ileana D'Cruz: ಈಗ ಹೀರೋ ಮತ್ತು ಹೀರೋಯಿನ್‌ಗಳಿಗೆ ಕೋಟಿಗಟ್ಟಲೆ ಸಂಭಾವನೆ ನೀಡಲಾಗುತ್ತಿದೆ. ಅದರಲ್ಲೂ ನಟಿಯರಿಗಂತೂ ಕೋಟ್ಯಂತರ ರೂಪಾಯಿ ಸಂಭಾವನೆ ಕಾಮನ್ ಆಗಿಬಿಟ್ಟಿದೆ. ಬಾಲಿವುಡ್‌ನಲ್ಲಿ ನಾಯಕಿಯರು 10 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ಭಾರತೀಯ ಚಿತ್ರರಂಗದಲ್ಲಿ ಕೋಟ್ಯಂತರ ರೂಪಾಯಿ ತೆಗೆದುಕೊಂಡ ಮೊದಲ ನಾಯಕಿ ಶ್ರೀದೇವಿ. ಆದರೆ ಟಾಲಿವುಡ್ ನಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಯಾರು ಗೊತ್ತಾ?


COMMERCIAL BREAK
SCROLL TO CONTINUE READING

ಆ ನಟಿ ಬೇರೆ ಯಾರೂ ಅಲ್ಲ ಗೋವಾ ಬ್ಯೂಟಿ ಇಲಿಯಾನಾ. ದೇವದಾಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇಲಿಯಾನಾ, ಮಹೇಶ್ ಬಾಬು ಜೊತೆ ನಟಿಸಿದ ಎರಡನೇ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಆಗಿತ್ತು. ಆ ಸಮಯದಲ್ಲಿ ಝೀರೋ ಸೈಜ್ ಜನಪ್ರಿಯವಾಗಲು ಕಾರಣ ಇಲಿಯಾನಾ.  


ಇದನ್ನೂ ಓದಿ-ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?  


ತರ್ನಾಕ್ ಸಿನಿಮಾದಲ್ಲಿ ರವಿತೇಜ ಎದುರು ಇಲಿಯಾನಾ ನಟಿಸಿದ್ದರು. ಈ ಚಿತ್ರಕ್ಕಾಗಿ ಇಲಿಯಾನಾ ರು.1 ಕೋಟಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆ ಸಮಯದಲ್ಲಿ ನಾಯಕಿಯೊಬ್ಬಳಿಗೆ ಒಂದು ಕೋಟಿ ರೂಪಾಯಿ ಸಂಭಾವನೆ ನೀಡಿದ್ದು ಇದೇ ಮೊದಲು. ಇದರಿಂದ ಇಲಿಯಾನಾ ಹಾಗೂ ಖತರ್ನಾಕ್ ಸಿನಿಮಾ ಆಗ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಖತರ್ನಾಕ್ ಚಿತ್ರ ಭಾರೀ ಫ್ಲಾಪ್ ಆಗಿತ್ತು.  


ಸದ್ಯ ಇಲಿಯಾನಾ ಸಿನಿಮಾ ಮಾಡುತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ ಸದ್ಯಕ್ಕೆ ತನ್ನ ಗಂಡು ಮಗು ಮತ್ತು ಸಂಗಾತಿಯೊಂದಿಗೆ ವಿದೇಶದಲ್ಲಿದ್ದಾರೆ.  


ಇದನ್ನೂ ಓದಿ-ಸಿನಿರಂಗಕ್ಕೆ ಪ್ರವೇಶಿಸುವ ಮುನ್ನ ಐಶ್ವರ್ಯ ರೈ ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ? ಐಶ್‌ ಲಕ್‌ ಬದಲಿಸಿದ್ದು ʼಆʼ ಜಾಹೀರಾತು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.