ಹೈದರಾಬಾದ್ : ದಕ್ಷಿಣದ ಸೂಪರ್‌ಸ್ಟಾರ್ ಮತ್ತು ಪುಷ್ಪ ಚಲನಚಿತ್ರ ನಟ ಅಲ್ಲು ಅರ್ಜುನ್  ತಮ್ಮ ಹುಟ್ಟುಹಬ್ಬದಂದು ಪುಷ್ಪ: ದಿ ರೂಲ್‌' ನ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Online Medicine: ಆನ್‌ಲೈನ್‌ನಲ್ಲಿ ಔಷಧಿ ಖರೀದಿಸುವವರೇ ಎಚ್ಚರ..!


ಚಿತ್ರದಲ್ಲಿ ಸೀರೆಯನ್ನು ಉಟ್ಟು ಡಾರ್ಕ್ ಮೇಕಪ್ ನಲ್ಲಿ ಇರುವುದರ ಜೊತೆಗೆ  ಮುಖವನ್ನು ಕೆಂಪು ಮತ್ತು ನೀಲಿ ಬಣ್ಣಗಳಿಂದ ಅಲಂಕರಿಸಲಾಗಿದೆ.ಅಲ್ಲದೆ ಮೂಗು ಮತ್ತು ಕಿವಿಗಳಲ್ಲಿ ಆಭರಣಗಳನ್ನು ಧರಿಸಿ ಒಟ್ಟಿನಲ್ಲಿ ತಮ್ಮ ಪಾತ್ರದ ಬಗೆಗೆ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದ್ದಾರೆ. ಅವರು ತಮ್ಮ ಪೋಸ್ಟರ್ ನ್ನು ಶೇರ್ ಮಾಡಿದ ತಕ್ಷಣ ಅವರಿಗೆ ಹಲವು ಖ್ಯಾತನಾಮ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.ದಿಶಾ ಪಟಾನಿ ಮತ್ತು ಹುಮಾ ಖುರೇಷಿ ಫೈರ್ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ.ಇದಲ್ಲದೇ ಡೇವಿಡ್ ವಾರ್ನರ್ ‘ಐ ಕಾಂಟ್ ವೇಯ್ಟ್’ ಎಂದು ಬರೆದುಕೊಂಡಿದ್ದಾರೆ."ಈ ಬಾರಿ ಪರಮೇಶ್ವರ ಅವರನ್ನು ಸೋಲಿಸುತ್ತೇವೆ"


ಈ ಹಿಂದೆ, ಚಿತ್ರದ ನಿರ್ಮಾಪಕರು ಪುಷ್ಪ 2 ರ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದರು.ಈ ಕ್ಲಿಪ್ ಅನ್ನು 'ಪುಷ್ಪ ಕಹಾನ್ ಹೈ' ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ತಕ್ಷಣ ವೈರಲ್ ಆಗಿತ್ತು. ಇದನ್ನು ಇಲ್ಲಿಯವರೆಗೆ 18 ಮಿಲಿಯನ್ ಬಳಕೆದಾರರು ವೀಕ್ಷಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.