Nikhil kumaraswamy : ಸ್ಯಾಂಡಲ್‌ವುಡ್‌ ಯುವರಾಜ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಫ್ಯಾನ್ಸ್‌ಗೆ ಬರ್ತ್‌ ಡೇ ಗಿಫ್ಟ್‌ ನೀಡಿರುವ ನಿಖಿಲ್‌ ತಮ್ಮ ಮುಂಬರುವ ಸಿನಿಮಾ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ನೋಡಿದ ʼಜಾಗ್ವಾರ್‌ʼ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. ಸಾಕಷ್ಟು ಗ್ಯಾಪ್‌ನ ನಂತರ ತೆರೆ ಮೇಲೆ ಮಿಂಚಲು ʼರೈಡರ್‌ʼ ರೆಡಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಲಾಂಗ್‌ ಗ್ಯಾಪ್‌ನ ನಂತರ ನಿಖಿಲ್‌ ಕುಮಾರಸ್ವಾಮಿ ತೆರೆ ಮೇಲೆ ಅಬ್ಬರಿಸಲು ಸಿದ್ಧರಾಗಿದ್ದಾರೆ. ಸಿನಿಮಾ, ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ಯುವರಾಜ ಇದೀಗ ತಮ್ಮ ಮುಂಬರುವ ಸಿನಿಮಾದ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಪ್ಯಾನ್ಸ್‌ಗೆ ಸರ್ಪ್ರೈಸ್‌ ನೀಡಿದ್ದಾರೆ. ʼಟಗರುʼ ಮತ್ತು ʼಸಲಗʼದಂತಹ ಹಿಟ್‌ ಸಿನಿಮಾ ನೀಡಿರುವ ಕೆ. ಪಿ. ಶ್ರೀಕಾಂತ್ ಮತ್ತು ಲಹರಿ ಸಂಸ್ಥೆಯ ಜಿ. ಮನೋಹರನ್ ಅವರು ನಿಖಿಲ್ ನಟನೆಯ ಈ ಹೊಸ ಸಿನಿಮಾವವನ್ನು ನಿರ್ಮಾಣ ಮಾಡಲಿದ್ದಾರೆ.


Kangana Ranaut: "ಎಮರ್ಜೆನ್ಸಿ ಸಿನಿಮಾಗಾಗಿ ನನ್ನೆಲ್ಲ ಆಸ್ತಿ ಅಡವಿಟ್ಟಿರುವೆ" - ಕಂಗನಾ ರಣಾವತ್‌


ಇನ್ನು ಹೆಸರಿಡದ ಸಿನಿಮಾಗೆ ಹೊಸ ಪ್ರತಿಭೆ ಮನೋಹರ ಎಂಬುವವರು ಆಕ್ಷನ್‌ ಕಟ್‌ ಹೇಳಲಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ ನೋಡಿದ್ರೆ, ಇದೊಂದು ಪಕ್ಕಾ ಸ್ಪೋರ್ಟ್ಸ್ ಕಥಾಹಂದರ ಹೊಂದಿರುವ ಸಿನಿಮಾ ಅಂತ ಅನಿಸುತ್ತದೆ. ಜಸ್ಟ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ? ಇದರ ನಾಯಕಿ ಯಾರು? ಅಂತ ಅಪ್‌ಡೆಟ್‌ ನೀಡಿಲ್ಲ. 


ʼಜಾಗ್ವಾರ್ʼ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಿಖಿಲ್‌, ʼಸೀತಾರಾಮ ಕಲ್ಯಾಣʼ 'ಕುರುಕ್ಷೇತ್ರ' ʼರೈಡರ್‌ʼ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಲಹರಿ ಮತ್ತು ಕೆ ಪಿ ಶ್ರೀಕಾಂತ್ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾಗಿನ್ನೂ ಟೈಟಲ್ ಇಟ್ಟಿಲ್ಲ. ಸದ್ಯ ರಾಜಕೀಯದಲ್ಲೂ ಸಕ್ರಿಯರಾಗಿರುವ ನಿಖಿಲ್‌ ಜಿಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.