Kichcha Sudeep Dog Love: ಕಿಚ್ಚ ಸುದೀಪ್ ಅನೇಕ ಬಾರಿ ತಮ್ಮ ಸಮಾಜಮುಖಿ ಕೆಲಸದ ಮೂಲಕ ಮಾದರಿಯಾಗುತ್ತಾರೆ. ಅವರ ಮಾನವೀಯ ಗುಣಗಳನ್ನು ಮೆಚ್ಚಿದವರು ಅನೇಕರು. ಇದೀಗ ಸುದೀಪ್ ಅವರ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದರಲ್ಲಿ ಸುದೀಪ್ ಮಾಡಿದ ಕಾರ್ಯ ಪ್ರತಿಯೊಬ್ಬರಿಗೂ ಮಾದರಿ. ಕಿಚ್ಚನ ಮುಗ್ಧ ಮನಸ್ಸನ್ನು ಈ ವಿಡಿಯೋದಲ್ಲಿ ಕಾಣಬಹುದು. ನಾಯಿಗಳನ್ನು ಅನೇಕ ಜನ ಇಷ್ಟ ಪಡುತ್ತಾರೆ. ಆದರೆ ಬೀದಿ ನಾಯಿಗಳ ಮೇಲೆ ಹಲವರಿಗೆ ತಾತ್ಸಾರ ಜಾಸ್ತಿ. ಅವುಗಳನ್ನು ಕಂಡರೆ ಹೊಡೆದೋಡಿಸುವವರೇ ಹೆಚ್ಚು. ಕರೆದು ತುತ್ತು ಅನ್ನ ನೀಡುವ ದೊಡ್ಡ ಗುಣ ಕೆಲವರಲ್ಲಿ ಮಾತ್ರ ಕಾಣಬಹುದು. ಅದೇ ಹೃದಯವಂತಿಕೆಯನ್ನ ಈಗ ಸುದೀಪ್ ಅವರಲ್ಲೂ ಕಂಡು ನೆಟ್ಟಿಗರು ಮೆಚ್ಚಿದ್ದಾರೆ.
ಇದನ್ನೂ ಓದಿ : Alia Bhatt: "ನಾನು ರಣಬೀರ್ ಹಾಸಿಗೆಯ ಮೇಲೆ..." ಬೆಡ್‌ರೂಮ್ ರಹಸ್ಯ ಬಿಚ್ಚಿಟ್ಟ ಆಲಿಯಾ!
ಕಿಚ್ಚ ಸುದೀಪ್ ಬೀದಿ ನಾಯಿಗಳ ಮೇಲೆ ತೋರಿಸುವ ಪ್ರೀತಿಯ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಕ್ರಿಕೆಟ್ ಮೈದಾನದಲ್ಲಿ ಬಂದಿದ್ದ ಬೀದಿ ನಾಯಿ ಜೊತೆ ಸುದೀಪ್ ಇರುವ ವಿಡಿಯೋ ಇದಾಗಿದೆ. ಇದೇ ವಿಡಿಯೋ ಈಗ ಎಲ್ಲರ ಗಮನಸೆಳೆಯುತ್ತಿರುವುದು. ಈ ಪುಟ್ಟ ವಿಡಿಯೋ ಮೂಲಕ ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ ಎಂಬ ಸಂದೇಶ ನೀಡಿದ್ದಾರೆ ಕಿಚ್ಚ.
Baadshah @KicchaSudeep 👑#KicchaSudeep #KicchaSudeep𓃵 pic.twitter.com/YD4rCpUXpm
— ʙᴀᴀᴅsʜᴀʜᵏⁱᶜᶜʰᵃ👑 (@BaadshahDHF) December 6, 2022
ಬೆಂಗಳೂರಿನ ನೆಲಮಂಗಲದ ಆದಿತ್ಯ ಗ್ಲೋಬಲ್ ಮೈದಾನದಲ್ಲಿ ಲೆಜೆಂಡ್ರಿ ಕ್ರಿಕೆಟ್ ಕಪ್ ಪಂದ್ಯಾವಳಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಕನ್ನಡದ ಸ್ಟಾರ್ ನಟರು ಸಹ ಭಾಗಿಯಾಗಿದ್ದಾರೆ. ಇಲ್ಲಿ ಕ್ರಿಕೆಟ್‌ನ್ನು ಆರಾಧಿಸುವ ಕಿಚ್ಚ ಸುದೀಪ್ ಕೂಡ ಇದ್ದಾರೆ. ಮೈದಾನಕ್ಕೆ ಬಂದ ಬಿಳಿ ಬೀದಿ ನಾಯಿಯೊಂದು ಸುದೀಪ್ ಕಣ್ಣಿಗೆ ಬಿದ್ದಿದೆ. ಈ ಶ್ವಾನವನ್ನು ಕಂಡ ಕಿಚ್ಚ ಸುದೀಪ್, ಬೌಂಡ್ರಿ ಲೈನ್‌ನಲ್ಲಿ ನಾಯಿಯ ಮೇಲೆ ಮಮತೆ ತೋರಿದ್ದಾರೆ.
ಇದನ್ನೂ ಓದಿ : Deepika Padukone: ದೀಪಿಕಾ ಪಡುಕೋಣೆ ಹಾಟ್ ಪಿಕ್... ಪಡ್ಡೆ ಹೈಕ್ಳಿಗೆ ಜಾಗರಣೆ ಪಕ್ಕಾ!
ಮೈದಾನಕ್ಕೆ ಬಂದ ನಾಯಿಗೆ ಬಿಸ್ಕತ್ತು, ಬ್ರೆಡ್ ಹೀಗೆ ಏನೋ ಒಂದನ್ನು ತಿನ್ನಲು ನೀಡಿದ್ದಾರೆ. ಅದು ಕೂಡ ಸುಮ್ಮನೆ ನೆಲಕ್ಕೆ ಹಾಕಿ ಹೋಗಿಲ್ಲ, ಬದಲಾಗಿ ತಾವೇ ಕುಳಿತು ನಾಯಿಗೆ ಪ್ರೀತಿಯಿಂದ ಅದನ್ನು ತಿನ್ನಿಸಿದ್ದಾರೆ. ನಾಯಿ ಕೂಡ ಕಿಚ್ಚನ ಕೈಯಿಂದ ಸಂತೋಷವಾಗಿಯೇ ಊಟ ಮಾಡಿದೆ. ಹತ್ತಿರದಲ್ಲಿದ್ದ ಯಾರೋ ಒಬ್ಬರು ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಸದ್ಯ ಕಿಚ್ಚನ ಈ ಶ್ವಾನ ಪ್ರೀತಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೇ ಬೀದಿನಾಯಿಯನ್ನು ಹೇಗೆ ಟ್ರೀಟ್ ಮಾಡಬೇಕೆಂಬ ರೀತಿಯನ್ನು ಸಿಂಪಲ್ ಆಗಿ ಕಿಚ್ಚ ಸಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.