ್ ನಾಗ್(Anant Nag) ಅವರು ತಮ್ಮ ಸಿನಿಮಾ ಆಯ್ಕೆಯಲ್ಲಿ ಪ್ರೇಕ್ಷಕರಿಗೆ ಎಂದಿಗೂ ನಿರಾಸೆ ಮಾಡುವುದಿಲ್ಲ. ಮ್ಯಾಜಿಕ್ ಆಧಾರಿತ ವಿಶಿಷ್ಟ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ‘ಆಬ್ರಕಡಾಬ್ರಾ’(Abracadabra) ಎಂದು ಹೆಸರಿಸಲಾಗಿರುವ ಈ ಚಿತ್ರವನ್ನು ಹೊಸಬರಾದ ಶಿಶಿರ್ ರಾಜಮೋಹನ್ ನಿರ್ದೇಶಿಸಲಿದ್ದಾರೆ. ನಟ-ಚಲನಚಿತ್ರ ನಿರ್ಮಾಪಕ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಲಿದ್ದಾರೆ.

ಈಗಾಗಲೇ ನಟ ರಕ್ಷಿತ್ ಶೆಟ್ಟಿ(Rakshit Shetty) ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿಯೂ ಸಕ್ರಿಯರಾಗಿದ್ದು, ತಮ್ಮ ‘ಪರಂವಾ ಸ್ಟುಡಿಯೋಸ್​’ ಮೂಲಕ ಈಗಾಗಲೇ ಮೂರ್ನಾಲ್ಕು ಸಿನಿಮಾಗಳನ್ನು ನಿರ್ವಿುಸುತ್ತಿದ್ದಾರೆ. ಈ ಸಾಲಿಗೆ ಹೊಸದಾಗಿ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಪರಂವಾ ಸ್ಟುಡಿಯೋಸ್​ನ ಟ್ವಿಟರ್ ಖಾತೆಯಲ್ಲಿ ‘ಆಬ್ರಕಡಾಬ್ರ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.  

ರಕ್ಷಿತ್ ಅವರ ಬಹುಕಾಲದ ಸ್ನೇಹಿತರಾದ ಶಿಶಿರ್ ಅವರು ದಶಕದ ಹಿಂದೆ ‘ಐ ಶಾಟ್ ಮೈಸೆಲ್ಫ್’ ಎಂಬ ಕಿರುಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದರು. ಇದೀಗ ಅವರ ಹೆಗಲಿಗೆ ಬಹುದೊಡ್ಡ ಜವಾಬ್ದಾರಿ ಏರಿದೆ. ‘ನನ್ನ ಮೊದಲ ಸಿನಿಮಾದಲ್ಲಿಯೇ ಹಿರಿಯ ಲೆಜೆಂಡರಿ ನಟ ಅನಂತ್ ನಾಗ್ ಅವರಿಗೆ ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ನನಗೆ ದೊರೆತ ಗೌರವ. ಚಿತ್ರಕಥೆ ಬಗ್ಗೆ ನಾವು ಅವರೊಂದಿಗೆ ಚರ್ಚಿಸಿದ್ದೇವು, ಅವರು ಇಷ್ಟಪಟ್ಟು ಒಪ್ಪಿಕೊಂಡರು. ಅನಂತ್ ಸರ್ ತಾವು ನಿರ್ವಹಿಸುವ ಯಾವುದೇ ಪಾತ್ರಕ್ಕೂ ಒಂದು ಹೊಸತನ್ನು ನೀಡುತ್ತಾರೆ. ಅವರೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ’ ಎಂದು ಶಿಶಿರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: KBCಯಲ್ಲಿ 5 ಕೋಟಿ ರೂ. ಗೆದ್ದವನ ಕೈಯಲ್ಲಿಗ ಬಿಡಿಗಾಸು ಇಲ್ಲ! ಸುಶೀಲ್ ಕುಮಾರ್ ದುರಂತ ಕಥೆ

ಇದು ಒಂದು ಮ್ಯಾಜಿಕ್ ಆಧಾರಿತ ಚಿತ್ರವಾಗಿದೆ ಅಂತಾ ನಿರ್ದೇಶಕರು ತಿಳಿಸಿದ್ದಾರೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿದೆ. ಅನಂತ್ ನಾಗ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರೆ, ‘ಅರಿಷಡ್ವರ್ಗ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಸಿರಿ ರವಿಕುಮಾರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಇದಲ್ಲದೆ ಬಿ.ವಿ.ಶೃಂಗ, ಅವಿನಾಶ್ ರೈ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತಾ ಶಿಶಿರ್ ಮಾಹಿತಿ ಹಂಚಿಕೊಂಡಿದ್ದಾರೆ.

ಪರಂವಾ ಸ್ಟುಡಿಯೋಸ್(Paramvah Studios) ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಿ.ಎಸ್.ಗುಪ್ತಾ ಕೂಡ ಪಾಲುದಾರರಾಗಿದ್ದಾರೆ. ಹಿರಿಯ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರೀಕರಣ ಶುರುವಾಗಲಿದೆ ಅಂತಾ ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ: KGF Chapter 2 : ‘ಕೆಜಿಎಫ್ 2’ ಬಿಡುಗಡೆ ದಿನಾಂಕ ರಿವೀಲ್ ಮಾಡಿದ ರಾಕಿಬಾಯ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News