ZEE Exclusive:ಸುಶಾಂತ್ ಸಿಂಗ್ ರಾಜ್ಪುತ್ ಅವರ ವಿಸರಾ ವರದಿ ಬಹಿರಂಗ... ವರದಿಯಲ್ಲೇನಿದೆ ?
AIIMS ನೀಡಿರುವ ಈ ವರದಿಯಲ್ಲಿ ವಿಶೇಷ ಮಾಹಿತಿ ಬಹಿರಂಗಗೊಂಡಿದೆ.
ಮುಂಬೈ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಸಾವು ಪ್ರಕರಣದಲ್ಲಿ ಏಮ್ಸ್ ಆಸ್ಪತ್ರೆಯ ಫಾರೆನ್ಸಿಕ್ ತಂಡ, ಸಿಬಿಐ ತಂಡ ಹಾಗೂ CFSLನ ತಜ್ಞರ ನಡುವೆ ನಿನ್ನೆ ಸಭೆಯೊಂದು ನಡೆದಿದೆ. ಈ ಸಭೆಯಲ್ಲಿ ಏಮ್ಸ್ ನಡೆಸಿರುವ ಫಾರೆನ್ಸಿಕ್ ತನಿಖೆಯವರದಿಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಇನ್ನೊಂದೆಡೆ ಈ ವರದಿಗೆ ಸಂಬಂಧಿಸಿದಂತೆ ನಮ್ಮ ಸಹಯೋಗಿ ವೆಬ್ ಸೈಟ್ ಝೀ ನ್ಯೂಸ್ ಗೆ ದೊಡ್ಡ ಮಾಹಿತಿಯೊಂದು ಲಭಿಸಿದೆ. ಏಕೆಂದರೆ ಸುಶಾಂತ್ ಸಿಂಗ್ ರಾಜ್ಪುತ್ ಅವರ ವಿಸರಾ ವರದಿಯಲ್ಲಿ ಈ ಸತ್ಯಾಂಶ ಬಹಿರಂಗಗೊಂಡಿದೆ.
ಇದನ್ನು ಓದಿ- Sushant Singh Rajput ಸಾವು ಹತ್ಯೆಯೋ ಅಥವಾ ಆತ್ಮಹತ್ಯೆಯೋ? CBIಗೆ ವರದಿ ಸಲ್ಲಿಸಿದ AIIMS
AIIMS ಮೂಲಗಳು ನೀಡಿರುವ ಮಾಹಿತ ಪ್ರಕಾರ ಸುಶಾಂತ್ ಸಿಂಗ್ ಅವರ ವಿಸರಾ ವರದಿಯಲ್ಲಿ ಸುಶಾಂತ್ ಅವರ ಶರೀರದಲ್ಲಿ ವಿಷ ಸೇವನೆಯ ಕುರಿತು ಯಾವುದೇ ಅಂಶ ಪತ್ತೆಯಾಗಿಲ್ಲ. ಸಿಬಿಐ ವರ್ತಿ ತನ್ನ ಅಂತಿಮ ಹಂತದಲ್ಲಿದೆ. ಏಮ್ಸ್ ನ ಫಾರೆನ್ಸಿಕ್ ಸೈನ್ಸ್ ವಿಭಾಗ ಹಾಗೂ ಸಿಎಫ್ ಎಸ್ ಎಲ್ ನ ಫೈಂಡಿಂಗ್ ಸಾಕಷ್ಟು ಸಾಮ್ಯತೆಯನ್ನು ಒಳಗೊಂಡಿದೆ. ಅವಶ್ಯ ಎನಿಸಿದರೆ ಸಿಬಿಐ ಸುಶಾತ್ ಅವರ ಕುಟುಂಬ ಸದಸ್ಯರ ತನಿಖೆ ಕೂಡ ನಡೆಸಲಿದೆ.
ಇದನ್ನು ಓದಿ- ಫುಡ್ ಡಿಲೇವರಿ ಹೆಸರಿನಲ್ಲಿ ಮುಂಬೈನಲ್ಲಿ ಡ್ರಗ್ಸ್ ಪೂರೈಕೆ... Bollywood ಜೊತೆಗೆ ನಂಟು
ಸುಶಾಂತ್ ಜೋತೆಗಿರುವ ಜನರು ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. FIR ನಲ್ಲಿ ಹೆಸರಿಸಲಾಗಿರುವ ಯಾವುದೇ ವ್ಯಕ್ತಿಗೆ ಇದುವರೆಗೂ ಕ್ಲೀನ್ ಚಿಟ್ ನೀಡಲಾಗಿಲ್ಲ. ಕೂಪರ್ ಆಸ್ಪತ್ರೆಯ ವೈದ್ಯರಿಗೂ ಕೂಡ ಕ್ಲೀನ್ ಚಿಟ್ ನೀಡಲಾಗಿಲ್ಲ.