‘ರೈಡರ್’ಗೆ ಡಬ್ಬಿಂಗ್ ಆರಂಭಿಸಿದ ನಿಖಿಲ್ ಕುಮಾರ್ ಸ್ವಾಮಿ..!
ತೆಲುಗು ಚಿತ್ರ ನಿರ್ಮಾಪಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕಾಶ್ಮೀರ ಪರದೇಶಿ ನಾಯಕಿಯಾಗಿ ನಟಿಸಿದ್ದಾರೆ.
ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರ ಮುಂಬರುವ ಚಿತ್ರ ‘ರೈಡರ್’ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಹೆಚ್ಚಿನ ಮಾಹಿತಿ ವಿಚಾರವಾಗಿ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿದೆ. ಬಹುತೇಕ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಅಂತಿಮ ಹಂತದ ಕೆಲಸಗಳಲ್ಲಿ ನಿರ್ಮಾಪಕರು ಬ್ಯುಸಿಯಾಗಿದ್ದಾರೆ. ನಿಖಿಲ್ ಈ ಚಿತ್ರಕ್ಕೆ ಡಬ್ಬಿಂಗ್ ಆರಂಭಿಸಿದ್ದಾರೆ ಅಂತಾ ಮಾಹಿತಿ ನೀಡಿದ್ದಾರೆ. ತೆಲುಗು ಚಿತ್ರ ನಿರ್ಮಾಪಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕಾಶ್ಮೀರ ಪರದೇಶಿ ನಾಯಕಿಯಾಗಿ ನಟಿಸಿದ್ದಾರೆ.
ಕಾಶ್ಮೀರ ಪರದೇಶಿ(Kashmira Pardeshi) ಹಿಂದಿ, ತಮಿಳು, ತೆಲುಗು ಮತ್ತು ಮರಾಠಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ನಿಖಿಲ್ ಗೆ ಜೊತೆಯಾಗಿ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಡಬ್ಬಿಂಗ್ ಸದ್ಯ ಬೆಂಗಳೂರಿನ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ನಿಖಿಲ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಆರಂಭಿಸಿದ್ದಾರೆ. ನಿಖಿಲ್ ಅವರ ಹಿಂದಿನ ಚಿತ್ರಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಬಿಡುಗಡೆಯಾಗಿರುವುದರಿಂದ ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ‘ಸೀತಾರಾಮ ಕಲ್ಯಾಣ’ ಮತ್ತು ‘ಜಾಗ್ವಾರ್’ ಬಳಿಕ ಇದು ಅವರ 3ನೇ ಚಿತ್ರವಾಗಿದೆ.
ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕ ಉಪೇಂದ್ರ..!
ಈ ಚಿತ್ರದಲ್ಲಿ ನಿಖಿಲ್ ಬಾಸ್ಕೆಟ್ ಬಾಲ್ ಆಟಗಾರನ ಪಾತ್ರದಲ್ಲಿ ನಟಿಸಿದ್ದಾರೆ. ‘ನಾನು ಚಿತ್ರದ ಕಥೆಯೊಂದಿಗೆ ಆಳವಾಗಿ ಬೆರೆತುಕೊಂಡಿದ್ದೇನೆ. ಏಕೆಂದರೆ ನಾನೂ ಕೂಡ ಸ್ಕ್ರಿಪ್ಟಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದೇನೆ. ‘ರೈಡರ್’(Rider) ಒಂದು ಕಮರ್ಷಿಯಲ್ ಚಿತ್ರವಾಗಿದ್ದು, ನಾನು ಮಾಸ್ ಎಂಟರ್‌ಟೈನರ್ ಆಗಿ ಕಾಣಿಸಿಕೊಳ್ಳಲಿದ್ದೇನೆ’ ಅಂತಾ ನಿಖಿಲ್ ಹೇಳಿದ್ದಾರೆ. ನಟ ಮತ್ತು ರಾಜಕಾರಣಿಯೂ ಆಗಿರುವ ನಿಖಿಲ್ ಈ ವರ್ಷಾಂತ್ಯದಲ್ಲಿ ಮತ್ತೊಂದು ಕಮರ್ಷಿಯಲ್ ಎಂಟರ್ಟೈನರ್ ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದು, ನಿರ್ಮಾಪಕ ವಿಜಯ್ ಕುಮಾರ್ ಜೊತೆಗೆ ಕೈಜೋಡಿಸಲಿದ್ದಾರೆ.
ಇದನ್ನೂ ಓದಿ: Video : ಏರ್ ಪೋರ್ಟ್ ನಲ್ಲಿ ಸಲ್ಮಾನ್ ಖಾನ್ ನನ್ನು ತಡೆದು ನಿಲ್ಲಿಸಿದ CRPF ಯೋಧ; ಇಷ್ಟಕ್ಕೂ ನಟ ಮಾಡಿದ್ದೇನು?
ಸಿನಿಮಾಗಳ ಹೊರತಾಗಿಯೂ ರಾಜಕೀಯವು ನಿಖಿಲ್(Nikhil Kumaraswamy)ಜೀವನದ ಪ್ರಮುಖ ಭಾಗವಾಗಿದೆ. ‘ಜನರು ನನ್ನನ್ನು ಎರಡೂ ಕ್ಷೇತ್ರಗಳಲ್ಲಿ ಒಪ್ಪಿಕೊಂಡಿರುವುದು ನನ್ನ ಅದೃಷ್ಟ. ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿದ್ದರೂ ಕೂಡ ಜನರು ನನ್ನನ್ನು ಹೆಚ್ಚು ಪ್ರೀತಿಸುತ್ತಾರೆ. ಹೀಗಾಗಿ ನಾನು ಎರಡೂ ಕ್ಷೇತ್ರಗಳಲ್ಲಿ ಸಮಾನವಾಗಿ ಸಮರ್ಪಿಸಿಕೊಳ್ಳುವುದು ನ್ಯಾಯ’ ಅಂತಾ ನಿಖಿಲ್ ಹಂಚಿಕೊಂಡಿದ್ದಾರೆ.
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
Android Link - https://bit.ly/3hDyh4G
Apple Link - https://apple.co/3hEw2hy
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...