WATCH : ತೈವಾನ್‌ ಭೀಕರ ಭೂಕಂಪದ ವಿಡಿಯೋ ನೋಡಿ.. ಆಟಿಕೆಯಂತೆ ಅಲುಗಾಡಿದ ರೈಲು

Taiwan Earthquake Video: ತೈವಾನ್‌ನ ಪೂರ್ವ ಯುಜಿಂಗ್‌ನಲ್ಲಿ ಭಾನುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿಯಲ್ಲಿ ತಿಳಿಸಿದೆ.

Written by - Chetana Devarmani | Last Updated : Sep 19, 2022, 10:48 AM IST
  • ತೈವಾನ್‌ನ ಪೂರ್ವ ಯುಜಿಂಗ್‌ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ
  • ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ
  • ಆಟಿಕೆಯಂತೆ ಅಲುಗಾಡಿದ ರೈಲಿನ ವಿಡಿಯೋ ವೈರಲ್‌
WATCH : ತೈವಾನ್‌ ಭೀಕರ ಭೂಕಂಪದ ವಿಡಿಯೋ ನೋಡಿ.. ಆಟಿಕೆಯಂತೆ ಅಲುಗಾಡಿದ ರೈಲು  title=
ತೈವಾನ್‌

Taiwan Earthquake Video: ತೈವಾನ್‌ನ ಪೂರ್ವ ಯುಜಿಂಗ್‌ನಲ್ಲಿ ಭಾನುವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿಯಲ್ಲಿ ತಿಳಿಸಿದೆ. 10 ಕಿಲೋಮೀಟರ್ ಆಳದಲ್ಲಿ ಕರಾವಳಿ ನಗರವಾದ ಟೈಟುಂಗ್‌ನಿಂದ ಉತ್ತರಕ್ಕೆ 50 ಕಿಲೋಮೀಟರ್‌ಗಳು (30 ಮೈಲಿಗಳು) ರಾತ್ರಿ 9:30 ರ ನಂತರ ಈ ಕಂಪನ ನಡೆದಿದೆ. 6.5 ತೀವ್ರತೆಯ ಭೂಕಂಪ ಸಂಭವಿಸಿದ ಒಂದು ದಿನದ ನಂತರ ಈ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು USGS ಹೇಳಿದೆ.  

ಇದನ್ನೂ ಓದಿ : Viral Video : ಪುಟ್ಟ ಮಗುವಿನಂತೆ ಜಾರುಬಂಡಿ ಆಡುವ ಕರಡಿ.. ಮನಸ್ಸನ್ನು ರಿಲ್ಯಾಕ್ಸ್‌ ಮಾಡುವ ವಿಡಿಯೋ

ಭೂಕಂಪನದ ಪರಿಣಾಮ ನಿಲ್ದಾಣದಲ್ಲಿ ನಿಂತಿದ್ದ ರೈಲು ಅಲುಗಾಡಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ ಅತಿ ಹೆಚ್ಚು ವೈರಲ್‌ ಆಗಿದೆ. ತೈವಾನ್ ಮಾಧ್ಯಮ ವರದಿಯ ಪ್ರಕಾರ, ಭೂಕಂಪದ ಕೇಂದ್ರದ ಬಳಿ ಎರಡು ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದಿದೆ. ರಾಜಧಾನಿ ತೈಪೆಯ ದ್ವೀಪದ ಉತ್ತರ ತುದಿಯಲ್ಲಿ ಕಂಪನದ ಅನುಭವವಾಗಿದೆ.

 

 

ಈ ವಿಡಿಯೋದಲ್ಲಿ ರೈಲು ಅಲುಗಾಡುವ ದೃಶ್ಯ ಭೂಕಂಪನದ ತೀವ್ರತೆಗೆ ಹಿಡಿದ ಕೈಗನ್ನಡಿಯಂತಾಗಿದೆ. ತೈವಾನ್‌ನ ಆಗ್ನೇಯ ಕರಾವಳಿಯಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ, ಸಣ್ಣ ಪಟ್ಟಣದಲ್ಲಿ ಕನಿಷ್ಟ ಒಂದು ಕಟ್ಟಡ ಕುಸಿದಿದೆ ಮತ್ತು ಸುನಾಮಿ ಎಚ್ಚರಿಕೆ ನೀಡಲು ಜಪಾನ್‌ಗೆ ಪ್ರೇರೇಪಿಸಿದೆ. 

ಇದನ್ನೂ ಓದಿ : ಮಾತನಾಡದೇ ಕೋಟಿ ಒಡೆಯನಾದ ಖಾಬಿ : ಈತನ ಬ್ಯಾಂಕ್‌ ಬ್ಯಾಲೆನ್ಸ್‌ ಕೇಳಿದ್ರೆ ದಂಗಾಗ್ತೀರಾ..!

ಟ್ವಿಟರ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋಗಳಲ್ಲಿ ಭಯಭೀತರಾದ ನಿವಾಸಿಗಳು ಕಟ್ಟಡದಿಂದ ಆಚೆ ಓಡಿಬರುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ತೈವಾನ್‌ ರಾಜಧಾನಿ ತೈಪೆಯಲ್ಲೂ ಕಟ್ಟಡಗಳು ಅಲುಗಾಡುವ ಅನುಭವವಾಗಿದೆ ಎಂದು ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 1999 ರಲ್ಲಿ ತೈವಾನ್‌ನ ಅತ್ಯಂತ ಭೀಕರ ಭೂಕಂಪನಕ್ಕೆ ಸಾಕ್ಷಿಯಾಗಿತ್ತು. ಇದು 2,400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News