Nishvika Naidu Photos : ಸ್ಯಾಂಡಲ್‌ವುಡ್‌ ಕ್ಯೂಟ ಹುಡುಗಿ ನಿಶ್ವಿಕಾ ನಾಯ್ಡು ಯಾವ ಬಟ್ಟೆ ಹಾಕಿದ್ರೂ ಸಹ ಮುದ್ದಾಗಿ ಕಾಣ್ತಾರೆ. ಅದಕ್ಕೆ ಕಾರಣ ಅವರಿಗಿರುವ ಆರೋಗ್ಯದ ಕಾಳಜಿ. ಫಿಟ್‌ನೆಸ್‌ ಬಗ್ಗೆ ತುಂಬಾ ಕ್ರೇಜ್‌ ಹೊಂದಿರುವ ಅವರು ದಿನನಿತ್ಯವೂ ತಪ್ಪದೆ ಯೋಗಾಸನ ಮತ್ತು ಜಿಮ್‌ಗೆ ಹೋಗ್ತಾರೆ. ಇದೀಗ ವಿವಿಧ ಭಂಗಿಯಲ್ಲಿ ಮೈ ಬೆಂಡಾಗಿಸಿರುವ ನಿಶ್ವಿಕಾ ಈ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟಿ ನಿಶ್ವಿಕಾ ನಾಯ್ಡು ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ʼಆಣೆ ಮಾಡಿ ಹೇಳುತೀನಿʼ ಅಂತ ಕನ್ನಡಿಗರ ಹೃದಯ ಸೆಳೆದ ಚೆಲುವೆ ಗುರು ಶಿಷ್ಯರು ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಗಮನಸೆಳೆದಿದ್ದರು. ಇನ್ನು ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ನಿಶ್ವಿಕಾ ದಿನನಿತ್ಯ ವ್ಯಾಯಾಮ ಮಾಡುತ್ತಾರೆ.


ಇದನ್ನೂ ಓದಿ: ಸಿನಿಮಾಗಿಂತ ರೋಚಕವಾಗಿದೆ ವಸಿಷ್ಠ ಸಿಂಹ- ಹರಿಪ್ರಿಯಾ ಲವ್ ಸ್ಟೋರಿ..


ಅಭಿಮಾನಿಗಳ ಜೊತೆ ಸೋಷಿಯಲ್‌ ಮೀಡಿಯಾ ಮೂಲಕ ಟಚ್‌ನಲ್ಲಿರುವ ಅವರಿಗಾಗಿ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಾವು ಯೋಗಾಸನ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೊನ್ನೆಯಷ್ಟೇ ನಿಶ್ವಿಕಾ ಹಸಿರು ಸೀರೆಯುಟ್ಟು ಹೂ ಮುಡಿದು ಪಕ್ಕದ ಮನೆ ಹುಡುಗಿಯಂತೆ ತಯಾರಾಗಿದ್ದ ಫೋಟೋಸಗಳನ್ನು ಹಂಚಿಕೊಂಡಿದ್ದರು.Kichcha Sudeep Dog Love: ಕಿಚ್ಚನ ಶ್ವಾನ ಪ್ರೀತಿ, ನೆಟ್ಟಿಗರ ಮನಗೆದ್ದ ಸುದೀಪ್‌


ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಅಭಿನಯಿಸಿದ ನಿಶ್ವಿಕಾ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂತು. ನಿಶ್ವಿಕಾ ಗ್ಲಾಮರ್‌ ಮತ್ತು ನಟನೆ ಸಿನಿಮಾದ ಸೆಂಟರ್‌ ಅಟ್ರ್ಯಾಕ್ಷನ್‌ ಅಂದ್ರೆ ತಪ್ಪಾಗಲ್ಲ. ಅಲ್ಲದೆ, ದಿಲ್‌ ಪಸಂದ್‌ನಲ್ಲಿ ಮಂಗ್ಲಿ ಹಾಡಿದ ʼರಾಮಾ ರಾಮಾ..ʼ ಹಾಡು ಸೂಪರ್​ ಹಿಟ್​ ಆಗಿದೆ. ಈ ಹಾಡಿನಲ್ಲಿ ನಿಶ್ವಿಕಾ ಸಖತ್‌ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ ಮುಂದಿನ ಸಿನಿಮಾ ಯಾವುದು ಎಂದು ಇನ್ನೂ ತಿಳಿದು ಬಂದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.