ಫುಡ್ ಡಿಲೇವರಿ ಹೆಸರಿನಲ್ಲಿ ಮುಂಬೈನಲ್ಲಿ ಡ್ರಗ್ಸ್ ಪೂರೈಕೆ... Bollywood ಜೊತೆಗೆ ನಂಟು

ಪ್ರಸ್ತುತ ಮುಂಬೈ ಪ್ಲೀಸರು ಕೂಡ ಡ್ರಗ್ಸ್ ಪ್ರಕರಣದಲ್ಲಿ ಕಾರ್ಯತತ್ಪರರಾಗಿದ್ದು, ಕಳೆದ ಎರಡು ದಿನಗಳಿಂದ ನಡೆಸಲಾಗುತ್ತಿರುವ ನಿರಂತರ ದಾಳಿಯಲ್ಲಿ ಮೂವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ.

Last Updated : Sep 27, 2020, 06:20 PM IST
  • ಫುಡ್ ಡೆಲಿವರಿ ಹೆಸರಿನಲ್ಲಿ ಮುಂಬೈನಲ್ಲಿ ಡ್ರಗ್ಸ್ ಸಪ್ಪ್ಲೈ
  • ಕಾರ್ಯತತ್ಪರರಾದ ಮುಂಬೈ ಕ್ರೈಂ ಬ್ರಾಂಚ್, ಮೂವರು ಆರೋಪಿಗಳ ಬಂಧನ.
  • ಹಲವು ಬಾಲಿವುಡ್ ನಟ-ನಟಿಯರಿಗೆ ಡ್ರಗ್ಸ್ ಸಪ್ಪ್ಲೈ ಮಾಡಿರುವುದನ್ನು ಒಪ್ಪಿಕೊಂಡ ಪೆಡ್ಲರ್ ಗಳು.
ಫುಡ್ ಡಿಲೇವರಿ ಹೆಸರಿನಲ್ಲಿ ಮುಂಬೈನಲ್ಲಿ ಡ್ರಗ್ಸ್ ಪೂರೈಕೆ... Bollywood ಜೊತೆಗೆ ನಂಟು title=

ಮುಂಬೈ: ಹೆಸರಾಂತ ಫುಡ್ ಡೆಲಿವರಿ (Food Delivary) ಕಂಪನಿಯ ಹೆಸರನ್ನು ಬಳಸಿಕೊಂಡು ಡ್ರಗ್ಸ್ ಪೂರೈಕೆ ಕುರಿತು ಮಾಹಿತಿ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ 5 ಲಕ್ಷ ರೂ ಮೌಲ್ಯದ ಡ್ರಗ್ಸ್ ಕೂಡ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಇವರು ಬಾಲಿವುಡ್ ತಾರೆಯರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಇವರು ಕೆಲ ಖ್ಯಾತನಾಮರ ಹೆಸರುಗಳನ್ನು ಸಹ ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ- ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡಿದ್ದನ್ನು ಒಪ್ಪಿಕೊಂಡ ನಟಿ ಸಾರಾ ಅಲಿ ಖಾನ್

ಬಾಲಿವುಡ್ ಡ್ರಗ್ಸ್ ಲೋಕದ ಕುರಿತು ನೂತನ ಮಾಹಿತಿ ಬಹಿರಂಗ
ಎನ್‌ಸಿಬಿ ನಡೆಸುತ್ತಿರುವ ನಿರಂತರ ದಾಳಿಗಳಿಂದ ಡ್ರಗ್ಸ್ ಪೆಡ್ಲರ್ ಹಾಗೂ ಅವರ ಗ್ರಾಹಕರಲ್ಲಿ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ. ಇದೇ ವೇಳೆ ಡ್ರಗ್ಸ್ ವ್ಯವಹಾರದಲ್ಲಿ ತೊಡಗಿರುವ ಬಾಲಿವುಡ್ ಸೆಲೆಬ್ರಿಟಿಗಳು ಸಹ ಇದೀಗ ಬುಕ್ ಆಗಲಾರಂಭಿಸಿದ್ದಾರೆ, ಪ್ರಸ್ತುತ ಮುಂಬೈ ಪೊಲೀಸರು ಕೂಡ ಈ ಪ್ರಕರಣದಲ್ಲಿ ಕಾರ್ಯತತ್ಪರರಾಗಿದ್ದು  ಕಳೆದ  2 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಯಲ್ಲಿ ಇದುವರೆಗೆ 3 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ.

ಇದನ್ನು ಓದಿ- Drugs Case: ಕರೀಷ್ಮಾ ಜೊತೆಗೆ ಡ್ರಗ್ಸ್ ಚಾಟ್ ನಡೆಸಿರುವುದಾಗಿ ಒಪ್ಪಿಕೊಂಡ Deepika Padukone

ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ ಕ್ರೈಂ ಬ್ರಾಂಚ್
ಮುಂಬೈ ಅಪರಾಧ ವಿಭಾಗವು ಆಹಾರ ಪದಾರ್ಥಗಳನ್ನು ಡೆಲಿವರಿ ಮಾಡುವ ವ್ಯಕ್ತಿಯೋರ್ವನನ್ನು ಬಂಧಿಸಿದ್ದು, ಉಸ್ಮಾನ್ ಅಲಿ ಹೆಸರಿನ ಈ ವ್ಯಕ್ತಿಯ ಬಳಿಯಿಂದ  ಐದಾರು ಲಕ್ಷ ರೂಪಾಯಿಗಳ MD ಮಾದಕ ಪದಾರ್ಥ ವಶಕ್ಕೆ ಪಡೆಯಲಾಗಿದೆ. ಇದೇ ರೀತಿ ಅಬು ಸುಫಿಯಾನ್ ಎಂಬ ಇನ್ನೊಬ್ಬ ಆರೋಪಿ ಬಂಧಿಸಲ್ಪಟ್ಟಿದ್ದು, ಈತ ಉಸ್ಮಾನ್ ಅಲಿಗೆ  ಡ್ರಗ್ಸ್ ನೀಡುತ್ತಿದ್ದ ಎನ್ನಲಾಗಿದೆ.

ಈ ಇಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಇವರ ಬಳಿಯಿಂದ ಮಹತ್ವದ ಮಾಹಿತಿ ಬಹಿರಂಗಗೊಂಡಿದೆ. ಈ ಇಬ್ಬರು ನಗರದ ಒಶಿವರಾ ಮತ್ತು ಇತರೆ ಐಷಾರಾಮಿ ಪ್ರದೇಶಗಳಲ್ಲಿ ಡ್ರಗ್ಸ್ ಪೂರೈಸುತ್ತಿರುವುದಾಗಿ ಹೇಳಿದ್ದಾರೆ. ಇವರ ಜೊತೆ ಕೆಲ ನಟ-ನಟಿಯರು ಕೂಡ ಸಂಪರ್ಕದಲ್ಲಿರುವ ಕುರಿತು ಇಬ್ಬರು ಒಪ್ಪಿಕೊಂಡಿದ್ದು ಅವರಿಗೂ ಕೂಡ ಇವರು ಮಾದಕ ಪದಾರ್ಥ ಪೂರೈಸುತ್ತಿದ್ದರು ಎನ್ನಲಾಗಿದೆ.

ಇದನ್ನು ಓದಿ- ವಿವಾದಾತ್ಮಕ ಔತಣಕೂಟದ ಕುರಿತು ಹೇಳಿಕೆ ನೀಡಿದ Karan Johar

ಡ್ರಗ್ಸ್ ನ ಈ ದಂಧೆಗೆ ಅಂತ್ಯ ಹಾಡಲು ಇದೀಗ ಮುಂಬೈ ಪೊಲೀಸರು ಕೂಡ ಕಟಿಬದ್ಧರಾಗಿದ್ದಾರೆ ಎಂಬುದು ಇದರಿಂದ ಸಾಬೀತಾಗುತ್ತದೆ . ಶನಿವಾರ ಸಮತಾನಗರ ಪೋಲೀಸರು ಕೂಡ ಈ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Trending News