Bigg Boss Kannada Season 9 : ಬಹು ನಿರೀಕ್ಷಿತ ಕನ್ನಡ ಟಿವಿ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ಬಿಗ್ ಬಾಸ್ ಕನ್ನಡ ನಿರ್ಮಾಪಕರು ಹಿಂದಿನ ಸೀಸನ್‌ನಿಂದ ಐದು ಹಳೆಯ ಸ್ಪರ್ಧಿಗಳನ್ನು ಈ ಸೀಸನ್‌ಗೆ ಕರೆತರುತ್ತಿದ್ದಾರೆ ಮತ್ತು ಬಿಗ್ ಬಾಸ್ OTT ಕನ್ನಡದ ಪ್ರಮುಖ ನಾಲ್ಕು ಸ್ಪರ್ಧಿಗಳು ಸೀಸನ್ 9 ರಲ್ಲಿ ಸ್ಪರ್ಧಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Bigg Boss Kannada Season 9 : ಬಿಗ್ ಬಾಸ್ ಸೀಸನ್‌ 9 ನಲ್ಲಿ ಯಾರೆಲ್ಲ ಇರಲಿದ್ದಾರೆ?


ಮೂಲಗಳ ಪ್ರಕಾರ, ಈ ಬಾರಿ, BBK ತಯಾರಕರು ವಿಶಿಷ್ಟವಾದ ಥೀಮ್ ಅನ್ನು ಯೋಜಿಸುತ್ತಿದ್ದಾರೆ ಮತ್ತು ಸ್ಪರ್ಧಿಗಳಿಗೆ ಕೆಲವು ಆಸಕ್ತಿದಾಯಕ ನಿಯಮಗಳನ್ನು ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಹಿಂದಿನ ಸೀಸನ್‌ಗಳಿಂದ ವಿವಾದಾತ್ಮಕ ಸ್ಪರ್ಧಿಗಳನ್ನು ಮರಳಿ ಈ ಸೀಸನ್‌ಗೆ ಕರೆತರುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ವೀಕ್ಷಕರನ್ನು ಶೋಗೆ ಸೆಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. 


ಕಲರ್ಸ್ ಕನ್ನಡ ಟ್ವಿಟರ್ ಪುಟದಲ್ಲಿ, ಪ್ರೇಕ್ಷಕರ ಒಂದು ವಿಭಾಗವು ಸ್ಪರ್ಧಿಗಳ ಆಯ್ಕೆಯ ಕುರಿತು ತಯಾರಕರಿಗೆ ಸಲಹೆಗಳನ್ನು ನೀಡುತ್ತಿದೆ ಮತ್ತು ಅವರಲ್ಲಿ ಹೆಚ್ಚಿನವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಅತ್ಯುತ್ತಮ ಜೋಡಿ ಅರವಿಂದ್ ಕೆಪಿ ಹಾಗೂ ದಿವ್ಯಾ ಯು ಅವರನ್ನು ಮತ್ತೆ ದೊಡ್ಮನೆಗೆ ಕರೆತನ್ನಿ ಎನ್ನುತ್ತಿದ್ದಾರೆ. 


ಬಿಗ್‌ಬಾಸ್‌ ಮನೆಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ನೀಡಲಾಗುವ ಶಿಕ್ಷೆಯು ಹಿಂದಿನ ಸೀಸನ್‌ಗಳಿಗಿಂತ ಈ ಬಾರಿ ಭಿನ್ನವಾಗಿರಲಿದೆಯಂತೆ. ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಈ ಸೀಸನ್ ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್‌ಗಳು ಆಸಕ್ತಿದಾಯಕ ಮತ್ತು ಕಠಿಣವಾಗಿರುತ್ತದೆ ಎನ್ನಲಾಗ್ತಿದೆ. ಬಿಬಿಕೆ 9 ಹೋಸ್ಟ್ ಕಿಚ್ಚ ಸುದೀಪ್ ಬಿಡುಗಡೆಯ ದಿನದಂದು ಅದೇ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ : WATCH : ತೈವಾನ್‌ ಭೀಕರ ಭೂಕಂಪದ ವಿಡಿಯೋ ನೋಡಿ.. ಆಟಿಕೆಯಂತೆ ಅಲುಗಾಡಿದ ರೈಲು


ಈ ಎಲ್ಲದರ ಮಧ್ಯೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಗಳ ಪಟ್ಟಿಯಲ್ಲಿ ಇತರ ಸೀಸನ್‌ಗಳಿಂದ ಮತ್ತು ಬಿಬಿಕೆ ಒಟಿಟಿಯಿಂದ ಬರುವವರನ್ನು ಹೊರತುಪಡಿಸಿ ಯಾವುದೇ ಅಪ್‌ಡೇಟ್ ಇಲ್ಲ. OTT ಯಿಂದ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್‌ ಗುರೂಜಿ ಪ್ರವೇಶವನ್ನು ಪಡೆದಿದ್ದಾರೆ. ಮತ್ತೊಂದೆಡೆ, ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಸಿದ್ದ ವೈಷ್ಣವಿ ಗೌಡ, ಅನುಪಮಾ ಗೌಡ, ಪ್ರಶಾಂತ್ ಸಂಬರಗಿ ಮತ್ತು ದೀಪಿಕಾ ದಾಸ್‌ ಅವರಿಗೆ ಹೊಸ ಸೀಸನ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ವದಂತಿಗಳಿವೆ.


ಬಿಗ್ ಬಾಸ್ ಕನ್ನಡ ಸೀಸನ್ 9 ವೀಕ್ಷಕರಿಗೆ ಅಚ್ಚರಿಯ ಅಂಶವನ್ನು ಇರಿಸಲು BBK ನಿರ್ಮಾಪಕರು BBK9 ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿಡುತ್ತಿದ್ದಾರೆ. ಒಟ್ಟಾರೆ ಈ ಬಾರಿಯ ಬಿಗ್‌ ಬಾಸ್‌ ಸೀಸನ್‌ 9 ರಲ್ಲಿ ಪ್ರೇಕ್ಷಕರಿಗೆ ಸಖತ್‌ ಮನರಂಜನೆ ಸಿಗುವುದಂತೂ ಪಕ್ಕಾ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.