ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕ ಉಪೇಂದ್ರ..!

ಈಗಾಗಲೇ ‘ಡಿಟೆಕ್ವೀವ್ ತೀಕ್ಷ್ಣ’ ಪಾತ್ರಕ್ಕಾಗಿ ಪ್ರಿಯಾಂಕ ತಯಾರಿ ನಡೆಸುತ್ತಿದ್ದು, ಹೊಸತನ್ನು ಪ್ರಯತ್ನಿಸಲು ಸಜ್ಜಾಗಿದ್ದಾರೆ.

Written by - Puttaraj K Alur | Last Updated : Aug 21, 2021, 10:52 AM IST
  • ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ‘ಡಿಟೆಕ್ವೀವ್ ತೀಕ್ಷ್ಣ’ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
  • ಬುದ್ಧಿವಂತ ಪತ್ತೇದಾರಿ ಆಗಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾಗೆ ಇತರರ ಮನಸ್ಸು ಮತ್ತು ಆಲೋಚನೆ ತಿಳಿಯುವ ಸಾಮರ್ಥ್ಯವಿರುತ್ತದೆ
  • ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಉಪ್ಪಿನಂಗಡಿಯಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜಿಸಿದೆ
ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಂಕ ಉಪೇಂದ್ರ..! title=
ಬುದ್ಧಿವಂತ ಪತ್ತೇದಾರಿ ಆಗಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ (Photo Courtesy: @DNA)

ಬೆಂಗಳೂರು: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ(Priyanka Upendra) ತಮ್ಮ ಮುಂದಿನ ಸಿನಿಮಾದಲ್ಲಿ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ತಮ್ಮ ಸಿನಿ ವೃತ್ತಿಜೀವನದಲ್ಲಿ ಕಾನ್‌ಸ್ಟೇಬಲ್, ಪೊಲೀಸ್ ಅಧಿಕಾರಿ, ಒಳ್ಳೆಯ ತಾಯಿ ಮತ್ತು ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ತಮ್ಮ ಹೊಸ ಚಿತ್ರದಲ್ಲಿ ಅವರು ‘ಡಿಟೆಕ್ವೀವ್ ತೀಕ್ಷ್ಣ’(Detective Teekshna) ಆಗಿ ತೆರೆಮೇಲೆ ಮಿಂಚಲಿದ್ದಾರೆ.

ಈಗಾಗಲೇ ‘ಡಿಟೆಕ್ವೀವ್ ತೀಕ್ಷ್ಣ’ ಪಾತ್ರಕ್ಕಾಗಿ ಪ್ರಿಯಾಂಕ ತಯಾರಿ ನಡೆಸುತ್ತಿದ್ದು, ಹೊಸತನ್ನು ಪ್ರಯತ್ನಿಸಲು ಸಜ್ಜಾಗಿದ್ದಾರೆ. ಮಂಡ್ಯ ಮೂಲದ ಚಿತ್ರ ನಿರ್ಮಾಪಕ ತ್ರಿವಿಕ್ರಮ ರಘು(Trivikrama Raghu) ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕಳೆದ 13 ವರ್ಷಗಳಿಂದ ಅವರು ನಿರ್ದೇಶನ ವಿಭಾಗದಲ್ಲಿ ವಿವಿಧ ಸಿನಿಮಾ ತಂಡಗಳಲ್ಲಿ ಕೆಲಸ ಮಾಡಿದ್ದಾರೆ. Shoo, ಯು ಟರ್ನ್ ಮತ್ತು ಯಾರು? ಮುಂತಾದ ಚಲನಚಿತ್ರಗಳು ‘ಡಿಟೆಕ್ವೀವ್ ತೀಕ್ಷ್ಣ’ ಸಿನಿಮಾಗೆ ಕಥೆ ಬರೆಯಲು ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Video : ಏರ್ ಪೋರ್ಟ್ ನಲ್ಲಿ ಸಲ್ಮಾನ್ ಖಾನ್ ನನ್ನು ತಡೆದು ನಿಲ್ಲಿಸಿದ CRPF ಯೋಧ; ಇಷ್ಟಕ್ಕೂ ನಟ ಮಾಡಿದ್ದೇನು?

‘ಈ ಚಿತ್ರದಲ್ಲಿ ಬಹಳ ಬುದ್ಧಿವಂತ ಪತ್ತೇದಾರಿ ಆಗಿ ಪ್ರಿಯಾಂಕಾ ಪಾತ್ರವು ಇರಲಿದೆ. ಇತರರ ಮನಸ್ಸು ಮತ್ತು ಆಲೋಚನೆಗಳನ್ನು ಓದುವ ಸಾಮರ್ಥ್ಯವನ್ನು ಈ ಪಾತ್ರ ಹೊಂದಿರಲಿದೆ. ಅಪರಾಧಿಗಳ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ ವಿಶೇಷ ಸಾಮರ್ಥ್ಯವೂ ತೀಕ್ಷ್ಣಳಿಗೆ ಇರುತ್ತದೆ. ಈ ಪಾತ್ರವು ತುಂಬಾ ವಿಭಿನ್ನವಾಗಿರಲಿದೆ’ ಅಂತಾ ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ನೀರಜ್ ಚೋಪ್ರಾ 'ನ್ಯಾಷನಲ್ ಕ್ರಷ್' ಎಂದ ಬಾಲಿವುಡ್ ನಟಿ ಕಿರಾ ಅದ್ವಾನಿ

ಈ ಸಿನಿಮಾದ ಪಾತ್ರವರ್ಗಕ್ಕೆ ಅನುಭವಿ ಕಲಾವಿದರನ್ನು ಒಟ್ಟುಗೂಡಿಸಲು ತಂಡವು ಕೆಲಸ ಮಾಡುತ್ತಿದೆ. ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಉಪ್ಪಿನಂಗಡಿಯಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜಿಸಿದೆ. ‘ಡಿಟೆಕ್ವೀವ್ ತೀಕ್ಷ್ಣ’ ಪಾತ್ರದ ಫಸ್ಟ್ ಲುಕ್ ಪೋಸ್ಟರ್(First Look Poster) ಅನ್ನು ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಚಿತ್ರದ ಶೀರ್ಷಿಕೆಯನ್ನು ತಂಡವು ರಹಸ್ಯವಾಗಿಟ್ಟಿದ್ದು, ಮುಹೂರ್ತದ ದಿನದಂದು ಬಹಿರಂಗಪಡಿಸಲು ಸಜ್ಜಾಗಿದೆ. ನಟಿ ಪ್ರಿಯಾಂಕಾ ಅವರ ಉಪಸ್ಥಿತಿಯಲ್ಲಿ ತಂಡವು ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಯ ಬಗ್ಗೆ ಇಡೀ ಚಿತ್ರತಂಡ ತುಂಬಾ ಉತ್ಸುಕವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News