Bollywood: ಆಲಿಯಾ ಭಟ್ ಅಲ್ಲ.. ಈ ಖ್ಯಾತ ನಟಿಯನ್ನು ಮದುವೆಯಾಗಲು ಬಯಸ್ಸಿದ್ದರಂತೆ ರಣಬೀರ್ ಕಪೂರ್!!
Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್ 2022 ರಲ್ಲಿ ಆಲಿಯಾ ಭಟ್ ಅವರನ್ನು ವಿವಾಹವಾದರು. ಅವರ ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ ರಣಬೀರ್ ತನ್ನ ಲವ್ ಲೈಫ್ ನಿಂದ ಸುದ್ದಿಯಾಗಿದ್ದ ಕಾಲವೊಂದಿತ್ತು. ಅವರು ಬಾಲಿವುಡ್ನ ಟಾಪ್ ನಟಿಯರಾದ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ.
Bollywood Star Ranbir Kapoor: ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಅವರ ಸಂಬಂಧವು ಸ್ವಲ್ಪ ಸಮಯದವರೆಗೆ ಇತ್ತು ಆದರೆ ನಂತರ ಇಬ್ಬರೂ ಬೇರ್ಪಟ್ಟರು. ಇಬ್ಬರೂ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಯೋಚಿಸಲಾರಂಭಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಇದಾದ ನಂತರ ಅವರ ಹೆಸರು ದೀಪಿಕಾ ಪಡುಕೋಣೆ ಜೊತೆ ಸೇರಿಕೊಂಡಿತ್ತು. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.
ರಣಬೀರ್ ಕಪೂರ್ ಸಹೋದರಿ ಕರಿಷ್ಮಾ ಕಪೂರ್ಗೆ ದೀಪಿಕಾ, ಕತ್ರಿನಾ ಅಥವಾ ಆಲಿಯಾ ಭಟ್ ಇವರರ್ಯಾರು ಇಷ್ಟವಿರಲಿಲ್ಲ.. ಆದರೆ ಅವರೆಲ್ಲರು ಕಪೂರ್ ಕುಟುಂಬದ ಸೊಸೆಯಾಗಬೇಕೆಂದು ಬಯಸಿದ್ದರು. ಆದರೆ ಕರಿಷ್ಮಾ ಅವರು ಸೋನಂ ಕಪೂರ್ ರಣಬೀರ್ ಕಪೂರ್ ಮದುವೆಯಾಗಬೇಕು ಎಂದು ಬಯಸಿದ್ದರಂತೆ... ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್‌ನಲ್ಲಿ ಇದನ್ನು ಸ್ವತಃ ಸೋನಮ್ ಹೇಳಿಕೊಂಡಿದ್ದರು..
ಇನ್ನು ಸಾವರಿಯಾ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಸೋನಂ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ... ಇದಾದ ನಂತರ ಇವರಿಬ್ಬರ ಸಂಬಂಧದ ಸುದ್ದಿಗಳು ಹರಿದಾಡತೊಡಗಿದವು. ಈಗ ರಣಬೀರ್ ತನ್ನ ಜೀವನದಲ್ಲಿ ಮುಂದೆ ಸಾಗಿದ್ದಾರೆ ಮತ್ತು ಆಲಿಯಾ ಜೊತೆಗಿನ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.